ಕಿಸಾನ್ ಟ್ರ್ಯಾಕ್ಟರ್ ಯೋಜನೆಯಡಿ ರೈತರಿಗೆ ಶೇ. 50 ರಷ್ಟು ಸಬ್ಸಿಡಿ ಇಲ್ಲಿದೆ ಮಾಹಿತಿ

Written by Ramlinganna

Published on:

Kisan Tractor scheme subsidy : ರೈತರು ಆಧುನಿಕ ತಂತ್ರಜ್ಞಾನ ಬಳಸಿ ಸ್ವಾವಲಂಬಿಯಾಗಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ.

ಹೌದು, ರೈತರಿಗಾಗಿಯೇ  ಕಿಸಾನ್ ಟ್ರ್ಯಾಕ್ಟರ್ ಯೋಜನೆಯನ್ನು ಜಾರಿಗೆ ತಂದಿದೆ. ಅಂದರೆ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಅಡಿಯಲ್ಲಿ ರೈತರು ಅರ್ಜಿ ಸಲ್ಲಿಸಿ ಶೇ. 50 ರಷ್ಟು ಸಬ್ಸಿಡಿ ಪಡೆಯಬಹುದು ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.

ಪ್ರತಿಯೊಬ್ಬ ರೈತರಿಗೂ ಸ್ವಂತ ಟ್ರ್ಯಾಕ್ಟರ್ ಇರಬೇಕು ಎಂಬ ಕನಸು ಇರುತ್ತದೆ. ಆದರೆ ಈ ಕನಸನ್ನು ನನಸಾಗಿಸುವುದಕ್ಕೆ ರೈತರ ಬಳಿ ಅಷ್ಟೊಂದು ಹಣವಿರುವದಿಲ್ಲ. ಹಾಗಾಗಿ ಅವರ ಕನಸು ಕನಸಾಗಿಯೇ ಉಳಿಯುತ್ತದೆ. ರೈತರ ಕನಸನ್ನು ನನಸು ಮಾಡುವುದಕ್ಕಾಗಿ ಕಿಸಾನ್ ಟ್ರ್ಯಾಕ್ಟರ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಕೇಂದ್ರ ಸರ್ಕಾರವು ಸಬ್ಸಿಡಿ ನೀಡುತ್ತದೆ.ಒಂದು ವೇಳೆ ಟ್ರ್ಯಾಕ್ಟರ್ ಬೆಲೆ 10 ಲಕ್ಷ ರೂಪಾಯಿ ಇದ್ದರೆ ಅದಕ್ಕೆ ಕೇಂದ್ರ ಸರ್ಕಾರವು 5 ಲಕ್ಷ ರೂಪಾಯಿ ಸಬ್ಸಿಡಿ ನೀಡುತ್ತದೆ.

ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದಕ್ಕಾಗಿ ಜಾರಿಗೆ ತಂದ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಹಣಕಾಸಿನ ನೆರವು ಒದಗಿಸಲಾಗುವುದು. ಎಲ್ಲಾ ವರ್ಗದ ರೈತರು ಈ ಯೋಜನಯ ಲಾಭವನ್ನು ಪಡೆಯಬಹುದು. ರೈತರು ಆಧುನಿಕ ಕೃಷಿ ಉಪಕರಣಗಳನ್ನು ಸುಲಭವಾಗಿ ಒದಗಿಸುವ ಗುರಿಯನ್ನು ಹೊಂದಿದೆ. ಕೃಷಿ ಯಾಂತ್ರೀಕರಣದ ಉಪ ಮಿಷನ್ (ಎಸ್.ಎಂಎಎಂ) ಅಡಿಯಲ್ಲಿ ಕಿಸಾನ್ ಟ್ರ್ಯಾಕ್ಟರ್ ಯೋಜನೆಯನ್ನು ಜಾರಿ ಮಾಡಲಾಗಿದ್ದು, ಇದೊಂದು ಉಪ ಯೋಜನೆಯಾಗಿದೆ.

Kisan Tractor scheme subsidy ರೈತರಿಗೆ ಸಬ್ಸಿಡಿ ಎಷ್ಟು ಸಿಗುತ್ತದೆ?

ಕಿಸಾನ್ ಟ್ರ್ಯಾಕ್ಟರ್ ಯೋಜನೆ ಅಡಿಯಲ್ಲಿ ರೈತರಿಗೆ ಹೊಸ ಟ್ರ್ಯಾಕ್ಟರ್ ಅನ್ನು ಆನ್ ರೋಡ್ ಬೆಲೆಯ ಮೇಲೆ ಶೇ. 50 ರಷ್ಟು ಸಬ್ಸಿಡಿ  ನೀಡಲಾಗುವುದು. ಈ ಯೋಜನೆಯು ಸಣ್ಣ ಮತ್ತು ಅತೀ ಸಣ್ಣ ರೈತರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ, ಕೃಷಿ ಕ್ಷೇತ್ರದಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಲು ಯಾಂತ್ರೀಕೃತ ಉಪಕರಣಗಳ ಬಳಕೆಯನ್ನು ಉತ್ತೇಜಿಸುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು

ಅರ್ಜಿ ಸಲ್ಲಿಸುವ ರೈತರು ಭಾರತದ ಪ್ರಜೆಯಾಗಿರಬೇಕು. ರೈತರ ವಾರ್ಷಿಕ ಆದಾಯ 2 ಲಕ್ಷ ರೂಪಾಯಿಗಿಂತ ಕಡಿಮೆ ಇರಬೇಕು. ಅರ್ಜಿದಾರರು ಈ ಹಿಂದೆ ಟ್ರ್ಯಾಕ್ಟರ್ ಸಬ್ಸಿಡಿ ಪಡೆದಿರಬಾರದು. ಒಂದು ಕುಟುಂಬಕ್ಕೆ ಈ ಯೋಜನೆಯಡಿಯಲ್ಲಿ ಒಂದು ಟ್ರ್ಯಾಕ್ಟರ್ ಸಬ್ಸಿಡಿ ಮಾತ್ರ ಸಿಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಯಾವುವು?

ಕಿಸಾನ್ ಟ್ರ್ಯಾಕ್ಟರ್ ಯೋಜನೆಯಡಿಯಲ್ಲಿ ಟ್ರ್ಯಾಕ್ಟರ್ ಖರೀದಗೆ ಆಧಾರ್ ಕಾರ್ಡ್ ಬೇಕಾಗುತ್ತದೆ. ಭೂ ಮಾಲಿಕತ್ವದ ಪುರಾವೆ (ಪಹಣಿ ಅತವಾ ಆರ್.ಟಿ.ಸಿ),  ಬ್ಯಾಂಕ್ ಪಾಸ್ ಬುಕ್ ಇರಬೇಕು.

ಇದನ್ನೂ ಓದಿ ಮೊಬೈಲ್ ನಲ್ಲೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೀಗೆ ಪಡೆಯಿರಿ

ನಿವಾಸಿ ಪ್ರಮಾಣ ಪತ್ರ ಇರಬೇಕು. ಟ್ರ್ಯಾಕ್ಟರ್ ದರಪಟ್ಟಿ ಅಂದರೆ ಕೊಟೇಶನ್ ಇರಬೇಕು. ಪಾಸ್ ಪೋರ್ಟ್ ಅಳತೆಯ ಫೋಟೋ ಬೇಕು. ಮೇಲೆ ತಿಳಿಸಿದ ದಾಖಾಲಾತಿಯೊಂದಿಗೆ ರೈತರು ಅರ್ಜಿ ಸಲ್ಲಿಸಬಹುದು.

ಅರ್ಜಿ ಎಲ್ಲಿ ಹೇಗೆ ಸಲ್ಲಿಸಬೇಕು?

ಕೇಂದ್ರ ಸರ್ಕಾರದ ಕಿಸಾನ್ ಟ್ರ್ಯಾಕ್ಟರ್ ಯೋಜನೆಗೆ ನೀವು ಆನ್ಲೈನ್ ಮತ್ತು ಆಫ್ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು.

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಈ

https://agrimachinery.nic.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವಾಗ ಯಾವುದೇ ಹಣ ಕೇಳಲಾಗುವುದಿಲ್ಲ. ರೈತರು ಅರ್ಜಿ ಸಲ್ಲಿಸುವಾಗ  ಮಾಹಿತಿಯನ್ನು ಸರಿಯಾಗಿ ಓದಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬೇಕು. ಅಥವಾ ಕೃಷಿ ಇಲಾಖೆಯಲ್ಲಿ ವಿಚಾರಿಸಿ ಅರ್ಜಿ ಸಲ್ಲಿಸಬಹುದು.  ಕಿಸಾನ್ ಟ್ರ್ಯಾಕ್ಟರ್ ಯೋಜನೆಯ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಬೇಕು.

Leave a Comment