ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಯಾವ ಪಾಠದಿಂದ ಯಾವ ಪ್ರಶ್ನೆ ಬರಲಿದೆ? ಇಲ್ಲಿದೆ ಮಾಹಿತಿ

Written by Ramlinganna

Published on:

SSLC Exam blueprint released : ಎಸ್ಎಸ್ಎಲ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗಿಲ್ಲಿದೆ ಸಂತಸದ ಸುದ್ದಿ. ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಗೆ ಬ್ಲೂ ಪ್ರಿಂಟ್ ಬಿಡುಗಡೆಯಾಗಿದೆ. ಹೌದು, ಈ ಬ್ಲೂ ಪ್ರಿಂಟ್ ಪ್ರಕಾರ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಯಾವ ಪಾಠದಿಂದ ಯಾವ ಯಾವ ಪ್ರಶ್ನೆಗಳು ಬರುತ್ತವೆ ಒಂದು ವಾಕ್ಯದಲ್ಲಿ ಯಾವ ಪಾಠದಿಂದ ಬರುತ್ತವೆ. ಎರಡು ಮೂರು ವಾಕ್ಯದ ಪ್ರಶ್ನೋತ್ತರಗಳು ಯಾವ ಪಾಠದಿಂದ ಬರುತ್ತದೆ. ಪದ್ಯ ಯಾವ ಪಾಠದಿಂದ ಬರುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ತಮಗೆಲ್ಲಾ ಗೊತ್ತಿದ್ದ ಹಾಗೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಫಲಿತಾಂಶದ ಅಂಕ 33ಕ್ಕೆ ಇಳಿಸಿದೆ. ಪರೀಕ್ಷಾ ಪ್ಯಾಟರ್ನ್ ಪ್ರಕಾರ ಎಷ್ಟು ಅಂಕಗಳು ಬರುತ್ತವೆ. ಇದರೊಂದಿಗೆ ಬ್ಲೂ ಪ್ರಿಂಟ್ ಡೌನ್ಲೋಡ್ ಹೇಗೆ ಮಾಡಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಬಹುದು.

SSLC Exam blueprint released : ಬ್ಲೂ ಪ್ರಿಂಟ್ ಡೌನ್ಲೋಡ್ ಮಾಡುವುದು ಹೇಗೆ?

ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಬ್ಲೂ ಪ್ರಿಂಟ್ ಡೌನ್ಲೋಡ್ ಮಾಡಲು ಈ

https://kseab.karnataka.gov.in/new-page/SSLC%202025-26%20Final%20Examination%20Subject-wise%20Blueprint/en

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಎಸ್ಎಸ್ಎಲ್ಸಿ 2025-26 ಫೈನಲ್ ಎಕ್ಸಾಮ್ ಸಬ್ಜೆಕ್ಟ್ ವೈಸ್ ಬ್ಲು ಪ್ರಿಂಟ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ  ವಿಷಯಗಳ ಪಟ್ಟಿ ಕಾಣಿಸುತ್ತದೆ. ಅಲ್ಲಿ ನಿಮಗೆ ಕನ್ನಡ, ಹಿಂದಿ ಇಂಗ್ಲೀಷ್ ಫರ್ಸ್ಟ್ ಲಾಂಗ್ವೆಜ್. ಸೆಕೆಂಡ್ ಲಾಂಗ್ವೆಜ್ ಹಾಗೂ ಥರ್ಡ್ ಲಾಂಗ್ವೆಜ್ ಪ್ರಕಾರ ಪಟ್ಟಿ ಕಾಣಿಸುತ್ತದೆ. ಇದರೊಂದಿಗೆ ವಿಜ್ಞಾನ, ಸಮಾಜ, ಗಣಿತ, ವಿಷಯಗಳ ಬ್ಲೂ ಪ್ರಿಂಟ್ ಸಹ. ಕನ್ನಡ ಮಾಧ್ಯಮ ಹಾಗೂ ಆಂಗ್ಲ ಮಾಧ್ಯಮದ ಬ್ಲೂ ಪ್ರಿಂಟ್ ಸಹ ಇದೆ.  ನೀವು ಇಂಗ್ಲೀಷ್ ಮಾಧ್ಯಮದವರು, ಅಥವಾ ಕನ್ನಡ ಮಾಧ್ಯಮದವರು ಎಂಬುದರ ಮೇಲೆ ನಿಮ್ಮ ಭಾಷೆ ಆಯ್ಕೆ ಮಾಡಿಕೊಳ್ಳಬೇಕು.

ಉದಾಹರಣೆಗೆ ನೀವು ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಯಾಗಿದ್ದರೆ ಕನ್ನಡ ವಿಷಯಿಂದ ಯಾವ ಯಾವ ಪಾಠಗಳಿಂದ ಪ್ರಶ್ನೆಗಳು ಬರುತ್ತವೆ ಎಂಬುದನ್ನು ಚೆಕ್ ಮಾಡಲು  ಈ

https://kseab.karnataka.gov.in/storage/pdf-files/33K.pdf

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕನ್ನಡ ವಿಷಯದ ಬ್ಲೂ ಪ್ರಿಂಟ್ ಓಪನ್ ಆಗುತ್ತದೆ. ಅಲ್ಲಿ ನಿಮಗೆ ಪಾಠಗಳ ಪಟ್ಟಿ ಕಾಣಿಸುತ್ತದೆ. ಅದರ ಮುಂದೆ ಒಂದು ವಾಕ್ಯದಲ್ಲಿ ಅಂದರೆ ಒಂದು ಅಂಕಗಳ ಪ್ರಶ್ನೆಗಳು ಯಾವ ಯಾವ ಪಾಠದಿಂದ ಬರುತ್ತವೆ. ಅದೇ ರೀತಿ ಎರಡು ಅಂಕಗಳ ಪ್ರಶ್ನೆಗಳು ಯಾವ ಯಾವ ಪಾಠದಿಂದ ಬರುತ್ತವೆ. 3 ಅಂಕಗಳ ಪ್ರಶ್ನೆಗಳು ಯಾವ ಯಾವ ಪಾಠದಿಂದ ಬರುತ್ತವೆ ನಾಲ್ಕು ಅಂಕಗಳ ಪ್ರಶ್ನೆಗಳು ಯಾವ ಯಾವ ಪಾಠದಿಂದ ಬರುತ್ತದೆ ಎಂಬ ಪಟ್ಟಿ ಕಾಣಿಸುತ್ತದೆ. ಈ ಆಧಾರದ ಮೇಲೆ ನೀವು ಪರೀಕ್ಷೆಗೆ ತಯಾರಿ ನಡೆಸಬಹುದು. ಪರೀಕ್ಷೆಗೆ ಕೇವಲ ಒಂದುವರೆ ತಿಂಗಳು ಉಳಿಯಿತು. ಈ ಕಡಿಮೆ ಅವಧಿಯಲ್ಲಿ ತಯಾರಿ ನಡೆಸಿಲ್ಲವಾದರೆ ಬ್ಲೂ ಪ್ರಿಂಟ್ ಪ್ರಕಾರ ಪರೀಕ್ಷೆಗೆ ತಯಾರಿ ನಡೆಸಿ ಹೆಚ್ಚಿನ ಅಂಕಗಳನ್ನು ಪಡೆಯಬಹುದು.

ಇದನ್ನೂ ಓದಿ ನೀವು ನಿಂತಿರುವ ಜಮೀನಿನ ಮಾಲಿಕರು ಯಾರಿದ್ದಾರೆ? ಹೀಗೆ ಚೆಕ್ ಮಾಡಿ

ಯಾವ ಯಾವ ಪಾಠದಿಂದ ಯಾವ ಪ್ರಶ್ನೆಗಳು ಬರುತ್ತವೆ ಎಂಬುದು ಅಲ್ಲಿ ಮಾಹಿತಿ ನೀಡಲಾಗಿದೆ. ಈ ಬ್ಲೂ ಪ್ರಿಂಟ್ ಪ್ರಕಾರವೇ ಮಾದರಿ ಪ್ರಶ್ನೆಗಳನ್ನು ಸಹ ಬಿಡುಗಡೆ ಮಾಡಲಾಗಿದೆ. ಈಗ ಎಸ್ಎಸ್ಎಲ್ಸಿ ಪೂರ್ವ ಸಿದ್ದತಾ ಪರೀಕ್ಷೆಗಳಲ್ಲಿಯೂ ಬ್ಲೂ ಪ್ರಿಂಟ್ ಪ್ರಕಾರವೇ ಪ್ರಶ್ನೆಗಳು ಬರುತ್ತಿವೆ.

ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಪಡೆಯುತ್ತಿಲ್ಲ ಹಾಗೂ ಅನುತ್ತೀರ್ಣರಾಗುತ್ತಿದ್ದಾರೆಂದು ಸರ್ಕಾರ ಬ್ಲೂಪ್ರಿಂಟ್ ಬಿಡುಗಡೆ ಮಾಡಿದೆ. ಶಾಲೆಗಳಲ್ಲಿಯೂ ಸಹ ಶಿಕ್ಷಕರು ಬ್ಲೂ ಪ್ರಿಂಟ್ ಪ್ರಕಾರವೇ ವಿದ್ಯಾರ್ಥಿಗಳಿಗೆ ತಯಾರಿ ನಡೆಸಲು ಮಾರ್ಗದರ್ಶನ ನೀಡುತ್ತಿದ್ದಾರೆ. ಆದರೆ  ವಾರ್ಷಿಕ ಪರೀಕ್ಷೆಯಲ್ಲಿ ಬ್ಲೂ ಪ್ರಿಂಟ್ ಪ್ರಕಾರ ಪ್ರಶ್ನೆಗಳು ಬಂದರೆ ಪ್ರಸಕ್ತ ಸಾಲಿನಲ್ಲಿ ಹೆಚ್ಚು ವಿದ್ಯಾರ್ಥಿಗಳು ಪಾಸ್ ಆಗುವ ಹಾಗೂ ಹೆಚ್ಚು ಅಂಕ ಪಡೆಯಲಿದ್ದಾರೆ. ಶೇಕಡವಾರು ಅಂಕಗಳು ಸಹ ಹೆಚ್ಚಾಗಲಿವೆ.

Leave a Comment