ನಿಮಗೇಕೆ ಬೆಳೆ ವಿಮೆ ಹಣ ಜಮೆಯಾಗುತ್ತಿಲ್ಲ? ಇಲ್ಲಿದೆ ನೋಡಿ ಮಾಹಿತಿ

Written by Ramlinganna

Published on:

crop insurance money credit : ಬೆಳೆ ವಿಮೆ ಮಾಡಿಸಿದ ರೈತರಿಗೆ ಬೆಳೆ ವಿಮೆ ಹಣ ಏಕೆ ಹಣ ಏಕೆ ಜಮೆಯಾಗುತ್ತಿಲ್ಲ ಎಂಬುದನ್ನು ಈಗ ಮೊಬೈಲ್ ನಲ್ಲೇ ತಿಳಿದುಕೊಳ್ಳಬಹುದು. ಹೌದು ರೈತ ಮಿತ್ರರೇ ನೀವು ಬೆಳೆ ವಿಮೆ ಮಾಡಿಸುತ್ತೀರಿ ಆದರೆ ಬೆಳೆ ವಿಮೆ ಹಣ ಏಕೆ ಜಮೆಯಾಗುತ್ತಿಲ್ಲ. ಯಾವ ಕಾರಣಕ್ಕಾಗಿ ಜಮೆಯಾಗುವುದಿಲ್ಲ. ಬೆಳೆ ವಿಮೆ ಹಣ ಜಮೆಯಾಗಲು ರೈತರೇನು ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ.

crop insurance money credit  ಬೆಳೆ ವಿಮೆ ಹಣ ಯಾವ ರೈತರಿಗೆ ಜಮೆಯಾಗುತ್ತದೆ?

ಬೆಳೆ ವಿಮೆ ಮಾಡಿಸಿದ ನಂತರ ರೈತರ ಬೆಳೆ ಪ್ರಕೃತಿ ವಿಕೋಪ, ಮಳೆ ಅಭಾವ, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಶೇ. 75 ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ಬೀಜಗಳು ಮೊಳಕೆಯೊಡೆಯುವುದು ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಠ ಶೇ. 25 ರಷ್ಟು ಪರಿಹಾರ ಹಣ ನೀಡಲಾಗುವುದು.

ಹವಾಮಾನ ವೈಪರೀತ್ಯಗಳಾದ ಹೆಚ್ಚಿನ ಮಳೆ ಪ್ರವಾಹಗಳಿಂದ ಬೆಳೆ ಮುಳುಗಡೆ, ದೀರ್ಘಕಾಲದ ತೇವಾಂಶ ಕೊರತೆ, ತೀವ್ರ ಬರಗಾಲದಿಂದ ಬಿತ್ತನೆಯಾದ ನಂತರ ಕಟಾವಿಗೆ ಮೊದಲು ನಿರೀಕ್ಷಿತ ಇಳುವರಿಯುವ ಶೇ. 50 ಕ್ಕಿಂತ ಕಡಿಮೆ ಇದ್ದರೆ ವಿಮೆ ಮಾಡಿಸಿದ ರೈತರಿಗೆ ವಿಮಾ ನಷ್ಟ ಪರಿಹಾರದಲ್ಲಿ ಶೇ. 25 ರಷ್ಟು ಹಣ ನೀಡಲಾಗುವುದು.

ಬೆಳೆ ವಿಮೆ ಹಣ ಜಮೆಯಾಗಲು ರೈತರೇನು ಮಾಡಬೇಕು?

ಬೆಳೆ ವಿಮೆ ಹಣ ಜಮೆಯಾಗಲು ರೈತರು ಪ್ರಕೃತಿ ವಿಕೋಪದಿಂದಾಗಿ ಬೆಳೆ ಹಾನಿಯಾದರೆ 72 ಗಂಟೆಯೊಳಗೆ ವಿಮಾ ಕಂಪನಿಗೆ ದೂರು ನೀಡಬೇಕು. ಆಗವಿಮಾ ಕಂಪನಿಯ ಸಿಬ್ಬಂದಿಗಳು ರೈತರ ಜಮೀನಿಗೆ ಬಂದು ಬೆಳೆ ಪರಿಶೀಲನೆ ಮಾಡುವರು. ನಂತರ ಬೆಳೆ ನಷ್ಟವನ್ನು ನಿರ್ಧರಿಸಿ ನಷ್ಟ ಆದ 48 ಗಂಟೆಯೊಳಗಾಗಿ ಸಿಬ್ಬಂದಿ ಬೆಳೆ ಹಾನಿ ಪರಿಶೀಲಿಸುತ್ತಾರೆ.

ನೀವು ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದೀರಿ ಯಾರಿಗೆ ಕರೆ ಮಾಡಬೇಕು?

ಬಹುತೇಕ ರೈತರಿಗೆ ತಾವು ಯಾವ ವಿಮಾ ಕಂಪನಿಗೆ ಬೆಳೆ ವಿಮೆ ಹಣ ಪಾವತಿಸಿದ್ದಾರೆ ಎಂಬುದೇ ಗೊತ್ತಿರುವುದಿಲ್ಲ. ಅಂತಹ ರೈತರಿಗೆ ಇಲ್ಲಿದೆ ನೋಡಿ ಮಾಹಿತಿ. ರೈತರು ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದಾರೆ ಎಂಬುದನ್ನು ಚೆಕ್ ಮಾಡಲು ಈ

https://www.samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಓಪನ್ ಆಗುವ ಸಂರಕ್ಷಣೆ ಪೇಜ್ ನಲ್ಲಿ  ಮುಂದೆ Go ಮೇಲೆ ಕ್ಲಿಕ್ ಮಾಡಬೇಕು. Farmers ಕೆಳಗಡೆ Know Your Insurance co. ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಜಿಲ್ಲೆಗಳ ಹೆಸರು ಕಾಣಿಸುತ್ತದೆ. ಅದರ ಮುಂದೆ ಆಯಾ ಜಿಲ್ಲೆಗಳಿಗೆ ಯಾವ ವಿಮಾ ಕಂಪನಿಯನ್ನು ನಿಯೋಜಿಸಲಾಗಿದೆ ಎಂಬುದು ಕಾಣಿಸುತ್ತದೆ. ನಿಮ್ಮ ಜಿಲ್ಲೆಗೆ ಯಾವ ವಿಮಾ ಕಂಪನಿ ನಿಯೋಜಿಸಲಾಗಿದೆ ಎಂಬುದನ್ನು  ಬರೆದುಕೊಂಡುನಂತರ

https://www.samrakshane.karnataka.gov.in/HomePages/ContactUs.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ವಿಮಾ ಕಂಪನಿಗಳ ಹೆಸರು ಕಾಣಿಸುತ್ತದೆ. ಅದರ ಎದುರುಗಡೆ ಆ  ಕಂಪನಿಗಳ ಸಹಾಯವಾಣಿ ನಂಬರ್ ಕಾಣಿಸುತ್ತದೆ

ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿ – 1800 425-0505 ಗೆ ಸಂಪರ್ಕಿಸಬಹುದು. ಅದೇ ರೀತಿ ಯುನಿವರ್ಸಲ್ ಸ್ಯಾಂಪು – 1800 2005142 ಗೆ ಸಂಪರ್ಕಿಸಬಹುದು. ಎಸ್.ಬಿ.ಐ 1800 180 1551,ಹೆಚ್.ಡಿಎಪ್.ಸಿ 1800266 0700 ಫ್ಯೂಚರ್  ಜನರಲ್ – 1800 266 4141, ಐಸಿಐಸಿ ಲೊಂಬೋಡೋ 1800 103  7712, ಬಜಾಜ್ ಅಲೈಯನ್ಸ್ 1800209 5959, ರಿಲೈಯನ್ಸ್  ಜನರಲ್ ಇನ್ಸುರೆನ್  1800 102 4088, ಓರಿಯಂಟಲ್ ಜನರಲ್ ಇನ್ಸುರೆನ್ಸ್ ಕಂಪನಿ 1800 425 6678, ಇಫ್ಕೋ  ಜನರಲ್ ಇನ್ಸುರೆನ್ಸ್ ಕಂಪನಿ 1800 103 5940 ಗೆ ಸಂಪರ್ಕಿಸಲು ಕೋರಲಾಗಿದೆ.

ಇದನ್ನೂ ಓದಿ ನಿಮ್ಮ ಜಮೀನಿನ ಅಕ್ಕಪಕ್ಕದ ರೈತರ ಹೆಸರಿಗೆಷ್ಟು ಜಮೀನಿದೆ ಇಲ್ಲೇ ಚೆಕ್ ಮಾಡಿ

Leave a Comment