Aadhar seed do here : ಆಧಾರ್ ಸೀಡ್ ಮಾಡಿದರೆ ಮಾತ್ರ ನಿಮಗೆ ಪಿಎಂ ಕಿಸಾನ್, ಬೆಳೆ ಹಾನಿ ಬೆಳೆ ವಿಮೆ ಪರಿಹಾರ ಸಿಗಲಿದೆ ರೈತರಿಗೆ ಮಹತ್ವದ ಮಾಹಿತಿ ಇಲ್ಲಿದೆ ನೋಡಿ. ಇನ್ನೂ ಮುಂದೆ ರೈತರು ಬ್ಯಾಂಕಿನಲ್ಲಿ ಆಧಾರ್ ಸೀಡ್ ಮಾಡಿದರೆ ಮಾತ್ರ ಅವರಿಗೆ ಪಿಎಂ ಕಿಸಾನ್ ಹಣ, ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ಪರಿಹಾರ ಸೇರಿದಂತೆ ಸರ್ಕಾರದ ಇತರ ಸಬ್ಸಿಡಿ ಹಣ ರೈತರ ಖಾತೆಗೆ ಜಮೆಯಾಗುತ್ತದೆ. ಹಾಗಾದರೆ ಆಧಾರ್ ಸೀಡ್ ಎಲ್ಲಿ ಮಾಡಿಸಬೇಕು ಅದಕ್ಕೆ ಯಾವ ಯಾವ ದಾಖಲೆಗಳು ಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
Aadhar seed do here ಆಧಾರ್ ಸೀಡ್ ಏಕೆ ಮಾಡಿಸಬೇಕು?
ಆಧಾರ್ ಸೀಡಿಂಗ್ ಎಂದರೆ ನಿಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡುವ ಪ್ರಕ್ರಿಯೆಯಾಗಿದೆ. ಇದರ ಮೂಲಕ ಸರ್ಕಾರದದಿಂದ ಬರುವ ಸಬ್ಸಿಡಿ ಮತ್ತು ಇತರ ನೇರ ಪ್ರಯೋಜನಗಳು (ಡಿಬಿಟಿ) ನೇರವಾಗಿ ರೈತರ ಖಾತೆಗೆ ಜಮೆ ಮಾಡಲು ಸಾಧ್ಯವಾಗುತ್ತದೆ.
ಇದನ್ನೂ ಓದಿ ನಿಮ್ಮ ಜಮೀನಿನ ಪೋಡಿ ನಕ್ಷೆ ಮೊಬೈಲ್ ನಲ್ಲಿ ಹೀಗೆ ಪಡೆಯಿರಿ ಇಲ್ಲಿದೆ ಮಾಹಿತಿ
ಆಧಾರ್ ಸೀಡ್ ಮಾಡಿದರೆ ಮಾತ್ರ ರೈತರಿಗೆ ಪಿಎಂ ಕಿಸಾನ್ ಹಣ ಬೆಳೆ ಹಾನಿ ಬೆಳೆ ಪರಿಹಾರ ಹಣ ಸಿಗುತ್ತದೆ. ಏಕೆಂದರ ಐದಾರು ವರ್ಷಕ್ಕೊಮ್ಮೆ ಸರ್ಕಾರವು ಆಧಾರ್ ಸೀಡ್ ಮಾಡಲು ಸೂಚಿಸುತ್ತದೆ. ಏಕೆಂದರೆ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ವ್ಯಕ್ತಿಗೆ ಸರ್ಕಾರದ ಸೌಲಭ್ಯ ಜಮೆ ಮಾಡುವುದು ಬ್ಯಾಂಕುಗಳು, ಹಾಗಾಗಿ ಅವರ ದಾಖಲೆ ಪರಿಶೀಲಿಸಲು ಮತ್ತು ಸರ್ಕಾರದ ಸೌಲಭ್ಯವನ್ನು ಸುಲಭವಾಗಿ ಜಮೆ ಮಾಡಲು ಆಧಾರ್ ಸೀಡ್ ಮಾಡಲಾಗುತ್ತದೆ.
ಆಧಾರ್ ಸೀಡ್ ಮಾಡಲು ಯಾವ ಯಾವ ದಾಖಲೆಗಳು ಬೇಕು?
ಬ್ಯಾಂಕಿನಲ್ಲಿ ಆಧಾರ್ ಸೀಡ್ ಮಾಡಿಸಲು ರೈತರ ಬಳಿ ಆಧಾರ್ ಕಾರ್ಡ್ ಇದ್ದರೆ ಸಾಕುಇದರೊಂದಿಗೆ ಆಧಾರ್ ಸೀಡಿಂಗ್ ಸಮ್ಮತಿ ಫಾರ್ಮ್ ಭರ್ತಿ ಮಾಡಿ ಸಲ್ಲಿಸಬೇಕು. ಇದರೊಂದಿಗೆ ಬ್ಯಾಂಕ್ ಖಾತೆ ಇರಬೇಕು. ಇವೆರಡರ ಸಹಾಯದಿಂದ ಕೇವಲ ಒಂದೇ ನಿಮಿಷದಲ್ಲಿ ಬ್ಯಾಂಕ್ ಸಿಬ್ಬಂದಿ ಆಧಾರ್ ಸೀಡ್ ಮಾಡುತ್ತಾರೆ.
ಡಿಬಿಟಿ ಆಯಪ್ ಮೂಲಕ ಬೆಳೆ ಹಾನಿ ಪರಿಹಾರ, ಗೃಹಲಕ್ಷ್ಮೀ ಹಣ, ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡಿ
ನಿಮಗೆ ಸರ್ಕಾರದ ವತಿಯಿಂದ ಬಿಡುಗಡೆಯಾಗುವ ಸಬ್ಸಿಡಿ ಹಣ ಅಂದರೆ ಗೃಹಲಕ್ಷ್ಮೀ, ಪಿಎಂ ಕಿಸಾನ್ ಹಣ ಜಮಾಗುತ್ತಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ
ಗೃಹಲಕ್ಷ್ಮೀ ಯೋಜನೆಯ ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯಗಳು ನಿಮಗೆ ಸಿಗುತ್ತಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ
https://play.google.com/store/apps/details?id=com.dbtkarnataka&hl=en_IN&pli=1
ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮಗೆ ಡಿಬಿಟಿ ಯಾಪ್ ಓಪನ್ ಆಗುತ್ತದೆ. ಅಲ್ಲಿ ನೀವು install ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ನಮೂದಿಸಬೇಕು. ಇದಾದ ನಂತರ ನೀವು ನೀಡಿದ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ. ಆ ಓಟಿಪಿಯನ್ನು ನಮೂದಿಸಿ ಲಾಗಿನ್ ಆಗಬೇಕು. ನಂತರ ನೀವು ಸರ್ಕಾರದ ವಿವಿಧ ಯೋಜನೆಗಳಿಂದ ನಿಮಗೆ ಹಣ ಜಮೆಯಾಗಿರುವ ಸ್ಥಿತಿಯನ್ನು (ಸ್ಟೇಟಸನ್ನು) ಚೆಕ್ ಮಾಡಬಹುದು. ಇದರೊಂದಿಗೆ ನೀವು ಪಿಎಂ ಕಿಸಾನ್, ಬೆಳೆ ಹಾನಿ ಪರಿಹಾರ, ಬೆಳೆ ವಿಮೆ ಪರಿಹಾರ ಸೇರಿದಂತೆ ಸರ್ಕಾರದ ಇತರ ಸಬ್ಸಿಡಿ ಹಣ ನಿಮ್ಮ ಖಾತೆಗೆ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು. ಇದಕ್ಕಾಗಿ ಕೇವಲ ನೀವು ಅಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿದರೆ ಸಾಕು ಎಲ್ಲಾ ಮಾಹಿತಿಗಳು ಕ್ಷಣಮಾತ್ರದಲ್ಲಿ ಸಿಗುತ್ತದೆ.





