Bele sala status check : ರೈತರು ಈಗ ತಮ್ಮ ಜಮೀನಿನ ಮೇಲೆ ಯಾರಾದರೂ ಬೆಳೆ ಸಾಲ ಪಡೆದಿದ್ದಾರೆಯೇ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ತಮ್ಮ ಜಮೀನಿನ ದಾಖಲೆ ಪಡೆದ ಅದರ ಮೇಲೆ ರೈತರಿಗೆ ಗೊತ್ತಿಲ್ಲದೆ ಕೆಲವರು ಬೆಳೆ ಸಾಲ ಪಡೆದಿರುತ್ತಾರೆ. ಅಥವಾ ಹಿಂದೆ ಬೆಳೆ ಸಾಲ ತೀರಿಸಿದ್ದರೂ ಸಹ ಪಹಣಿಯಲ್ಲಿ ಬೆಳೆ ಸಾಲ ಇನ್ನೂ ತೋರಿಸಲಾಗುತ್ತಿದೆಯೆ ಎಂಬುದನ್ನು ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.
Bele sala status check ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಎಂಬುದನ್ನು ಹೀಗೆ ಚೆಕ್ ಮಾಡಿ
ರೈತರು ತಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ ಎಂಬುದನ್ನು ಚೆಕ್ ಮಾಡಲು ಈ
https://www.landrecords.karnataka.gov.in/service2/RTC.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಕಂದಾಯ ಇಲಾಖೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ನಿಮ್ಮ ಸರ್ವೆ ನಂಬರ್ ನಮೂದಿಸಬೇಕು. ನಂತರ ಸರ್ನೋಕ್ ನಲ್ಲಿ ಸ್ಟಾರ್ ಹಾಗೂ ಹಿಸ್ಸಾ ನಂಬರ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ Fetch details ಮೇಲೆ ಕ್ಲಿಕ್ ಕ್ಲಿಕ್ ಮಾಡಬೇಕು. ನಂತರ ನಿಮಗೆ ಇನ್ನೊಂದು ಪೇಜ್ ಕಾಣಿಸುತ್ತದೆ. ಅಲ್ಲಿ ನೀವು View ಮೇಲೆ ಕ್ಲಿಕ್ ಮಾಡಬೇಕು. ನಂತರ ಪಹಣಿ ಓಪನ್ ಆಗುತ್ತದೆ. ಆ ಪಹಣಿಯಲ್ಲಿ ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಯಾವ ಯಾವ ರೈತರ ಹೆಸರಿದೆ ಎಂಬುದು ಕಾಣಿಸುತ್ತದೆ ಅದು ಮುಂದುಗಡೆ ನೀವು ಯಾವ ಬ್ಯಾಂಕಿನಲ್ಲಿ ಸಾಲ ಪಡೆದಿದ್ದೀರಿ ಹಾಗೂ ಎಷ್ಟು ಪಡೆದಿದ್ದೀರಿ ಎಂಬ ಮಾಹಿತಿ ಕಾಣಿಸುತ್ತದೆ.
ಒಂದು ವೇಳೆ ನೀವೇ ಸಾಲ ಪಡೆದಿದ್ದರೆ ಎಷ್ಟು ಸಾಲ ಪಡೆದಿದ್ದೀರಿ ಎಂಬ ಮಾಹಿತಿ ಗೊತ್ತಾಗುತ್ತದೆ. ಒಂದು ವೇಳೆ ನೀವು ಸಾಲ ತೀರಿಸಿದ್ದರೂ ಪಹಣಿಯಲ್ಲಿ ಬೆಳೆ ಸಾಲವಿದ್ದರೆ ಬ್ಯಾಂಕಿನ ಮ್ಯಾನೇಜರ್ ಗೆ ಭೇಟಿ ಮಾಡಿ ಸಾಲದ ಬಗ್ಗೆ ವಿಚಾರಿಸಬಹುದು. ಯಾವ ಕಾರಣಕ್ಕಾಗಿ ಪಹಣಿಯಲ್ಲಿ ಸಾಲ ಕಾಣಿಸುತ್ತಿದೆ. ಹಾಗೂ ಸಾಲ ತೀರಿಸಿದ್ದರೂ ಸಾಲವೆಂದು ತೋರಿಸುತ್ತಿದ್ದರೆ ಬ್ಯಾಂಕ್ ಮ್ಯಾನೇಜರ್ ಕಾರಣ ಹೇಳುತ್ತಾರೆ. ತಾಂತ್ರಿಕ ದೋಷದಿಂದ ಏನಾದರೂ ಸಮಸ್ಯೆಯಾಗಿ ಬೆಳೆ ಸಾಲ ಪಹಣಿಯಲ್ಲಿ ತೋರಿಸುತ್ತಿದ್ದರೆ ಅದನ್ನು ಸರಪಡಿಸುತ್ತಾರೆ.
Bele sala status check ರೈತರು ಭೂಮಿ ಆಯಪ್ ನಿಂದ ಏನೇನು ಮಾಹಿತಿ ಪಡೆಯಬಹುದು
ರೈತರ ಅಂಗೈಯಲ್ಲೇ ಜಮೀನಿನ ಮಾಹಿತಿ ದಾಖಲೆಗಳನ್ನು ಒದಗಿಸಲು ರಾಜ್ಯ ಸರ್ಕಾರವು ಭೂಮಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಈ ಆಯಪ್ ಮೂಲಕ ರೈತರು ಜಮೀನಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಪಡೆಯಬಹುದು. ಹೌದು, ರೈತರು ಆಗಾಗ ಮನೆಯಲ್ಲಿಯೇ ಕುಳಿತು ತಮ್ಮ ಜಮೀನಿನ ದಾಖಲೆಗಳನ್ನು ಪರಿಶೀಲಿಸಿಕೊಳ್ಳಲು ಈ ವ್ಯವಸ್ಥೆ ಮಾಡಿದೆ. ರಾಜ್ಯದ ಬಹುತೇಕ ರೈತರು ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಮೊಬೈಲ್ ನಲ್ಲೇ ವೀಕ್ಷಿಸುತ್ತಿದ್ದಾರೆ.
ಇದನ್ನೂ ಓದಿ : ನಿಮ್ಮ ಜಮೀನಿಗೆ ಹೋಗಲು ಕಾಲುದಾರಿ ಬಂಡಿದಾರಿ ಇದೆಯೇ ಇಲ್ಲೇ ಚೆಕ್ ಮಾಡಿ
ರೈತರು ಈಗ ಕಚೇರಿಗಳಿಗೆ ಅಲೆದಾಡಬಾರದು. ಅಧಿಕಾರಿಗಳ ಎದುರ ಜಮೀನಿಗೆ ಸಂಬಂಧಿಸಿದ ದಾಖಲೆ ಪಡೆಯಲು ಕೈ ಕಟ್ಟಿ ಕುಳಿತುಕೊಳ್ಳಬಾರದೆಂಬ ಉದ್ದೇಶದಿಂದ ಈ ವ್ಯವಸ್ಥೆಯನ್ನು ಮಾಡಿದೆ. ರೈತರು ಸಹ ಇದರ ಸದುಪಯೋಗ ಪಡೆಯುತ್ತಿದ್ದಾರೆ. ಜಮೀನಿನ ಪಹಣಿಯನ್ನು ಸಹ ಅದರ ಶುಲ್ಕ ಪಾವತಿಸಿ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ಪಡೆದುಕೊಳ್ಳಬಹುದು. ಇದಕ್ಕಾಗಿ ಹೆಚ್ಚಿನ ಹಣ ಪಾವತಿಸಬೇಕಾಗಿಲ್ಲ.





