Check land survey details : ರೈತರಿಗೆ ಗುಡ್ ನ್ಯೂಸ್. ಹೌದು, ರೈತ ಬಾಂಧವರೇ ನಿಮಗಿಲ್ಲಿದೆ ಗುಡ್ ನ್ಯೂಸ್. ಈಗ ರೈತ ಮಿತ್ರರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಕೇವಲ ಒಂದೇ ನಿಮಿಷದಲ್ಲಿ ತಮ್ಮ ಸರ್ವೆ ನಂಬರಿನಲ್ಲಿ ಯಾರ ಯಾರ ಹೆಸರಿದೆ ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.
Check land survey details ನಿಮ್ಮ ಸರ್ವೆ ನಂಬರಿನಲ್ಲಿ ಯಾವ ಯಾವ ರೈತರ ಹೆಸರಿದೆ ಹೀಗೆ ಚೆಕ್ ಮಾಡಿ
ನಿಮ್ಮ ಜಮೀನಿನಲ್ಲಿ ಯಾವ ಯಾವ ರೈತರ ಹೆಸರಿದೆ ಎಂಬುದನ್ನು ಚೆಕ್ ಮಾಡಲು ಈ
https://www.landrecords.karnataka.gov.in/service2/RTC.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ Bhoomi Online Land Records View ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಸರ್ವೆ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. Go ಮೇಲೆ ಕ್ಲಿಕ್ ಮಾಡಬೇಕು ಇದಾದ ನಂತರ Surnoc ನಲ್ಲಿ ಸ್ಟಾರ್ ಹಾಗೂ ಹಿಸ್ಸಾನ ನಂಬರ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ Fetch Details ಮೇಲೆ ಕ್ಲಿಕ್ ಮಾಡಬೇಕು.
ಅಲ್ಲಿ ನೀವು ಆಯ್ಕೆ ಮಾಡಿಕೊಂಡ ಸರ್ವೆ ನಂಬರಿನಲ್ಲಿ ಜಮೀನಿನ ಮಾಲಿಕರು ಯಾರು ಯಾರು ಇದ್ದಾರೆ ಅವರ ಹೆಸರು ಕಾಣಿಸುತ್ತದೆ. ನಂತರ ಖಾತಾ ನಂಬರ್ ಕಾಣಿಸುತ್ತದೆ. ನಂತರ ನೀವು ಅಲ್ಲಿ ಕಾಣುವ View ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಆಯ್ಕೆ ಮಾಡಿಕೊಂಡ ಸರ್ವೆ ನಂಬರಿನ ಪಹಣಿ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಆಯ್ಕೆ ಮಾಡಿಕೊಂಡ ಸರ್ವೆ ನಂಬರಿನಲ್ಲಿ ಒಟ್ಟು ಎಷ್ಟು ಎಖರೆ ಜಮೀನು ಇದೆ, ಅ ಖರಾಬು ಜಮೀನು ಎಷ್ಟಿದೆ, ಬ ಖರಾಬು ಜಮೀನು ಎಷ್ಟಿದೆ ಎಂಬ ಮಾಹಿತಿ ಕಾಣಿಸುತ್ತದೆ. ಅದರ ಮೇಲೆ ನಿಮ್ಮ ಸರ್ವೆ ನಂಬರಿನಲ್ಲಿ ಯಾವ ಯಾವ ರೈತರ ಹೆಸರಿದೆ ಅವರ ತಂದೆಯ ಹೆಸರೂ ಇರುತ್ತದೆ. ಅವರ ಹೆಸರಿಗೆ ಎ ಷ್ಟು ಎಕರೆ ಜಮೀನಿದೆ ಖಾತಾ ನಂಬರ್ ಗಳ ಮಾಹಿತಿಯೂ ಇರುತ್ತದೆ. ಹಾಗೂ ಜಮೀನಿಗೆ ಮುಟೇಶನ್ ಆಗಿದೆಯೋ ಇಲ್ಲವೋ ಎಂಬ ಮಾಹಿತಿ ಕಾಣಿಸುತ್ತದೆ.
ಇದನ್ನೂ ಓದಿ : ನಿಮ್ಮ ಜಮೀನಿನ ಪೋಡಿ ನಕ್ಷೆ ಮೊಬೈಲ್ ನಲ್ಲಿ ಹೀಗೆ ಪಡೆಯಿರಿ ಇಲ್ಲಿದೆ ಮಾಹಿತಿ
ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನ ಬೆಳೆ ಮಾಹಿತಿಯೂ ನಿಮಗೆ ಕಾಣಿಸುತ್ತದೆ. ಬೆಳೆ ಸಮೀಕ್ಷೆ ಆಗಿದೆಯೋ ಇಲ್ಲವೋ ಎಂಬ ಮಾಹಿತಿಯೂ ಕಾಣಿಸುತ್ತದೆ.
ಭೂಮಿ ತಂತ್ರಾಂಶದಲ್ಲಿ ಮತ್ತೆ ಯಾವ ಯಾವ ಮಾಹಿತಿ ಸಿಗುತ್ತದೆ
ಭೂಮಿ ತಂತ್ರಾಂಶದಲ್ಲಿ ರೈತರಿಗೆ ತಮ್ಮ ಮೊಬೈಲ್ ನಲ್ಲಿಯೇ ಜಮೀನಿನ ದಾಖಲೆಗಳ ಮಾಹಿತಿ ಚೆಕ್ ಮಾಡುವ ವ್ಯವಸ್ಥೆಯನ್ನು ಮಾಡಿದೆ. ಹೌದು, ರೈತರು ತಮ್ಮ ಜಮೀನಿನ ಪಹಣಿ, ಹಳೆಯ ಪಹಣಿ, ಪ್ರಸಕ್ತ ಸಾಲಿನ ಪಹಣಿ, ಮುಟೇಶನ್, ಮುಟೇಶನ್ ಸ್ಟೇಟಸ್, ಖಾತಾ, ಸರ್ವೆ ದಾಖಲೆಗಳು, ಆಕಾರ್ ಬಂದ್, ಇ ಚಾವಡಿ ಹಾಗೂ ಸರ್ವೆ ಚೆಕ್ ಮಾಹಿತಿಗಳು ಲಭ್ಯವಿದೆ. ಆ ಮಾಹಿತಿ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಂತರ ಅಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿದರೆ ಸಾಕು ಎಲ್ಲಾ ಮಾಹಿತಿಗಳು ನಿಮಗೆ ಮೊಬೈಲ್ ನಲ್ಲೇ ಸಿಗತ್ತದೆ.
ಇದಕ್ಕೆ ರೈತರಿಗೆ ಕೇವಲ ಮೊಬೈಲ್ ಬಳಕೆ ಮಾಡುವ ಜ್ಞಾನವಿದ್ದರೆ ಸಾಕು, ಇಲ್ಲಿ ನೀಡಲಾದ ಮಾಹಿತಿಯಂತೆ ರೈತರು ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಒಂದು ರೂಪಾಯಿಯೂ ಖರ್ಚು ಮಾಡದೆ ಜಮೀನಿಗೆ ಸಂಬಂದಿಸಿದ ಮಾಹಿತಿಗಳನ್ನು ಚೆಕ್ ಮಾಡಬಹುದು.





