What is Land A and B Khata: ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಿ ಖಾತಾ ನಿವೇಶನ, ಕಟ್ಟಡ, ಅಪಾರ್ಟ್ ಮೆಂಟ್ ಮತ್ತು ಫ್ಲಾಟ್ ಗಳಿಗೆ ಎ ಖಾತಾ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ ಕಾನುನು ಸಚಿವ ಹೆಚ್.ಕೆ. ಪಾಟೀಲ್ ಅವರು, ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾನೂನಾತ್ಮಕವಾಗಿ ಸಂಬಂಧಿಸಿದ ಪ್ರಾಧಿಕಾರದ ಅನುಮೋದನೆ ಪಡೆಯದೆ ರಚಿಸುವ ಬಡಾವಣೆಗಳಲ್ಲಿನ ನಿವೇಶನ, ಕಟ್ಟಡ, ಅಪಾರ್ಟ್ ಮೆಂಟ್ ಹಾಗೂ ಪ್ಲಾಟ್ ಗಳಿಗೆ ಬಿ ಖಾತಾ ನೀಡಲಾಗಿದೆ.
What is Land A and B Khata ಯಾರು ಯಾರಿಗೆ ಎ ಖಾತಾ ಸಿಗಲಿದೆ?
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಬಂಧಿಸಿದ ಪ್ರಾಧಿಕಾರದ ಅನುಮೋದನೆ ಪಡೆಯದೆ ನಿರ್ಮಾಣವಾಗಿರುವ ನಿವೇಶನ, ಕಟ್ಟಡ, ಅಪಾರ್ಟ್ ಮೆಂಟ್ ಮತ್ತು ಫ್ಲಾಟ್ ಗಳು ಈಗಾಗಲೇ ಬಿ ಖಾತಾ ಪಡೆದಿದ್ದರೆ ಅಂತಹ ಆಸ್ತಿಗಳಇಗೆ ಈಗ ಎ ಖಾತಾ ಸಿಗಲಿದೆ.
ಎ ಖಾತಾ ಮಾಡಿಸಿಕೊಂಡರೆ ಏನು ಲಾಭ?
ಆಸ್ತಿಗಳನ್ನು ಎ ಖಾತೆಯನ್ನಾಗಿ ಪರಿವರ್ತಿಸಿಕೊಂಡಲ್ಲಿ ಅದು ಮಾರುಕಟ್ಟೆಯ ಪೂರ್ಣ ಪ್ರಮಾಣದ ಮೌಲ್ಯ ಪಡೆದುಕೊಳ್ಳಲಿದೆ. ಕೆಲವು ಬ್ಯಾಂಕುಗಳು ಎ ಖಾತಾಗೆ ಮಾತ್ರವೇ ಸಾಲ ಕೊಡುವಾದಾಗಿ ಹೇಳುತ್ತವೆ. ಆ ತೊಂದರೆ ನಿವಾರಣೆಯಾಗುತ್ತದೆ. ಅಕ್ರಮ ಬಡಾವಣೆಗಳು ಸಕ್ರಮವಾದಲ್ಲಿ ಒಳಚರಂಡಿ, ಕುಡಿಯುವ ನೀರಿನ ಮೂಲಸೌಕರ್ಯ ದೊರೆಯಲಿದೆ.
ಬಿ ಖಾತಾ ಇದ್ದರೆ ಏನೇನು ತೊಂದರೆಯಾಗಲಿದೆ?
ಬಿ ಖಾತಾ ಎಂಬುದು ಅಕ್ರಮ ಅಥವಾ ಅರೆ ಕಾನೂನು ಆಸ್ತಿ ಅಥವಾ ನಿವೇಶನ ಎಂದು ಪರಿಗಣಿಸಲಾಗುತ್ತದೆ. ಅನುಮೋದನೆಗಳಿಗಾಗಿ ಬಾಕಿ ಉಳಿಸಲಾಗಿರುವ ಆಸ್ತಿಗಳನ್ನು ಬಿ ಖಾತಾ ವ್ಯಾಪ್ತಿಯಲ್ಲಿ ತರಲಾಗಿದೆ. 2014 ರಲ್ಲಿ ಕರ್ನಾಟಕ ಹೈಕೋರ್ಟ್ ಬಿ ಖಾತಾ ಆಸ್ತಿಗಳನ್ನು ಕಾನೂನು ಬಾಹಿರ ಎಂದು ಹೇಳಿತ್ತು. ಅನಧಿಕೃತ ನಿವೇಶನ ಹಾಗೂ ಬಡಾವಣೆಗಳನ್ನು ಬಿ ಖಾತಾ ವ್ಯಾಪ್ತಿಗೆ ತರಲಾಗಿದೆ.
ಎ ಖಾತಾ ಎಂದರೇನು? ಮತ್ತು ಇದರ ಪ್ರಾಮುಖ್ಯತೆ
ಎ ಖಾತಾ ಎನ್ನುವುದು ಆಸ್ತಿ ಕಾನೂನು ಬದ್ದವಾಗಿದೆ ಎಂದು ತೋರಿಸುತ್ತದೆ. ಆಸ್ತಿ ಮಾಲಿಕರು ಆಸ್ತಿ ತೆರಿಗೆ ಪಾವತಿಸಿದ್ದಾರೆ ಎನ್ನುವುದನ್ನು ಪ್ರಾಮಾಣಿಕರಿಸುವ ದಾಖಲೆ ಎಂದು ಪರಿಗಣಿಸಲಾಗುತ್ತದೆ.
ಎ ಖಾತಾ ಇದ್ದರೆ ಆ ಕಟ್ಟಡಗಳನ್ನು ಕಾನೂನುಬದ್ಧವಾಗಿ ನಿರ್ಮಾಣ ಮಾಡಲಾಗಿದೆ. ಸರಿಯಾಗಿ ತೆರಿಗೆ ದಾಖಲೆಗಳನ್ನು ಹೊಂದಿರುವ ಆಸ್ತಿ ಎಂದು ಮಾನ್ಯತೆ ಪಡೆಯಲಿದೆ.ಎ ಖಾತಾ ಇದ್ದರೆ ಆಸ್ತಿ ಮಾಲಿಕರು ಕಟ್ಟಡ ಪರವಾನಗಿಗಳು, ವ್ಯಾಪಾರ ಪರವಾನಗಿಗಳು ಮತ್ತು ಸಾಲಗಳಿಗೆ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ನಲ್ಲಿ ಸಾಲ ಹಾಗೂ ಸರ್ಕಾರದ ಸೌಲಭ್ಯಗಳು ಸಿಗುತ್ತವೆ.
ಇದನ್ನೂ ಓದಿ : ನಿಮ್ಮ ಜಮೀನಿಗೆ ಹೋಗಲು ಕಾಲುದಾರಿ ಬಂಡಿದಾರಿ ಇದೆಯೇ ಇಲ್ಲೇ ಚೆಕ್ ಮಾಡಿ
ಬಿ ಖಾತಾದ ಆಸ್ತಿಗಳನ್ನು ಎ ಖಾತಾಗೆ ಪರಿವರ್ತನೆ ಮಾಡಿದರೆ ಮಾರಾಟ ಹಾಗೂ ಖರೀದಿ ಸುಲಭವಾಗಲಿದೆ. ಎ ಖಾತಾಗೆ ಪರಿವರ್ತನೆ ಮಾಡಿದರೆ ಆಸ್ತಿ ಮೌಲ್ಯವೂ ಹೆಚ್ಚಳವಾಗಲಿದೆ. ಮುಂದಿನ ದಿನಗಳಲ್ಲಿ ವಿದ್ಯುತ್, ನೀರಿನ ಸಂಪರ್ಕ ಪಡೆದುಕೊಳ್ಳುವುದು ಸುಲಭವಾಗುತ್ತದೆ.
ಇ ಖಾತಾ ಎಂದರೇನು?
ಇ ಖಾತಾ ಎಂಬುದು ಸಾಂಪ್ರದಾಯಿಕ ಖಾತಾ ಪ್ರಮಾಣ ಪತ್ರದ ಎಲೆಕ್ಟ್ರಾನಿಕ್ ಆವೃತ್ತಿಯಾಗಿದ್ದು, ಇದು ಆಸ್ತಿಯ ಮಾಲೀಕತ್ವ ಮತ್ತು ಮತ್ತ್ ಕಾನೂನಾತ್ಕವಾಗಿ ಅಧಿಕೃತ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಜಮೀನಿನ ಖಾತಾವನ್ನು ಡಿಜಿಟಲೀಕರಣಗೊಳಿಸಲು ಅಭಿವೃದ್ಧಿಪಡಿಸಲಾದ ಆನ್ಲೈನ್ ವ್ಯವಸ್ಥೆಯಾಗಿದೆ. ಇದು ಮಾಲೀಕತ್ವದ ಮಾಹಿತಿ ಆಸ್ತಿಯ ಆಯಾನುಗಳು, ಸ್ಥಳ ಮತ್ತು ವಿಶಿಸ್ಟ ಗುರುತಿನ ಸಂಖ್ಯೆ ಸೇರಿದಂತೆ ಅಗತ್ಯ ಆಸ್ತಿ ವಿವರಗಳನ್ನು ಡಿಜೀಟಲ್ ರೂಪದಲ್ಲಿ ಕ್ರೋಢಿಕರಿಸುತ್ತದೆ. ಕಾಗದ ಪತ್ರದ ಕೆಲಸವನ್ನು ಕಡಿಮೆ ಮಾಡುತ್ತದೆ ಮತ್ತು ಆಸ್ತಿ ದಾಖಲೆಗಳ ನಿಖರತೆಯನ್ನು ಹೆಚ್ಚಿಸುತ್ತದೆ.
ಆನ್ಲೈನ್ ನಲ್ಲಿ ಇ ಖಾತಾ ಪಡೆಯುವುದು ಹೇಗೆ?
ಸಾರ್ವಜನಿಕರು ತಮ್ಮ ಆಸ್ತಿಯ ದಾಖಲೆ ಈ ಖಾತಾವನ್ನು ಮೊಬೈಲ್ ನಲ್ಲಿ ಪಡೆಯಲು ಈ
https://bbmpeaasthi.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಸದ್ಯ ಇದು ಬೆಂಗಳೂರು ವ್ಯಾಪ್ತಿಯಲ್ಲಿರುವ ಆಸ್ತಿಗಳಿಗೆ ಅನ್ವಯಿಸುತ್ತದೆ. ಅತೀ ಶೀಘ್ರದಲ್ಲಿ ರಾಜ್ಯದ ಎಲ್ಲಾ ಪ್ರದೇಶದ ಆಸ್ತಿಗಳಿಗೂ ಅನ್ವಯಿಸುತ್ತದೆ.
ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರ ನಂತರ ಅಲ್ಲಿ ಓಪನ್ ಆಗುವ ಪೇಜ್ ನಲ್ಲಿ ಡೌನ್ಲೋಡ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ ಆಸ್ತಿ ಡೌನ್ಲೋಡ್ ಮಾಡಬಹುದು.





