Mini job fair kalaburgi : ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ ಪಾಸಾದ ವಿದ್ಯಾರ್ಥಿಗಳಿಗಿಲ್ಲಿದೆ ಗುಡ್ ನ್ಯೂಸ್. ಹೌದು, ಸ್ನೇಹಿತರೇ, ಕಲಬುರಗಿ ಜಿಲ್ಲೆಯಲ್ಲಿ ನಿರುದ್ಯೋಗಿಗಳಿಗಾಗಿ ಉದ್ಯೋಗ ಒದಗಿಸಿಕೊಡಲು ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.
ಯಾವ ಯಾವ ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಅರ್ಜಿ ಎಲ್ಲಿ ಸಲ್ಲಿಸಬೇಕು? ಯಾರಿಗೆ ಸಂಪರ್ಕಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ ಜುಲೈ 8 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಲಬುರಗಿ ಸರ್ಕಾರಿ ಐ.ಟಿ.ಐ. ಕಾಲೇಜು ಹಿಂದುಗಡೆಯಿರುವ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾಉದ್ಯೋಗ ವಿನಿಮಯ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
Mini job fair kalaburgi ಉದ್ಯೋಗ ಮೇಳದಲ್ಲಿ ಯಾವ ಯಾವ ಕಂಪನಿಗಳು ಬರಲಿವೆ?
ಉದ್ಯೋಗ ಮೇಳದಲ್ಲ್ಲಿ ಭಾಗವಹಿಸಲಿರುವ ಕಂಪನಿಗಳ ವಿವರ ಇಂತಿದೆ: ಮೆಡ್ಪ್ಲಸ್ ಫಾರ್ಮಸಿಯಲ್ಲಿ ಫಾರ್ಮಸಿಸ್ಟ್ ಹುದ್ದೆಗೆ ಡಿ-ಫಾರ್ಮಸಿ (ಕೆಎಸ್ಪಿಸಿ ಪ್ರಮಾಣೀಕೃತ) ವಿದ್ಯಾರ್ಹತೆ ಹೊಂದಿರಬೇಕು. ಫಾರ್ಮಸಿ ಎಐಡಿಇ ಮತ್ತು ಸಿಎಸ್ಎ ಹುದ್ದೆಗೆ ಪಿಯುಸಿ/ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 21 ರಿಂದ 40 ವರ್ಷದೊಳಗಿರಬೇಕು. ಕಲಬುರಗಿ ಕಿಡ್ಜಿ ಪ್ರಿ ಸ್ಕೂಲ್ದಲ್ಲಿ ಪ್ರಾಥಮಿಕ ಶಿಕ್ಷಕರ ಹುದ್ದೆಗೆ ಎನ್ಟಿಟಿಸಿ ಬಿ.ಎಡ್./ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 25 ರಿಂದ 40 ವರ್ಷದೊಳಗಿರಬೇಕು.
ಇದನ್ನೂ ಓದಿ : ನಿಮ್ಮ ಜಮೀನಿನ echawadi ಮೊಬೈಲ್ ನಲ್ಲಿ ಹೀಗೆ ಪಡೆಯಿರಿ
ರಿಲಾಯನ್ಸ್ ಟ್ರೆಂಡ್ಸ್ದಲ್ಲಿ ಬ್ರಾಂಡ್ ಪ್ರಮೋಟರ್ ಹುದ್ದೆಗೆ ಎಸ್ಎಸ್ಎಲ್ಸಿ, ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 24 ವರ್ಷದೊಳಗಿರಬೇಕು. ಮುತ್ತೂಟ್ ಮನಿದಲ್ಲಿ ಪ್ರೋಬೇಷನರಿ ಆಫೀಸರ್ ಹುದ್ದೆಗೆ ಎಮ್ಬಿಎ (ಹೆಚ್ಆರ್/ಮಾರ್ಕೇಟಿಂಗ್ ಎನ್ಜಿ/ಪೈನಾನ್ಸ್) ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 29 ವರ್ಷದೊಳಗಿರಬೇಕು. ಟ್ಯಾಲಿ ಸಲ್ಯೂಶನ್ದಲ್ಲಿ ವ್ಯಾಪಾರ ಅಭಿವೃದ್ಧಿ ಕಾರ್ಯನಿರ್ವಾಹಕ ಹುದ್ದೆ ಹಾಗೂ ಟೆಲಿಕಾಲರ್ ಹುದ್ದೆಗೆ ಪಿಯುಸಿ / ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 20 ರಿಂದ 35 ವರ್ಷದೊಳಗಿರಬೇಕು.
ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಝೆರಾಕ್ಸ್, ರೆಸ್ಯೂಮ್ (ಬಯೋಡೆಟಾ) ಭಾವಚಿತ್ರಗಳು ಹಾಗೂ ಆಧಾರ್ಕಾರ್ಡ್ದೊಂದಿಗೆ ಮೇಲ್ಕಂಡ ನಡೆಯುವ ಮಿನಿ ಉದ್ಯೋಗಮೇಳದಲ್ಲ್ಲಿ ಭಾಗವಹಿಸಬೇಕು.
ಮಿನಿ ಉದ್ಯೋಗಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ 08472-274846, ಮೊಬೈಲ್ ಸಂಖ್ಯೆ 9620095270 ಗೆ ಸಂಪರ್ಕಿಸಲು ಕೋರಲಾಗಿದೆ.





