India Australia semifinal match : ತಮಗೆಲ್ಲಾ ಗೊತ್ತಿದ್ದ ಹಾಗೆ ಇಂದು ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ಚಾಂಪಿಯನ್ ಟ್ರೋಫಿಯ ಸೆಮಿ ಫೈನಲ್ ಪಂದ್ಯ ನಡೆಯಲಿದೆ. ಭಾರತ ಆಸ್ಟ್ರೇಲಿಯಾಗಿಂತ ಬಲಿಸ್ಟ ತಂಡವಾಗಿದೆ. ಬ್ಯಾಟಿಂಗ್ ಬೌಲಿಂಗ್ ನಲ್ಲಿಯೂ ಆಸ್ಟ್ರೇಲಿಯಾಗೆ ಹೋಲಿಕೆ ಮಾಡಿದರೆ ಭಾರತವೇ ಮೇಲುಗೈ ಸಾಧಿಸುತ್ತದೆ. ಆದರೂ ಭಾರತ ಸೋಲುವುದೇಕೆ? ಇಲ್ಲಿದೆ ಮಾಹಿತಿ
2023 ರ ಏಕದಿನ ವಿಶ್ವಕಪ್ ಆರಂಭವಾಗುವುದಕ್ಕಿಂತ ಮೊದಲು ಭಾರತವೇ ವರ್ಲ್ಡ್ ಕಪ್ ಗೆಲ್ಲುವ ಫೆವರೆಟ್ ತಂಡವಾಗಿತ್ತು. ಆದರೂ ಆಸ್ಟ್ರೇಲಿಯಾ ವಿರುದ್ಧ ಸೋಲನಭಿವಿಸಿತು.
ಮಿನಿ ವರ್ಲ್ಡ್ ಕಪ್ ಎಂದೇ ಹೇಳಲಾಗುವುದು ಚಾಂಪಿಯನ್ ಟ್ರೋಫಿಯಲ್ಲೂ ಭಾರತವೇ ಫೆವರೆಟ್ ತಂಡವಾಗಿದೆ. ಏಕೆಂದರೆ ಉಳಿದ ತಂಡಕ್ಕೆ ಹೋಲಿಕೆ ಮಾಡಿದರೆ ಭಾರತ ಎಲ್ಲಾ ವಿಭಾಗದಲ್ಲಿ ಬಲಾಡ್ಯ ತಂಡವಾಗಿದೆ.
India Australia semifinal match ಭಾರತದ ಟಾಪ್ ಆಟಗಾರರು
ಏಕೆಂದರೆ ರೋಹಿತ್ ಶರ್ಮಾ, ವಿರಾಟ್ ಕೋಹ್ಲಿ, ಶುಭಮನ್ ಗಿಲ್, ಶ್ರೈಯಸ್ ಅಯ್ಯರ್, ಕೆ.ಎಲ್. ರಾಹುಲ್ ನಂತರ ಅನುಭವಿ ಬ್ಯಾಟ್ಸ್ ಮನ್ ಗಳಿದ್ದಾರೆ. ಹಾರ್ಧಿಕ್ ಪಾಂಡ್ಯ, ರವೀಂದ್ರ ಜಡೇಟ್, ಅಕ್ಷರ್ ಪಟೇಲ್ ನಂತರ ಅನುಭವಿ ಆಲ್ರೌಂಡರ್ ಆಟಗಾರರಿದ್ದಾರೆ ಹಾಗೂ ಶಮಿಯಂತಹ ಅನುಭವಿ ಬೌಲರ್ ಗಳಿದ್ದಾರೆ.ಇದರೊಂದಿಗೆ ಕುಲ್ದೀಪ್, ವರುಣ್ ಉತ್ತಮ ಫಾರ್ಮ್ ನಲ್ಲಿದ್ದಾರೆ.
ಆಸ್ಟ್ರೇಲಿಯಾ ತಂಡದಲ್ಲಿ ಅನುಭವಿ ವೇಗಿಗಳಾದ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಹಾಗೂ ಹೆಜಲ್ ವುಡ್ ಇಲ್ಲ. ಡೆವಿಡ್ ವಾರ್ನರ್ ನಂತಹ ಪ್ರಚಂಡ ಬ್ಯಾಟರ್ ಸಹ ಇಲ್ಲ. ಇದರೊಂದಿಗೆ ಅಫಾಯಕಾರಿ ಆಲ್ರೌಂಡರ್ ಸ್ಟೋಯಿನಿಸ್ ಇಲ್ಲ. ಇದ್ದುದರಲ್ಲೇ ಪರವಾಗಿಲ್ಲ ಎಂದುಕೊಳ್ಳುವ ಆಸ್ಟ್ರೇಲಿಯಾ ತಂಡಕ್ಕೆ ಕೊಡುಗೆ ನೀಡಬಲ್ಲ ಮತ್ತೊಬ್ಬ ಆಲ್ರೌಂಡರ್ ಮ್ಯಾಥ್ಯೂಶಾರ್ಟ್ ಸಹ ಗಾಯಗೊಂಡು ಹೊರಬಿದ್ದಿದ್ದಾರೆ. ಆದರೂ ಭಾರತೀಯರಿಗೆ ಆಸ್ಟ್ರೇಲಿಯಾ ಎಂದರೆ ಸಾಕು ನಡುಕ ಶುರುವಾಗುತ್ತದೆ. ವರ್ಲ್ಡ್ ಕಪ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಎದುರು ಭಾರತ ಏಕೆ ಸೋಲುತ್ತದೆ ಗೊತ್ತಾ, ಭಯ, ಆಸ್ಟ್ರೇಲಿಯಾ ಎದುರು ಇದ್ದರೆ ಸಾಕು ಭಾರತಕ್ಕೆ ಭಯವುಂಟಾಗುತ್ತದೆ. ಉತ್ತಮ ಫಾರ್ಮ್ ನಲ್ಲಿರುವ ಭಾರತದ ಬಲಿಸ್ಟ ಬ್ಯಾಟಿಂಗ್ ಪಡೆ ಆಸ್ಟ್ರೇಲಿಯಾ ಎದುರು ಬಾಲ ಮುದುರಿಕೊಳ್ಳುತ್ತದೆ.
ಇದನ್ನೂ ಓದಿ : Double century : ಇವರೇ ನೋಡಿ ಡಬಲ್ ಸೆಂಚರಿ ಬಾರಿಸಿದವರು
ಆದರೆ ಚಾಂಪಿಯನ್ ಟ್ರೋಫಿಯ ಇಂದಿನ ಸೆಮಿ ಫೈನಲ್ ಲ್ಲಿ ಭಾರತಕ್ಕೆ ಭಯವನ್ನುಂಟು ಮಾಡುವ ಅನುಭವಿ ಬೌಲರ್ ಗಳಿಲ್ಲ ಎಂಬುದಕ್ಕೆಖುಶಿ ಪಡಬೇಕು. ಆದರೆ ಭಾರತಕ್ಕೆ ಹೆಡ್ ಏಕ್ ಮಾಡುವ ಹೆಡ್ ಅಂತು ಇದ್ದಾರೆ. 2023ರ ಏಕದಿನ ವಿಶ್ವಕಪ್ ಫೈನಲ್, 2023ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಹೆಡ್ ಕೊಟ್ಟ ಪೆಟ್ಟನ್ನು ಭಾರತೀಯರು ಮರೆಯಲು ಸಾಧ್ಯವಿಲ್ಲ. ಐಸಿಸಿ ಟೂರ್ನಿಗಳಲ್ಲಿ ಆಸ್ಟ್ರೇಲಿಯಾ ಯಾವಾಗಲೂ ಅಪಾಯಕಾರಿ ಎನಿಸಿರುವುದರಿಂದ ಆಸ್ಟ್ರೇಲಿಯಾ ಎಚ್ಚರಿಕೆಯಿಂದ ಸವಾಲು ಎದುರಿಸಬೇಕಿದೆ.
ತಾಳ್ಮೆಯಿಂದ ಆಟವಾಗುವ ಸ್ಮಿತ್ ಸಹ ಇದ್ದಾರೆ. ಇದರೊಂದಿಗೆ ಸಿಡಿದೇಳುವ ಮ್ಯಾಕ್ಸ್ ವೆಲ್ ಹಾಗೂ ಜೋಶ್ ಇಂಗ್ಲೀಸ್ ನಂತಹ ಬ್ಯಾಟ್ಸ್ ಮನ್ ವಿಕೇಟ್ ಬೇಗ ಪಡೆದರೆ ಸಾಕು, ಭಾರತ ಗೆಲ್ಲುವುದು ಪಕ್ಕಾ. ನೀವೇನಂತಿರಿ, ಭಾರತದ ಆಸ್ಟ್ರೇಲಿಯಾ ವಿರುದ್ಧ ಯಾವ ಕಾರಣಕ್ಕಾಗಿ ಹೆಚ್ಚು ಸೋಲುತ್ತದೆ? ಇಂದಿನ ಪಂದ್ಯ ಯಾರು ಗೆಲ್ಲಬಹುದು. ಯಾರು ಸೋಲಬಹುದು. ಚಾಂಪಿಯನ್ ಟ್ರೋಫಿ ಯಾರು ಗೆಲ್ಲಬಹುದು ಎಂಬುದನ್ನು ಕಮೆಂಟ್ ಮಾಡಿ ತಿಳಿಸಬಹುದು.
ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ಇಲ್ಲಿಯವರೆಗೆ 2 ವಿಕೇಟ್ ನಸ್ಟಕ್ಕೆ 82 ರನ್ ಗಳಿಸಿದೆ. ಟ್ರಾವೆಸ್ ಹೆಡ್ 39 ರನ್ ಗಳಿಸಿ ಔಟಾಗಿದ್ದಾರೆ.