ಆಧಾರ್ ಲಿಂಕ್ ಆಗದ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

Written by Ramlinganna

Published on:

Adhar not seed list:  ರಾಜ್ಯದ  ರೈತರ ಆಧಾರ್ ಕಾರ್ಡಿಗೆ ಯಾವ ಯಾವ ರೈತರ  ಎಫ್ಐಡಿ ಲಿಂಕ್ ಆಗಿಲ್ಲವೋ ಅಂತಹ ರೈತರ ಪಟ್ಟಿ ಬಿಡುಗಡೆಯಾಗಿದೆ. ಹೌದು, ರೈತರು ಈಗ ತಮ್ಮ ಬಳಿಯಿರುವ ಮೊಬೈಲ್ ನಿಂದಲೇ ಪಟ್ಟಿಯಲ್ಲಿ ಯಾವ ಯಾವ ರೈತರ ಹೆಸರಿದೆ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ. .

Adhar not seed list ಆಧಾರ್ ಕಾರ್ಡಿಗೆ ಎಫ್ಐಡಿ ಲಿಂಕ್ ಆಗದೆ ಇರುವ ರೈತರ ಪಟ್ಟಿ ಹೀಗೆ ಚೆಕ್ ಮಾಡಿ

ಆಧಾರ್ ಕಾರ್ಡಿಗೆ ಎಫ್ಐಡಿ ಲಿಂಕ್ ಆಗದೆ ಇರುವ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಲು ಈ

https://fruitspmk.karnataka.gov.in/MISReport/AadharNotSeededReport.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಎಲ್ಲಾ ಜಿಲ್ಲೆಗಳ ಪಟ್ಟಿ ಕಾಣಿಸುತ್ತದೆ. ಅಲ್ಲಿ ನಿಮ್ಮ ಜಿಲ್ಲೆಯ ಹೆಸರು ಕಾಣಿಸುತ್ತದೆ  ಇದಾದ ನಂತರ SC, ST ಹಾಗೂ Others ಹಾಗೂ ಒಟ್ಟು ಕಾಣಿಸುತ್ತದೆ.  ಅಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮಗೆ ಆ ಜಿಲ್ಲೆಗೆ ಸೇರಿದ ಎಲ್ಲಾ ತಾಲೂಕುಗಳ ಹೆಸರು ಕಾಣಿಸುತ್ತದೆ.

ಅಲ್ಲಿ ನಿಮ್ಮ ತಾಲೂಕು ಮೇಲೆ ಕ್ಲಿಕ್ ಮಾಡಬೇಕು. ನಂತರ ಹೋಬಳಿ ಹೆಸರು ಕಾಣಿಸುತ್ತದೆ. ಅಲ್ಲಿ ನಿಮ್ಮ ಹೋಬಳಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಹೆಸರು ಕಾಣಿಸುತ್ತದೆ. ಅಲ್ಲಿ ನಿಮ್ಮ ಗ್ರಾಮಗಳ ಮುಂದೆ ಯಾವ ಸಮುದಾಯದವರು ಎಷ್ಟು ಜನರ ಆಧಾರ್ ಕಾರ್ಡಿಗೆ ಎಫ್ಐಡಿ ಲಿಂಕ್ ಆಗಿಲ್ಲ ಎಂಬುದು ಕಾಣಿಸುತ್ತದೆ.

ಬೆಳೆಹಾನಿ, ಬೆಳೆ ವಿಮೆ ಪರಿಹಾರ ಜಮೆಯಾಗಲು ರೈತರ ಹೆಸರಿಗೆ ಎಫ್ಐಡಿ ಆಗಿರಬೇಕು?

ಬರಗಾಲ ಪರಿಹಾರ ಜಮೆಯಾಗಬೇಕಾದರೆ ರೈತರ ಹೆಸರಿಗೆ ಎಫ್ಐಡಿ ಆಗಿರಬೇಕು. ಹೌದು, ಯಾವ ರೈತರ ಹಸರಿಗೆ ಎಫ್ಐಡಿ ಆಗಿದೆಯೋ ಅಂತಹ ರೈತರ ಹೆಸರಿಗೆ ಮಾತ್ರ ಬರ ಪರಿಹಾರ ಹಣ ಜಮೆಯಾಗುತ್ತದೆ.

ಇದನ್ನೂ ಓದಿ ನಿಮ್ಮ ಜಮೀನಿನ ಅಕ್ಕಪಕ್ಕ ಯಾರಿಗೆಷ್ಟು ಜಮೀನಿದೆ? ಚೆಕ್ ಮಾಡಿ

ಹಾಗಾಗಿ ನಿಮ್ಮ ಹೆಸರಿಗೆ ಎಫ್ಐಡಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಲು ಈ

ರೈತರ ಎಫ್ಐಡಿ ಆಗಿದೆಯೋ ಇಲ್ಲವೋ ಚೆಕ್ ಮಾಡುವುದು ಹೇಗೆ?

ರೈತರ ಹೆಸರಿನಲ್ಲಿ ಎಫ್ಐಡಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಯಾವ ದಾಖಲೆಯೂ ಬೇಕಾಗಿಲ್ಲ. ಕೇವಲ ತಮ್ಮ ಬಳಿಯಿರುವ ಆಧಾರ್ ಕಾರ್ಡ್ ಇದ್ದರೆ ಸಾಕು. ಹೌದು, ನಿಮ್ಮ ಆಧಾರ್ ಕಾರ್ಡ್ ದಿಂದ ಎಫ್ಐಡಿ ಚೆಕ್ ಮಾಡಬಹುದು.

ರೈತರ ಎಫ್ಐಡಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://fruitspmk.karnataka.gov.in/MISReport/GetDetailsByAadhaar.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಫ್ರೂಟ್ಸ್ ಐಡಿ ಚೆಕ್ ಮಾಡುವ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಹನ್ನೆರಡು ಅಂಕಿಗಳ ಆಧಾರ್ ಕಾರ್ಡ್ ನಂಬರ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಆಗಿದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತದೆ.  ಅಲ್ಲಿ ನಿಮ್ಮ ಎಫ್ಐಡಿ, ಪಿಎಂಕೆಐಡಿ ಕಾಣಿಸುತ್ತದೆ. ಅದರ ಕೆಳಗಡೆ ನಿಮ್ಮ ಹೆಸರು ಕಾಣಿಸುತ್ತದೆ. ಇದೇ ರೀತಿ ನೀವು ನಿಮ್ಮ ಕುಟುಂಬದ ಹೆರಿನಲ್ಲಿ ಜಮೀನು ಇದ್ದರೆ ಅವರ ಹೆಸರಿಗೂ ಎಫ್ಐಡಿ ಮಾಡಿಸಿರಬೇಕು.  ಇಲ್ಲಿ ಚೆಕ್ ಸಹ ಮಾಡಬಹುದು.

ಎಫ್ಐಡಿಯಿಂದ ಯಾವ ಯಾವ ಇಲಾಖೆಯಿಂದ ಸೌಲಭ್ಯ ಪಡೆಯಬಹುದು?

ಹೌದು, ಈಗ ಸರ್ಕಾರದ ಯಾವುದೇ ಸೌಲಭ್ಯ ಪಡೆಯಬೇಕಾದರೆ ಫ್ರೂಟ್ಸ್ ಐಡಿ ಕಡ್ಡಾಯವಾಗಿದೆ. ಬೆಳೆ ವಿಮೆಯಾಗಲಿ, ಬೆಳೆ ಹಾನಿ ಪರಿಹಾರವಾಗಲಿ, ಬರಗಾಲ ಪರಿಹಾರವಾಗಲಿ ಇದರೊಂದಿಗೆ ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆಇಲಾಖೆ, ಹಾಗೂ ಕೃಷಿ ಇಲಾಖೆಯಿದ ವಿವಿಧ ಸೌಲಭ್ಯ ಪಡೆಯಲು ಫ್ರೂಟ್ಸ್ ಐಡಿ ಕಡ್ಡಾಯವಾಗಿದೆ.

Leave a Comment