Free goat and sheep training : ಕುರಿ ಮೇಕೆ ಸಾಕಾಣಿಕೆಯಲ್ಲಿ ಆಸಕ್ತಿಯಿರುವ ರೈತರಿಗೆ ಇಲ್ಲಿದೆ ಸಂತಸದ ಸುದ್ದಿ. 10 ದಿನಗಳ ಕಾಲ ಉಚಿತವಾಗಿ ಕುರಿ, ಮೇಕೆ ಸಾಕಾಣಿಕೆತರಬೇತಿ ನೀಡಲಾಗುವುದು.
ಹೌದು, ಕಲಬುರಗಿ ಎಸ್.ಬಿ.ಐ.ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಉಚಿತವಾಗಿ ಏಪ್ರೀಲ್ 4 ರಿಂದ 13 ರವರೆಗೆ 10 ದಿನಗಳ ಕಾಲ ಉಚಿತವಾಗಿ ಕುರಿ ಮತ್ತು ಆಡು ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಎಸ್.ಬಿ.ಐ ಆರ್.ಸೆಟ್ ನಿರ್ದೇಶಕರು ತಿಳಿಸಿದ್ದಾರೆ.
ಈ ತರಬೇತಿ ಸಂದರ್ಭದಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯ ನೀಡಲಾಗುತ್ತದೆ. ವಯೋಮಿತಿ 18 ರಿಂದ 45 ವಯೋಮಾನದಳಗಿರಬೇಕು. ಬಿಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ರೇಶನ್ ಕಾರ್ಡ್ಇರಬೇಕು. ಎಮ್.ಜಿ.ಎನ್.ಆರ್.ಇ.ಜಿ.ಎ ಕಾರ್ಡ್ ಹೊಂದಿದ ಕುಟುಂಬದ ನಿರುದ್ಯೋಗಿ ಅಭ್ಯರ್ಥಿಗಳು ಸಂಸ್ಥೆಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳೊಂದಿಗೆ ಏಪ್ರೀಲ್ 2 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತರಬೇತಿ ಸಂಸ್ಥೆಯಲ್ಲಿ ಇದೇ ಏಪ್ರೀಲ್ 2 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3.30 ಗಂಟೆಯವರೆಗೆ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು.
ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಎಸ್.ಬಿ.ಐ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯನ್ನು ಹಾಗೂ ಮೊಬೈಲ್ ಸಂಖ್ಯೆ 9448994585, 9886781239 ಹಾಗೂ 9900135705 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
Free goat and sheep training ಕುರಿ ಮೇಕೆ ಸಾಕಾಣಿಕೆಯಲ್ಲಿ ನಿಮಗೆ ಆಸಕ್ತಿಯಿದೆಯೇ?
ಕುರಿ ಮೇಕೆ ಸಾಕಾಣಿಕೆಯಲ್ಲಿ ಆಸಕ್ತಿಯಿರುವ ಹಾಗೂ ಕುರಿ ಸಾಕಾಣಿಕೆ ಮಾಡಿ ಸ್ವಾವಲಂಬಿಯಾಗಿ ಬದುಕಲು ಕುರಿ ಸಾಕಾಣಿಕೆ ಮಾಡಬಹುದು. ಹೌದು, ಕುರಿ ಮೇಕೆ ಸಾಕಾಣಿಕೆ ಮಾಡಿ ಲಾಭ ಹೇಗೆ ಮಾಡಿಕೊಳ್ಳಬೇಕೆಂಬುದರ ಕುರಿತು ತರಬೇತಿ ನೀಡಲಾಗುವುದು. ಇದರೊಂದಿಗೆ ತರಬೇತಿಯಲ್ಲಿ ಕುರಿ ಮೇಕೆಗಳಿಗೆ ಎಂತಹ ಆಹಾರ ನೀಡಬೇಕು. ಆರೈಕೆ ಹೇಗೆ ಮಾಡಬೇಕು ಎಂಬುದರ ಕುರಿತು ತರಬೇತಿ ನೀಡಲಾಗುವುದು.
ಇದನ್ನೂ ಓದಿ : ಬರಗಾಲ ಪರಿಹಾರ ಬೆಳೆ ವಿಮೆ ಜಮೆಯ ಸ್ಟೇಟಸ್ ಚೆಕ್ ಮಾಡಿ
ಕುರಿ ಮೇಕೆ ಘಟಕ ಸ್ಥಾಪನೆಗೆ ಸರ್ಕಾರದಿಂದ ಸಬ್ಸಿಡಿ ನೀಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಎಷ್ಟು ಸಬ್ಸಿಡಿ ನೀಡಲಾಗುವುದು ಎಂಬುದರ ಮಾಹಿತಿ ನೀಡಲಾಗುವುದು.ಯಾವ ಯಾವ ಬ್ಯಾಂಕಿನಲ್ಲಿ ಸಾಲ ಸೌಲಭ್ಯ ನೀಡಲಾಗುವುದು ಎಂಬ ಮಾಹಿತಿ ಸಹ ರೈತರಿಗೆ ಉಚಿತವಾಗಿ ನೀಡಲಾಗುವುದು.
ಇನ್ನೇಕೆ ತಡ ಕೂಡಲೇ ಅರ್ಜಿ ಸಲ್ಲಿಸಿ ತರಬೇತಿಯಲ್ಲಿ ಭಾಗವಹಿಸಲು ಕೋರಲಾಗಿದೆ.
Free goat and sheep training ಪಶುಪಾಲನೆಯ ಸಹಾಯವಾಣಿ ನಂಬರಿಗೆ ಕರೆ ಮಾಡಿ ಮಾಹಿತಿ ಪಡೆಯರಿ
ರಾಜ್ಯದ ಯಾವ ಜಿಲ್ಲೆಯಲ್ಲಿ ಯಾವಾಗ ಕುರಿ ಮೇಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ ತರಬೇತಿನೀಡಲಾಗುವುದು ಎಂಬುದರ ಕುರಿತು ರೈತರು ಈಗ ಮನೆಯಲ್ಲಿಯೇ ಕುಳಿತು ಮಾಹಿತಿ ಪಡೆಯಬಹುದು. ಹೌದು, ಪಶುಪಾಲನೆಯ ಪ್ರಾಣಿ ಕಲ್ಯಾಣ ಸಹಾಯವಾಣಿ 8277100200 ಗೆ ಕರೆ ಮಾಡಬಹುದು. ಈ ಉಚಿತ ಸಹಾಯವಾಣಿಯು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ರೈತರು ಈ ನಬರಿಗೆ ವ್ಯಾಟ್ಸ್ ಆ್ಯಪ್ ಮೂಲಕವೂ ಸಂಪರ್ಕಿಸಬಹುದು.
ಪಶುಗಳಿಗೆ ಬರುವ ರೋಗಗಳಿಗೆ ಪರಿಹಾರ ಕುರಿತು ಹಾಗೂ ಪಶುಪಾಲನೆಯಲ್ಲಿ ಯಾವ ಜಿಲ್ಲೆಗೆ ಯಾವ ತಳಿ ಸೂಕ್ತವಾಗಿರುತ್ತದೆ ಎಂಬುದರ ಮಾಹಿತಿಯನ್ನೂ ಸಹ ರೈತರಿಗೆ ನೀಡಲಾಗುವುದು. ಸರಿಯಾದ ಮಾಹಿತಿ ಪಡೆದು ಪಶುಪಾಲನೆ ಮಾಡಬೇಕು. ಒಂದೊಂದು ಜಿಲ್ಲೆಗೆ ಅಲ್ಲಿನ ಹವಾಮಾನಕ್ಕೆ ಅನುಗುಣವಾಗಿ ಪಶುಪಾಲನೆ ಮಾಡಬೇಕಾಗುತ್ತದೆ.
ಕಲ್ಯಾಣಕರ್ನಾಟಕದಲ್ಲಿ ಅತೀ ಬಿಸಲು ಇರುತ್ತದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಂಗಳೂರು, ಉಡುಪಿ ಜಿಲ್ಲೆಗಳಲ್ಲಿ ಹವಾಮಾನ ಸ್ವಲ್ಪ ವತ್ಯಾಸ ಇರುವುದರಿಂದ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ತಳಿಗಳನ್ನು ಸಾಕಿ ಉತ್ತಮ ಲಾಭ ಪಡೆದುಕೊಳ್ಳಬಹುದು.