ಕೃಷಿ ಯಂತ್ರೋಪಕರಣಗಳ ಖರೀದಿಗೆ ಶೇ. 50 ರಷ್ಟು ಸಬ್ಸಿಡಿ ನೀಡಲು ಅರ್ಜಿ ಆಹ್ವಾನ

Written by Ramlinganna

Published on:

50 percentage subsidy get : 2026-27 ನೇ ಸಾಲಿಗೆ ತೋಟಗಾರಿಕೆ ಇಲಾಖೆಯಿಂದ  ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಯೋಜನೆಗಳಡಿ ಬಳ್ಳಾರಿಯ ಜಿಲ್ಲೆಯ ಹೊಸಪೇಟೆ ತಾಲೂಕಿನ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ, ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ತಾಳೆಬೆಳೆ  ಯೋಜನೆಯಡಿ ತಾಳೆಬೆಳೆ ಪ್ರದೇಶ ವಿಸ್ತರಣೆ, ನಿರ್ವಹಣೆ, ಅಂತರ್ ಬೆಳೆ,ಬೋರ್ ವೆಲ್ ಮತ್ತು ಡೀಸೆಲ್ ಪಂಪ್ಸೆಟ್, ರಾಷ್ಟ್ರೀಯ  ಕೃಷಿ ವಿಕಾಸ ಯೋಜನೆಯಡಿ ಫಾರಂಗೇಟ್, ಸೋಲಾರ್ ಪಂಪ್ ಸೆಟ್, ಕಡಿಮೆ ವೆಚ್ಚದ ಹಣ್ಣು ಮಾಗಿಸುವ ಘಟಕ, ಸ್ವಯಂ ಚಾಲಿತ ಹವಾಮಾನ ಮುನ್ಸೂಚನಾ ಘಟಕ, ಕೃಷಿ ಯಾಂತ್ರೀಕರಣ ಉಪ ಅಭಿಯಾನ ಯೋಜನೆಯಡಿ ವಿವಿಧ ಯಂತ್ರೋಪಕರಣಗಳ ಖರೀದಿಗೆ ಮಧುವನ, ಜೇನು ಸಾಕಾಣಿಕೆ ಅಭಿವೃದ್ಧಿ ಯೋಜನೆ ಯಡಿ ಜೇನುಪೆಟ್ಟಿಗೆಗಳ ಖರೀದಿಗೆ, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ ಯೋಜನೆಯಡಿ ದಾಳಿಂಬೆ, ಬಾಳೆ, ಪಪ್ಪಾಯ, ಹಲಸು ಸೀತಾಫಲ ಹಾಗೂ ಬೆಣ್ಣೆ ಹಣ್ಣು ಇತರೆ ಹಾಗೂ ಕೊಯ್ಲೋತ್ತರ ನಿರ್ವಹಣೆ ಘಟಕ ಯೋಜನೆಯಲ್ಲಿ ಈರುಳ್ಳಿ ಶೇಖರಣಾ ಘಟಕ, ಫಾರಂಗೇಟ್ ಪ್ಯಾಕ್ ಹೌಸ್ ಸಂರಕ್ಷಿತ ಬೇಸಾಯ ನೆರಳು ಪರದೆ ಘಟಕ, ಪಕ್ಷಿ ನಿರೋಧಕ ಬಲೆ, ಪ್ಲಾಸ್ಟಿಕ ಹದಿಕೆ ಘಟಕಗಳಿಗೆ ಸಹಾಯಧನ ನೀಡಲಾಗುವುದು. ಮಾಹಿತಿಗಾಗಿ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಲು ಕೋರಲಾಗಿದೆ.

50 percentage subsidy get  ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗೆ ಅರ್ಜಿ ಆಹ್ವಾನ

ಮೈಸೂರು ಜಿಲ್ಲೆಯ ನಂಜನಗೂಡು ತೋಟಗಾರಿಕೆ ಇಲಾಖೆ ವತಿಯಿಂದ 2026-27ನೇ ಸಾಲಿನ ವಿವಿಧ ಯೋಜನೆಗಳಿಗೆ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಿ. ಚಂದ್ರು ತಿಳಿಸಿದ್ದಾರೆ.

ರಾಷ್ಟ್ರೀಯ ಎಣ್ಣೆತಾಳೆ ಅಭಿಯಾನ ಯೋಜನೆಗಳಡಿ ಹೊಸದಾಗಿ ಪ್ರದೇಶ ವಿಸ್ತರಣೆ, ನಿರ್ವಹಣೆ ಮತ್ತು ಅಂತರ ಬೆಳೆ ಬೆಳೆಯಲು ಸಹಾಯಧನ ನೀಡಲಾಗುವುದು.

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ್ಲಾಸ್ಟಿಕ್ ಹೊದಿಕೆ, ಅಂಗಾಂಶ ಬಾಳೆ, ಕಂದು ಬಾಳೆ, ತರಕಾರಿ ಬೆಳೆ ಬೆಳೆಯಲು ಸಹಾಯಧನ ನೀಡಲಾಗುವುದು.

ಜೊತೆಗೆ ಈ ಯೋಜನೆಯಡಿ ತರಕಾರಿ ಬೆಳೆಗಾರರಿಗೆ ಅನುಕೂಲವಾಗುವಂತೆ ಶೇ. 50ರ ರಿಯಾಯಿತಿ ದರದಲ್ಲಿ ಲಘು ಪೋಷಕಾಂಶ ವಿತರಿಸಲಾಗುವುದು.

ಪ್ರಧಾನಮಂತ್ರಿ ರಾಷ್ಟ್ರೀಯ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಲು ಸಹಾಯಧನ ನೀಡಲಾಗುವುದು.

ತೋಟಗಾರಿಕೆಯಲ್ಲಿ ರೈತರಿಗೆ ಯಾಂತ್ರೀಕರಣ ಘಟಕಕ್ಕೆ ಸಹಾಯಧನ ನೀಡಲಾಗುತ್ತಿದೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೆಂಗು ಶೇಖರಣಾ ಘಠಕ, ಲಘು ಪೋಷಕಾಂಶಕ್ಕೆ ಸಹಾಯಧನ ನೀಡಲಾಗುವುದು. ಈ ಎಲ್ಲಾ ಯೋಜನೆಗಳಿಗೆ ರೈತರು ಅರ್ಜಿ ಸಲ್ಲಿಸಿ ಈ ಯೋಜನೆಯ ಸದುಪಯೋಗ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ತೋಟಗಾರಿಕೆ ಇಲಾಖೆಯಿಂದ ಸಹಾಯಧನ ನೀಡಲು ಅರ್ಜಿ ಆಹ್ವಾನ

ದಾವಣಗೆರೆ ಜಿಲ್ಲೆಯ ರೈತರಿಂದ ಪ್ರಸಕ್ತ ಸಾಲಿನ ಹೊನ್ನಾಳ್ಳಿ ಮತ್ತು ನ್ಯಾಮತಿ ತಾಲೂಕಿನ ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ತೋಟಗಾರಿಕೆ ಮಿಷನ್ ಯೋಜನೆಯಡಿ ಕೃಷಿ ಹೊಂಡ, ಟ್ರ್ಯಾಕ್ಟರ್ ಪ್ರಾಥಮಿಕ ಸಂಸ್ಕರಣಾ ಘಟಕ ನಿರ್ಮಾಣ, ಎರೆಹುಳು ಘಟಕ ನಿರ್ಮಣ, ಎಸ್ಎಂಎಎಂ ಯೋಜನೆಯಡಿ ಯಂತ್ರೋಪಕರಣಗಳ ಖರೀದಿಗೆ ಸಹಾಯಧನ ನೀಡಲಾಗುವುದು.

ಇದನ್ನೂ ಓದಿ ಬೆಳೆ ವಿಮೆ ಅರ್ಜಿ ಆಹ್ವಾನ ಯಾವ ಬೆಳೆಗೆ ಎಷ್ಟು ಜಮೆ? ಮಾಹಿತಿ ಇಲ್ಲಿದೆ

ರಾಷ್ಟ್ರೀಯ ಕೃಶಿ ವಿಕಾಸ ಯೋಜನೆಯಡಿ ಸೋಲಾರ್ ಪಂಪ್ ಸೆಟ್ ಲಘು ಪೋಷಕಾಂಶಗಳ ಮಿಶ್ರಣ, ಹವಾಮಾನ ಆಧಾರಿತ ಘಟಕ, ಫಾರಂಗೇಟ್, ಕಡಿಮೆ ವೆಚ್ಚದ ಹಣ್ಮು ಮಾಗಿಸುವ ಘಟಕ, ತೆಂಗು ಶೇಖರಣ ಘಟಕಗಳ ಸ್ಥಾಪನೆಗೆ ಸಬ್ಸಿಡಿ ನೀಡಲಾಗುವುದು

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಘಟಕ ಅಳವಡಿಸಿಕೊಳ್ಳಲು 2 ಹೆಕ್ಟೇರ್ ವರೆಗೆ ಶೇ. 90 ರಷ್ಟು ಸಹಾಯಧನ ನೀಡಲಾಗುವುದು.

ಆಸಕ್ತರು ಜೂನ್ 30 ರೊಳಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಹೊನ್ನಾಳಿ ಕಚೇರಿ ಹಾಗೂ ಹೋಬಳಿವಾರು ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ಹೊನ್ನಾಳಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ

Leave a Comment