ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗಲಿದೆ ? ಲೆಕ್ಕಾಚಾರ ಇಲ್ಲಿದೆ

Written by Ramlinganna

Published on:

Crop insurance calculation check : ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸುವ ರೈತರಿಗೆ ಅತ್ಯಂತ ಮಹತ್ವದ ಮಾಹಿತಿ ಇಲ್ಲಿದೆ.

ರಾಜ್ಯದ ಬಹುತೇಕ ರೈತರು ವಿಮೆ ಮಾಡಿಸುತ್ತಾರೆ. ಆದರೆ ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗಲಿದೆ. ವಿಮೆ ಹಣ ಎಲ್ಲಿ ಕಟ್ಟಬೇಕು. ಯಾವ ಯಾವ ಬೆಳೆಗೆ ವಿಮೆ ಮಾಡಿಸಬಹದು. ವಿಮೆ ಹಣ ಹೇಗೆ ನಿರ್ಧರಿಸುತ್ತಾರೆ. ವಿಮೆ ಮಾಡಿಸಿದ ನಂತರ ಯಾರಿಗೆ ಸಂಪರ್ಕಿಸಬೇಕು ಎಂಬುದರ ಬಗ್ಗೆ ಮಾಹಿತಿ ಇರುವುದಿಲ್ಲ. ಹಾಗಾಗಿ ಈ ಲೇಖನವನ್ನು ರೈತರಿಗಾಗಿ ಸಮರ್ಪಿಸಲಾಗುತ್ತಿದೆ.

ಪ್ರಸಕ್ತ ಸಾಲಿನ 2026-27ನೇ ಸಾಲಿಗೆ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ.

2026-27ನೇ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ವಿವಿಧ ಬೆಳೆಗಳ ವಿಮೆ ಮಾಡಿಸಲು ಅರ್ಜಿ ಆಹ್ವಾನಿಸಲಾಗಿದೆ.

Crop insurance calculation check ಯಾವ ಯಾವ ಬೆಳೆಗೆ ವಿಮೆ ಮಾಡಿಸಬಹುದು. ವಿಮೆ ಮಾಡಿಸಿದರೆ ಎಷ್ಟು ಹಣ ಜಮೆಯಾಗಬಹುದು

ರೈತರು ತಮ್ಮ ಊರಿನ ವ್ಯಾಪ್ತಿಯಲ್ಲಿರುವ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದನ್ನು ಚೆಕ್ ಮಾಡಲು ಈ

https://www.samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಕುರಿತು ಮಾಹಿತಿ ಪಡೆಯುವ ಪೇಜ್ ಸಂರಕ್ಷಣೆ ತೆರೆದುಕೊಳ್ಳುತ್ತದೆ.

ಅಲ್ಲಿ ನೀವು ಮುಂದೆ ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. Premium Calculator ಮೇಲೆ ಕ್ಲಿಕ್ ಮಾಡಬೇಕು ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ಇದನ್ನೂ ಓದಿ  ಹನಿ ನೀರಾವರಿ ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನ ನೀಡಲು ಅರ್ಜಿ ಆಹ್ವಾನ

ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಊರಿಂದ ನೀವು ಯಾವ ಯಾವ ಬೆಳೆಗಳ ವಿಮೆ ಮಾಡಿಸಬಹುದು ಎಂಬ ಬೆಳೆಗಳ ಹೆಸರು ಕಾಣಿಸುತ್ತದೆ. ಬೆಳೆ ಆಯ್ಕೆ ಮಾಡಿಕೊಂಡ ನಂತರ ನೀವು ಎಷ್ಟು ಎಕರೆ  ವಿಮೆ ಮಾಡಿಸಬೇಕೆಂದುಕೊಂಡಿದ್ದೀರೋ ಅಲ್ಲಿ ನಮೂದಿಸಬೇಕು. ನಂತರ Show Premium ಮೇಲೆ ಕ್ಲಿಕ್ ಮಾಡಬೇಕು. ಉದಾಹರಣೆಗೆ ನೀವು ತೊಗರಿ ಒಂದು ಎಕರೆಗೆ ವಿಮೆ ಮಾಡಿಸಬಹುದಾದರೆ ಎಕೆರೆಗೆ ರೈತರು 466 ರೂಪಾಯಿ ಪಾವತಿಸಬೇಕು. ನಿಮ್ಮ ಬೆಳೆ ಸಂಪೂರ್ಣ ಹಾನಿಯಾದರೆ ನಿಮಗೆ 23 ಸಾವಿರ ರೂಪಾಯಿಯವರೆಗೆ ವಿಮೆ ಹಣ ಜಮೆಯಾಗಲಿದೆ. ಇದೇ ರೀತಿ ನೀವು ಬೇರೆ ಬೇರೆ ಬೆಳೆಗಳನ್ನು  ಚೆಕ್ ಮಾಡಬಹುದು. ನಂತರ ನಿಮ್ಮ  ಹತ್ತಿರದ ರೈತ ಸಂಪರ್ಕ ಕೇಂದ್ರ, ಅಥವಾ ಸಿಎಸ್.ಸಿ ಕೇಂದ್ರಗಳು, ಗ್ರಾಮ ಒನ್, ಬೆಂಗಳೂರು, ಒನ್ ಕೇಂದ್ರಗಳಲ್ಲಿ ವಿಮೆ ಮಾಡಿಸಬಹುದು. ವಿಮೆ ಮಾಡಿಸಿದ ನಂತರ ನೀವು ಯಾವ ವಿಮಾ ಕಂಪನಿಗೆ ವಿಮೆ ಹಣ ಪಾವತಿಸಿದ್ದೀರೋ ಆ ವಿಮಾ ಕಂಪನಿಯ ಮೊಬೈಲ್ ನಂಬರ್ ಪಡೆದುಕೊಳ್ಳಬೇಕು.

ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿಯಾದರೆ ನೀವು ವಿಮಾ ಕಂಪನಿಯ ಪ್ರತಿನಿಧಿಗೆ ಕರೆ ಮಾಡಬೇಕಾಗುತ್ತದೆ. ಆಗ ವಿಮಾ ಕಂಪನಿಯ ಪ್ರತಿನಿಧಿ ರೈತರ ಜಮೀನಿಗೆ ಬಂದು ಬೆಳೆ ಪರಿಶೀಲನೆ ಮಾಡಿ ವಿಮೆ ಹಣ ನಿರ್ಧರಿಸುತ್ತಾರೆ. ನಂತರ ರೈತರ ಖಾತೆಗೆ ವಿಮೆ ಹಣ ಜಮೆಯಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ರೈತರು ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಬ್ಯಾಂಕ್ ಅಧಿಕಾರಿ, ಅಗ್ರಿಕಲ್ಚರ್ ವಿಮಾ ಕಂಪನಿ ಸಂಸ್ಥೆಯ ಪ್ರತಿ ನಿಧಿಗಳಿಗೆ ಅಥವಾ ವಿಶೇಷವಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಇಲಾಖೆಗೆ ಭೇಟಿ ನೀಡಿ ರೈತರು ಮಾಹಿತಿ ಪಡೆಯಬಹುದು.

Leave a Comment