Bargala parihara ಬಿಡುಗಡೆಃ ನಿಮಗೆಷ್ಟು ಜಮೆ? ಚೆಕ್ ಮಾಡಿ

Written by Ramlinganna

Updated on:

Bargala parihara : ರಾಜ್ಯದ ರೈತರಿಗೆ ಗುಡ್ ನ್ಯೂಸ್. ಕೊನೆಗೂ ಕರ್ನಾಟಕ ಸರ್ಕಾರ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ಹೌದು ರಾಜ್ಯದ 31 ಜಿಲ್ಲೆಗಳ ಬೆಳೆ ನಷ್ಟ ಪರಿಹಾರ ಆಧರಿಸಿ ಎಸ್.ಡಿ.ಆರ್.ಎಫ್ ಅಡಿಯಲ್ಲಿ 324 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ.

ಮುಂಗಾರು ವೈಫಲ್ಯದಿಂದ ರೈತರ ಅಪಾರ ಬೆಳೆ ಹಾನಿಯಾಗಿತ್ತು. ಹಾಗಾಗಿ ರಾಜ್ಯ ಸರ್ಕಾರ 216 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿತ್ತು. ಬರಗಾಲ ಪರಿಹಾರಕ್ಕಾಗಿ ಕಾಯುತ್ತಿರುವ ರೈತರಿಗೆ ಕೊನೆಗೂ ಸಂತಸದ ಸುದ್ದಿ ಸಿಕ್ಕಿದೆ.

ಹಲವಾರು ರೈತ ಸಂಘಟನೆಗಳು ಬರ ಪರಿಹಾರಕ್ಕಾಗಿ ಒತ್ತಾಯ ಮಾಡಿದ್ದವು. ರೈತ ಸಂಘಟನೆಗಳ ಆಗ್ರಹಕ್ಕೆ ಮಣಿದ ಸರ್ಕಾರ ಕೊನೆಗೂ ಬರ ಪರಿಹಾರ ಹಣ ಬಿಡುಗಡೆ ಮಾಡಿದೆ.

Bargala parihara ಜಮೆಯಾಗಿರುವುದನ್ನುಚೆಕ್ ಮಮಾಡುವುದು ಹೇಗೆ ?

ಬರಗಾಲ ಪರಿಹಾರ ಯಾವ ರೈತರಿಗೆ ಎಷ್ಟು ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು   ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು. ಸೆಲೆಕ್ಟ್ ಕಾಲಾಮಿಟಿ ಟೈಪ್ ನಲ್ಲಿ Drought ಆಯ್ಕೆ ಮಾಡಿಕೊಳ್ಳಬೇಕು. ನಂತರ ಸೆಲೆಕ್ಟ್ ಇಯರ್ ಟೈಪ್ ನಲ್ಲಿ 2023-24 ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ 12 ಅಂಕಿಗಳ ಆಧಾರ್ ಕಾರ್ಡ್ನಮೂದಿಸಬೇಕು. ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು. ನಂತರ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಬರಗಾಲ ಪರಿಹಾರ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಯಾವ ಜಿಲ್ಲೆಗೆ ಎಷ್ಟು ಬರ ಪರಿಹಾರ ಹಣ ಬಿಡುಗಡೆ?

ಬೆಂಗಳೂರು ನಗರಕ್ಕೆ 7.50ಕೋಟಿ ರೂಪಾಯಿ, ಬೆಂಗಳೂರು ಗ್ರಾಮಾಂತರಕ್ಕೆ 6 ಕೋಟಿ ರೂಪಾಯಿ, ರಾಮನಗರ ಜಿಲ್ಲೆಗೆ 7.50 ಕೋಟಿ ರೂಪಾಯಿ, ಕೋಲಾರ ಜಿಲ್ಲೆಗೆ 9 ಕೋಟಿ ರೂಪಾಯಿ, ಚಿಕ್ಕಬಳ್ಳಾಪುರ ಜಿಲ್ಲೆಗೆ 9 ಕೋಟಿ ರೂಪಾಯಿ, ತುಮಕೂರು ಜಿಲ್ಲೆಗೆ 15 ಕೋಟಿ ರೂಪಾಯಿ, ಚಿತ್ರದುರ್ಗ ಜಿಲ್ಲೆಗೆ 9 ಕೋಟಿ ರೂಪಾಯಿ, ದಾವಣಗೆರೆ ಜಿಲ್ಲೆಗೆ 9 ಕೋಟಿ ಹಾಗೂ ಚಾಮರಾಜನಗರ ಜಿಲ್ಲೆಗೆ 7.50 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ.

ಇದನ್ನೂ ಓದಿ ಗೃಹಲಕ್ಷ್ಮೀ ಯೋಜನೆಯ ಎರಡನೇ ಕಂತಿನ ಹಣ ಬಿಡುಗಡೆ- ಯಾರಿಗೆ ಜಮೆ? ಇಲ್ಲೇ ಚೆಕ್ ಮಾಡಿ

ಅದೇ ರೀತಿ ಮೈಸೂರು ಜಿಲ್ಲೆಗೆ 13.50 ಕೋಟಿ, ಮಂಡ್ಯ ಜಿಲ್ಲೆಗೆ 10.50 ಕೋಟಿ ರೂಪಾಯಿ, ಬಳ್ಳಾರಿ ಜಿಲ್ಲೆಗೆ 7.50 ಕೋಟಿ ರೂಪಾಯಿ , ಕೊಪ್ಪಳ ಜಿಲ್ಲೆಗೆ 10.50 ಕೋಟಿ ರೂಪಾಯಿ, ರಾಯಚೂರು ಜಿಲ್ಲಿಗೆ 9 ಕೋಟಿ ರೂಪಾಯಿ, ಕಲಬುರಗಿ ಜಿಲ್ಲೆಗೆ 16.50 ಕೋಟಿ ರೂಪಾಯಿ, ಬೀದರ್ ಜಿಲ್ಲೆಗೆ 4.50 ಕೋಟಿ ರೂಪಾಯಿ, ಬೆಳಗಾವಿಜಿಲ್ಲೆಗೆ 22.50 ಕೋಟಿ ರೂಪಾಯಿ, ಬಾಗಲಕೋಟೆ ಜಿಲ್ಲೆಗೆ 13.30 ರೂಪಾಯಿ, ವಿಜಯಪುರ ಜಿಲ್ಲೆಗೆ18 ಕೋಟಿ ರೂಪಾಯಿ, ಗದಗ ಜಿಲ್ಲೆಗೆ 10.50 ಕೋಟಿ ರೂಪಾಯಿ, ಹಾವೇರಿ ಜಿಲ್ಲೆಗೆ, 12 ಕೋಟಿ ರೂಪಾಯಿ, ಧಾರವಾಡ ಜಿಲ್ಲೆಗೆ 12 ಕೋಟಿ ರೂಪಾಯಿ, ಶಿವಮೊಗ್ಗ ಜಿಲ್ಲೆಗೆ 10.50 ಕೋಟಿ ರೂಪಾಯಿ, ಹಾಸನ ಜಿಲ್ಲೆಗೆ 12 ಕೋಟಿ ರೂಪಾಯಿ, ಚಿಕ್ಕಮಗಳೂರು ಜಿಲ್ಲೆಗೆ 12 ಕೋಟಿ ರೂಪಾಯಿ, ಕೊಡಗು ಜಿಲ್ಲೆಗೆ 7.50 ಕೋಟಿ ರೂಪಾಯಿ, ದಕ್ಷಿಣ ಕನ್ನಡ ಜಿಲ್ಲೆಗೆ 3 ಕೋಟಿ ರೂಪಾಯಿ, ಉಡುಪಿ ಜಿಲ್ಲೆಗೆ 4.50 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ. ಉತ್ತರ ಕನ್ನಡ ಜಿಲ್ಲೆಗೆ 16.50 ಕೋಟಿ ರೂಪಾಯಿ, ಯಾದಗಿರಿ ಜಿಲ್ಲೆಗೆ9 ಕೋಟಿ ಹಾಗೂ ವಿಜಯನಗರ ಜಿಲ್ಲೆಗೆ 9 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ.

Leave a Comment