19.27 insurance amount released : ಬರಗಾಲದಿಂದ ತತ್ತರಿಸಿರುವ ವಿಜಯನಗರದ ಜಿಲ್ಲೆಯ ರೈತರಿಗೆ ಕೊನೆಗೂ ಒಂದು ಸಂತಸದ ಸುದ್ದಿ ಸಿಕ್ಕಿದೆ. ಹೌದು, ಬೆಳೆ ವಿಮೆ ಮಾಡಿಸಿದ 26254 ರೈತರಿಗೆ ಮುಂಗಾರು ಹಂಗಾಮಿನ ಮಧ್ಯಂತರ ಬೆಳೆ ವನಮೆ ಪರಿಹಾರ ಹಣ 19.27 ಕೋಟಿ ರೂಪಾಯಿ ಸಂದಾಯವಾಗಿದೆ.
ಮುಂಗಾರು ಹಂಗಾಮಿನ ಬೆಳೆ ನಷ್ಟದ ಸಮೀಕ್ಷೆಯನ್ನು ಕಳೆದ ತಿಂಗಳು ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗಳು ಹಾಗೂ ವಿಮಾ ಕಂಪನಿಗಳು ಜಂಟಿಯಾಗಿ ನಡೆಸಿದ್ದವು. ಅದರ ವರದಿಯನ್ನು ಆಧರಿಸಿ ಇದೀಗ ಮಧ್ಯಂತರ ವಿಮಾ ಪರಿಹಾರ ದೊರೆತಿದೆ.
ಹರಪನಹಳ್ಳಿಯಲ್ಲಿ ಒಬ್ಬ ರೈತರಿಗೆ ಗರಿಷ್ಠ 1.48 ಲಕ್ಷ ರೂಪಾಯಿ ಹಣ ಬಂದಿದ್ದರೆ, ಹೂವಿನಹಡಗಲಿಯಲ್ಲಿ ಇನ್ನೊಬ್ಬ ರೈತರಿಗೆ 1.15 ಲಕ್ಷರೂಪಾಯಿಯಷ್ಟು ಪರಿಹಾರ ಹಣ ಜಮೆಯಾಗಿದೆ. ಹರಪನಹಳ್ಳಿಯ ಈರೈತರ 49 ಎಕರೆ ಕೃಷಿ ಭೂಮಿಗೆ ವಿಮೆ ಮಾಡಿಸಿದ್ದರು.
ವಿಮೆ ಮಾಡಿಸುವ ವಿಚಾರದಲ್ಲಿ ರೈತರು ಹಿಂದೇಟು ಹಾಕಬಾರದು. ಬರಗಾಲ, ಪ್ರವಾಹದಂತಹ ಪರಿಸ್ಥಿತಿಗಳಲ್ಲಿ ಅದು ರೈತರ ಕೈಯನ್ನು ನಿಜವಾಗಿ ಹಿಡಿಯುತ್ತದೆ. ಅದರ ಹೊರತಾಗಿಯೂ ಬೆಳೆ ತೆನೆ ಕಟ್ಟುವ ಹಂತದಿಂದ ಕಟಾವು ನಂತರದ 15 ದಿನಗಳ ವರೆಗೆ ಒಟ್ಟು ಐದು ಸಂದರ್ಭಗಳಲ್ಲಿ ವಿಮೆ ಪರಿಹಾರ ಪಡೆಯುವ ಅವಕಾಶವಿದೆ. ಮುಂಗಾರು ಹಂಗಾಮಿಗೆ ಬಂದಿರುವ ಮಧ್ಯಂತರ ಪರಿಹಾರ ಇದು, ಪೂರ್ಣ ಪ್ರಮಾಣದ ಪರಿಹಾರ ಬಂದಾಗ ಆಗಿರುವ ಬೆಳೆ ನಷ್ಟದಶೇ. 70 ರಷ್ಟು ಪರಿಹಾರ ವಿಮೆ ರೂಪದಲ್ಲಿ ರೈತರಿಗೆ ಸಿಗಲಿದೆ. ಇದು ನಿಜಕ್ಕೂ ಈ ಸಂದಿಗ್ಧ ಸ್ಥಿತಿಯಲ್ಲಿ ಉತ್ತಮ ಪರಿಹಾರವೇ ಆಗಿದೆ.
19.27 insurance amount released ನಿಮ್ಮ ಖಾತೆಗೆ ಬೆಳೆ ವಿಮೆ ಜಮೆಯಾಗಿದೆಯೇ? ಹೀಗೆ ಚೆಕ್ ಮಾಡಿ
ಮುಂಗಾರು ಹಿಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರು ತಮಗೆ ಬೆಳೆ ವಿಮೆ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಚೆಕ್ ಮಾಡಲು ಈ
https://samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು Kharif ಆಯ್ಕೆ ಮಾಡಿಕೊಂಡು ಗೋ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು check status ಮೇಲೆ ಕ್ಲಿಕ್ ಮಾಡಬೇಕು.ಅಲ್ಲಿ ನಿಮ್ಮ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಅಲ್ಲಿನಿಮ್ಮ ಮೊಬೈಲ್ ನಂಬರ್ ನಮೂದಿಸಿ ನಂತರ ಕ್ಯಾಪ್ಚ್ಯಾ ಕೋಡ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.
ಮುಂಗಾರು ಹಿಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರಿಗೂ ಅತೀ ಶೀಘ್ರದಲ್ಲಿ ಬೆಳೆ ವಿಮೆ ಹಣ ಜಮೆಯಾಗುವ ಸಾಧ್ಯತೆಯಿದೆ. ಇದರೊಂದಗೆ ಬರಗಾಲ ಪರಿಹಾರ ಹಣವೂ ಬಿಡುಗಡೆಯಾಗಲಿದೆ. ಈ ತಿಂಗಳ ಅಂತ್ಯ ಅಥವಾ ಡಿಸೆಂಬರ್ ತಿಂಗಳ ಆರಂಭದಲ್ಲಿ ಬರಗಾಲ ಪರಿಹಾರ ಹಣ ಜಮೆಯಾಗುವ ಸಾಧ್ಯತೆಯಿದೆ.
ಬೆಳೆ ವಿಮೆ ಜಮೆಯಾಗಿಲ್ಲವೇ?
ಯಾವ ರೈತರಿಗೆ ಬೆಳೆ ವಿಮೆ ಮಾಡಿಸಿದ್ದಾರೋ ಆ ರೈತರು ವಿಮಾ ಕಂಪನಿಗೆ ದೂರು ನೀಡಿರಬೇಕು. ವಿಮಾ ಕಂಪನಿಯ ಸಿಬ್ಬಂದಿಗಳು ನಿಮ್ಮ ಜಮೀನಿಗೆ ಬಂದು ಬೆಳೆ ಪರಿಶೀಲನೆ ಮಾಡಿರಬೇಕು. ಆಗ ಮಾತ್ರ ನಿಮಗೆ ಬೆಳೆ ವಿಮೆ ಹಣ ಜಮೆಯಾಗುವ ಸಾಧ್ಯತೆಯಿರುತ್ತದೆ. ಬೆಳೆ ಹಾನಿಯಾಗಿರುವ ಕುರಿತು ಪರಿಶೀಲನೆ ನಡೆಸಿದ ನಂತರವೇ ಯಾವ ರೈತರಿಗೆ ಎಷ್ಟು ಪರಿಹಾರ ನೀಡಬೇಕೆಂಬುದನ್ನು ನಿರ್ಧರಿಸಲಾಗುತ್ತದೆ. ಬೆಳೆ ಹಾನಿಯಾಗಿದವರೂ ಕೂಡಲೇ ನಿಮ್ಮ ವಿಮಾ ಕಂಪನಿಯ ಉಚಿತ ಸಹಾಯವಾಣಿ ನಂಬರಿಗೆ ಕರೆ ಮಾಡಿ ವಿಚಾರಿಸಿಕೊಳ್ಳಬಹುದು.