ಬೆಳಗ್ಗೆ 6 ರಿಂದ 10ರವರೆಗೆ ಕೃಷಿ ಚಟುವಟಿಕೆಗೆ ಅವಕಾಶ

Written by By: janajagran

Updated on:

14 days lockdown in karnataka ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 14 ದಿನಗಳ ಕಾಲ  ಲಾಕ್ಡೌನ್ ವಿಧಿಸಲಾಗಿದೆ. ಮಂಗಳವಾರ (ಏಪ್ರೀಲ್ 27ರಿಂದ) ರಾತ್ರಿ 9 ಗಂಟೆಯಿಂದ ಕರ್ಫ್ಯೂ ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ.

14 days lockdown in karnataka ಬೆಳಗ್ಗೆ 6 ರಿಂದ 10ರವರೆಗೆ ಕೃಷಿ ಚಟುವಟಿಕೆಗೆ ಅವಕಾಶ

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೀಕೆಂಡ್ ಕರ್ಫ್ಯೂ ಸಮಯದಲ್ಲಿದ್ದ ನಿಯಮಾವಳಿಗಳು ವಾರ ಪೂರ್ತಿ ಅನ್ವಯವಾಗಲಿದೆ. ಬೆಳಿಗ್ಗೆ 6ರಿಂದ 10ಗಂಟೆವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 10ಕ್ಕೆ ಎಲ್ಲರೂ ವ್ಯಾಪಾರ ಸ್ಥಗಿತಗೊಳಿಸಬೇಕು. ಪೊಲೀಸರು ಬಲ ಪ್ರಯೋಗಿಸಲು ಅವಕಾಶ ನೀಡಬಾರದು. ಎಲ್ಲವೂ ಬಂದ್ ಇರುತ್ತದೆ. ಸಾರ್ವಜನಿಕರು ಮನೆ ಬಿಟ್ಟು ಹೊರಬರಬಾರದು. ಮುಖ್ಯ ಕಾರ್ಯದರ್ಶಿ ಈ ಸಂಬಂಧ. ಮಾರ್ಗಸೂಚಿ ಹೊರಡಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಸರ್ಕಾರಿ ಸಾರಿಗೆ ಬಸ್‌ಗಳು ಸೇರಿ ಯಾವುದೇ ಸಾರಿಗೆ ಸಂಚಾರ ಇರುವುದಿಲ್ಲ. ಮೆಟ್ರೋ ರೈಲು ಸಂಚಾರ ಬಂದ್ ಆಗಲಿದೆ.  ಜವಳಿ, ಕಟ್ಟಡ ನಿರ್ಮಾಣ, ಕೃಷಿ ಬಿಟ್ಟು ಬೇರೆಲ್ಲ ಚಟುವಟಿಕೆ ಬಂದ್ ಆಗಲಿವೆ. ಅಂತರರಾಜ್ಯ ಗೂಡ್ಸ್ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ ನಿಮ್ಮ ಜಮೀನಿನ ಅಕ್ಕಪಕ್ಕ ಯಾರಿಗೆಷ್ಟು ಜಮೀನಿದೆ? ಚೆಕ್ ಮಾಡಿ

ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ನೋಡಲ್ ಅಧಿಕಾರಿಗಳಾಗಿರುತ್ತಾರೆ. ಕೋವಿಡ್ ಹರಡದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಕಸಾಪ ಚುನಾವಣೆ ಸೇರಿ ಎಲ್ಲಾ ಚುನಾವಣೆ 6 ತಿಂಗಳು ಮುಂದೂಡಿ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ

ಹಾಲು, ತರಕಾರಿ, ಹಣ್ಣು ಹಂಪಲು ಮುಂತಾದ ಅಗತ್ಯ ವಸ್ತುಗಳ ಖರೀದಿ ಮತ್ತು ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಮಧ್ಯ ಖರೀದಿಗೆ ಬೆಳಗ್ಗೆ 6 ರಿಂದ10ರವರೆಗೆ ಅವಕಾಶ ನೀಡಲಾಗಿದೆ. ಮೆಡಿಕಲ್ ಶಾಪ್, ಬ್ಯಾಂಕ್, ಎಟಿಎಂ ಸೇವೆ, ರಕ್ತನಿಧಿ ಕೇಂದ್ರ, ಆಸ್ಪತ್ರೆ, ಕ್ಲಿನಿಕ್ ಗಳು,ಲಾಕ್ಡೌನ್ ಅವಧಿಯಲ್ಲಿ ತೆರೆದಿರುತ್ತವೆ.

ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.  ಇದರ ಪ್ರಮಾಣ ಕಡಿಮೆಯಾಗುತ್ತಿಲ್ಲ. ಇತರ ಎಲ್ಲಾ ಚಟಿವಟಿಕೆಗಳನ್ನು ಬಂದ್ ಮಾಡಲಾಗಿದೆ. ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ.ಆದರೆ ಕೃಷಿ ಚಟುವಟಿಕೆಗೆ ಸಮಸ್ಯೆಯಾಗಬಾರದೆಂಬ ಉದ್ದೇಶದಿಂದ ಬೆಳಗ್ಗೆ 6 ರಿಂದ 10ರವರೆಗೆ ಅವಕಾಶ ನೀಡಲಾಗಿದೆ.

ಕೃಷಿ ಚಟುವಟಿಕೆ ನಿಂತರೆ ರಾಜ್ಯದ ಜನತೆ ತುಂಬಾ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಕೃಷಿ ಚಟುವಟಿಕೆಗೆ ಮುಕ್ತ ಅವಕಾಶ ನೀಡಲಾಗಿದೆ. ಅದರಲ್ಲಿ ಸಮಯ ನಿಗದಿಪಡಿಸಲಾಗಿದೆ.

ರೈತರು ಸಹ ತರಕಾರಿ, ಹಣ್ಣು ಮಾರಾಟ ಮಾಡಲು ಆ ಸಮಯದೊಳಗೆ ಬರಬೇಕು.  ತಮಗೆ ನೀಡಿದ ಸಮಯದಲ್ಲಿ ಅನಕೂಲ ಮಾಡಿಕೊಂಡು ವ್ಯಾಪಾರ ಮಾಡಿಕೊಳ್ಳಬಹುದು. ಇದರಿಂದ ರಾಜ್ಯದ ಜನತೆಗೆ ಸಮಸ್ಯೆಯಾಗುವುದಿಲ್ಲ.

ಮಾರುಕಟ್ಟೆಗಳಿಗೆ ಅನಾವಶ್ಯಕವಾಗಿ ಜನರು ಬರಬಾರದು. ಎಲ್ಲಾ ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಗಿರುತ್ತವೆ.ಹಾಗಾಗಿ ಜನರು ಮನೆಯಲ್ಲಿಯೇ ಉಳಿದು ಕೊರೋನಾ ಹರಡದಂತೆ ನೋಡಿಕೊಳ್ಳಬೇಕು.

 

Leave a Comment