Online work ಮಾಡಿ ಮನೆಯಲ್ಲಿಯೇ ಕುಳಿತು ತಿಂಗಳಿಗೆ 50 ಸಾವಿರ ರೂಪಾಯಿಯವರೆಗೆ ಹಣ ಗಳಿಸಬಹುದು. ಹೌದು, ಕೇವಲ ಅಲ್ಪ ಜ್ಞಾನದ ಸಹಾಯದಿಂದ 50 ಸಾವಿರ ಗಳಿಸಬಹುದು. ಈಗ ಕೆಲಸ ಸಿಗುವುದು ತುಂಬಾ ಕಷ್ಟವಾಗುತ್ತಿದೆ. ಡಿಗ್ರಿ, ಎಎಂ, ಪಿಹೆಚ್ಡ್ ಓದಿದರೂ ಸಹ ಇಂದು ಕೆಲಸ ಸಿಗದೆ ವಿದ್ಯಾವಂತರು ನಿರುದ್ಯೋಗಿಗಳಾಗುತ್ತಿದ್ದಾರೆ. ಹಾಗಾದರೆ ಮನೆಯಿಂದಲೇ ಯಾವ ಯಾವ ಕೆಲಸ ಮಾಡಿ ಹಣ ಗಳಿಸಬಹುದು ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆಯೇ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.
ಇಂದು ಮೊಬೈಲ್ ಬಳಕೆ ಮಾಡದೆ ಇರುವ ಜನ ಕಾಣುವುದು ತುಂಬಾ ಕಡಿಮೆ. ಪ್ರತಿಯೊಬ್ಬರ ಕೈಯಲ್ಲಿ ಸ್ಮಾರ್ಟ್ ಫೋನ್ ಕಾಣುತ್ತದೆ. ಈ ಸ್ಮಾರ್ಟ್ ಫೋನ್ ಸಹಾಯದಿಂದಲೇ ಇಂದು ಮನೆಯಿಂದಲೇ ಹಣ ಗಳಿಸಬಹುದು. ಆದರೆ ಬಹುತೇಕ ಜನರು ಸ್ಮಾರ್ಟ್ ಫೋನ್ ನ್ನು ಸದ್ಬಳಕೆ ಮಾಡಿಕೊಳ್ಳುವ ಮಾರ್ಗ ಗೊತ್ತಿಲ್ಲದೆ ವಿನಾಕಾರಣ ಮೊಬೈಲ್ ನಲ್ಲೇ ಸಮಯ ಕಳೆಯುತ್ತಿದ್ದಾರೆ. ನಿಮ್ಮ ಅಮೂಲ್ಯ ಸಮಯವನ್ನು ಹೇಗೆ ಸಬ್ದಳಕೆ ಮಾಡಿಕೊಂಡು ಹಣ ಗಳಿಸಬಹುದು ಎಂಬುದರ ಬಗ್ಗೆ ಇಲ್ಲಿ ಕೆಲವು ಮಾರ್ಗೋಪಾಯಗಳನ್ನು ತಿಳಿಸಿದ್ದೇನೆ.
ಇಂದು ನೀವು ನಿಮ್ಮಮೊಬೈಲ್ ನಲ್ಲಿ ಯೂಟೂಬ್ ಹಲವಾರು ವೀಡಿಯೋಗಳನ್ನು ನೋಡುತ್ತಿರುತ್ತೀರಿ. ಅದೇ ರೀತಿ ಗೂಗಲ್ ನಲ್ಲಿ ಬೇರೆ ಬೇರೆ ವಿಷಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಓದುತ್ತಿರುತ್ತಿರಿ. ಈ ವಿಡಿಯೋ ಹಾಗೂ ಸುದ್ದಿ ಮಾಹಿತಿಗಳಿಂದ ಹಣ ಗಳಿಸಬಹುದು. ಅದು ಹೇಗೆ ಅಂದುಕೊಂಡಿದ್ದೀರಾ…? ಇಲ್ಲಿದೆ ಮಾಹಿತಿ.
Online work ಅಂದರೆ ಯೂಟೂಬ್ ಮಾಡಿ ತಿಂಗಳಿಗೆ 50 ಸಾವಿರಕ್ಕಿಂತ ಹೆಚ್ಚು ಹಣ ಗಳಿಸುವುದು ಹೇಗೆ?
ಯೂಟೂಬ್ ಗಳನ್ನು ಯಾರು ಬೇಕಾದರೂ ಮಾಡಬಹುದು. ಹೌದು, ನಿಮ್ಮ ಮೊಬೈಲ್ ನಲ್ಲೇ ನಿಮ್ಮ ಜಿಮೇಲ್ ಐಡಿಯಿಂದ ಯೂಟೂಬ್ ಆರಂಭಿಸಬಹುದು. ನೀವು ಯೂಟೂಬ್ ಅಕೌಂಟ್ ಮಾಡಿದ ನಂತರ ನಿಮಗೆ ಆಸಕ್ತಿಯಿರುವ ಕುರಿತು ವೀಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡಿ ಹಣ ಗಳಿಸಬಹುದು. ನಿಮ್ಮ ವೀಡಿಯೋಗಳಿಗೆ 1 ಸಾವಿರ ಸಬ್ ಸ್ಕ್ರೈಬರ್ ಹಾಗೂ 4 ಸಾವಿರ ಗಂಟೆ ವಾಚ್ ಟೈಮ್ ಆದರೆ ಸಾಕು, ನೀವು ಗೂಗಲ್ ಆ್ಯಡ್ ಸೆನ್ಸ್ ಗೆ ಅರ್ಜಿ ಸಲ್ಲಿಸಿ ತಿಂಗಳಿಗೆ 50 ಸಾವಿರಕ್ಕಿಂತ ಹೆಚ್ಚು ಹಣ ಗಳಿಸಬಹುದು.
ಯೂಟೂಬ್ ಆರಂಭಿಸುವುದು ಹೇಗೆ?
ಗೂಗಲ್ ಆ್ಯಡ್ಸೆನ್ಸ್ ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಕುರಿತು ನಿಮಗೆ ಯೂಟೂಬ್ ಗಳಲ್ಲಿ ಸಾಕಷ್ಟು ವೀಡಿಯೋಗಳು ಲಭ್ಯವಿರುತ್ತದೆ.
ಒಂದು ವೇಳೆ ನಿಮಗೆ ವೀಡಿಯೋ ಮಾಡಲು ಹಿಂಜರಿಕೆಯಾಗುತ್ತಿದ್ದರೆ ಬ್ಲಾಗ್ ಅಂದರೆ ವೆಬ್ಸೈಟ್ ಆರಂಭಿಸಿ ಹಣ ಗಳಿಸಬಹುದು. ಬ್ಲಾಗ್ ಆರಂಭಿಸಲು ಹೆಸರು (ಡೋಮೆನ್) ಬೇಕು. ಇದರೊಂದಿಗೆ ಹೋಸ್ಟಿಂಗ್ ಬೇಕು. ಇದನ್ನು ಸಹ ನೀವು ಯಾರ ಸಹಾಯವೂ ಇಲ್ಲದೆ ಮೊಬೈಲ್ ನಲ್ಲೇ ಯೂಟೂಬ್ ವೀಡಿಯೋಗಳನ್ನು ನೋಡಿ ಬ್ಲಾಗ್ ಆರಂಭಿಸಬಹುದು.
ಇದನ್ನೂ ಓದಿ : ರೈತರು ಜಮೀನಿನ ಅಳತೆ ಮೊಬೈಲ್ ನಲ್ಲೇ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಯೂಟೂಬ್ ನ್ನು ಸಂಪೂರ್ಣ ಉಚಿತವಾಗಿ ಆರಂಭಿಸಬಹುದು. ಆದರೆ ಬ್ಲಾಗ್ ನ್ನು ಆರಂಭಿದಲ್ಲಿ 5 ಸಾವಿರ ರೂಪಾಯಿಯವರೆಗೆ ಡೋಮೇನ್ ಮತ್ತು ಹೋಸ್ಟಿಂಗ್ ಖರೀದಿಸಿ ಬ್ಲಾಗ್ ಆರಂಭಿಸಬಹುದು. ನೀವು 20 ರಿಂದ 30 ಆರ್ಟಿಕಲ್ ಗಳನ್ನು ಪ್ರಕಟಿಸಿ ಗೂಗಲ್ ಆ್ಯಡ್ ಸೆನ್ಸ್ ನಿಂದ ಹಣ ಗಳಿಸಬಹುದು. ಬ್ಲಾಗ್ ಆರಂಭಿಸುವುದು ಹೇಗೆ ಎಂಬುದರ ಬಗ್ಗೆಯೂ ನಿಮಗೆ ಯೂಟೂಬ್ ನಲ್ಲಿ ವೀಡಿಯೋಗಳು ಸಿಗುತ್ತವೆ.
ನಿಮಗೆ ಯೂಟೂಬ್ ಹಾಗೂ ಬ್ಲಾಗ್ ಕುರಿತು ಹೆಚ್ಚಿನ ಮಾಹಿತಿ ಬೇಕಾದರೆ ಮೊಬೈಲ್ ನಂಬರ್ 9731491393 ಗೆ ಕರೆ ಮಾಡಬಹುದು. ನಿಮಗೆ ಯೂಟೂಬ್ ಹಾಗೂ ಬ್ಲಾಗ್ ಆರಂಭಿಸುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು. ನೀವು ಮನೆಯಿಂದಲೇ ಕೆಲಸ ಮಾಡಿ ಸ್ವಾಭಿಮಾನದಿಂದ ಬದುಕಿ ಇನ್ನೊಬ್ಬರಿಗೆ ಸ್ಪೂರ್ತಿಯಾಗುತ್ತೀರೆಂಬ ವಿಶ್ವಾಸ ನನಗಿದೆ.
ಇಲ್ಲಿ ನೀಡಲಾದ ಮಾಹಿತಿ ನಿಮಗೆ ಸರಿಯೆನಿಸದರೆ ಅಥವಾ ಸರಿಯೆನಿಸದಿದ್ದರೂ ನೀವು ಕಾಮೆಂಟ್ ಮಾಡಿ ತಿಳಿಸಬಹುದು.