Pan Aadhaar link ಆಗಿದೆಯೇ? ಇಲ್ಲೇ ಚೆಕ್ ಮಾಡಿ

Written by Ramlinganna

Published on:

Pancard Aadhaar card link  ಪ್ಯಾನ್ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಸಾರ್ವಜನಿಕರು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ. ಇದರೊಂದಿಗೆ ಪ್ಯಾನ್ ಆಧಾರ್ ಲಿಂಕ್ ಏಕೆ ಮಾಡಿಸಬೇಕು ಎಂಬುದರ ಮಾಹಿತಿ ಇಲ್ಲಿದೆ.

ಪ್ಯಾನ್ ಕಾರ್ಡ್ ನ್ನು ಆಧಾರ್ ಕಾರ್ಡಿಗೆ ಲಿಂಕ್ ಮಾಡಲು  ಕಾಲಾವಕಾಶ ನೀಡಲಾಗಿತ್ತು.  ಇದರಿಂದಾಗಿ ದೇಶದ ಬಹುತೇಕ ಜನರು ಪ್ಯಾನ್ ಆಧಾರ್ ಲಿಂಕ್ ಮಾಡಿದ್ದಾರೆ. ಆದರೆ ಲಿಂಕ್ ಆಗಿದೆಯೋ ಇಲ್ಲವೋ ಎಂಬುದು ಇನ್ನೂ ಬಹುತೇಕ ಜನರಿಗೆ ಗೊತ್ತಿಲ್ಲ. ಹಾಗಾಗಿ ಅವರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

Pancard Aadhaar card link ಆಗಿದೆಯೇ? ಇಲ್ಲೇ ಚೆಕ್ ಮಾಡಿ

ಸಾರ್ವಜನಿಕರು ತಮ್ಮ ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹಬುದು. ಹೌದು ಈ

https://eportal.incometax.gov.in/iec/foservices/#/pre-login/link-aadhaar-status

ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ಆಗ ಲಿಂಕ್ ಆಧಾರ್ ಸ್ಟೇಟಸ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ಪ್ಯಾನ್ ನಂಬರ್ ಹಾಗೂ ಆಧಾರ್ ನಂಬರ್ ಹಾಕಿ ವೀವ್ ಲಿಂಕ್ ಆಧಾರ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಪ್ಯಾನ್ ಕಾರ್ಡ್ ಆಧಾರ್ ಕಾರ್ಡಿಗೆ ಲಿಂಕ್ ಆಗಿದೆಯೋ ಇಲ್ಲವೋ ಗೊತ್ತಾಗುತ್ತದೆ.

ಪ್ಯಾನ್ ಗೆ ಆಧಾರ್ ಕಾರ್ಡ್ ಲಿಂಕ್ ಆಗದಿದ್ದರೆ ಯಾವ ಸಮಸ್ಯೆಗಳು ಬರುತ್ತವೆ?

ಪ್ಯಾನ್ ನಂಬರ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ಲಿಂಕ್ ಆಗದ ಪ್ಯಾನ್ ಗಳಿಗೆ  ಯಾವುದೇ ತೆರಿಗೆ ಮರುಪಾವತಿ ಸಿಗುವುದಿಲ್ಲ. ಪ್ಯಾನ್ ನಿಷ್ಕ್ರೀಯವಾಗಿರುವ ಅವಧಿಯ ವರೆಗಿನ ಮರುಪಾವತಿಗಳಿಗೆ ಬಡ್ಡಿಯೂ ಸಿಗುವುದಿಲ್ಲ. ಟಿಡಿಎಸ್ ಮತ್ತು ಟಿಸಿಎಸ್ ಅನ್ನು ಅಧಿಕ ಪ್ರಮಾಣದಲ್ಲಿ ಕಡಿತಗೊಳಿಸಲಾಗುತ್ತದೆ.1000  ವಿಳಂಬ ಶುಲ್ಕ ಪಾವತಿಸಿದ 30 ದಿನಗಳಲ್ಲಿ ಪ್ಯಾನ್ ಮತ್ತೆ ಸಕ್ರೀಯಗೊಳ್ಳಲಿದೆ.

Pancard Aadhaar card link ಕಡ್ಡಾಯ ಮಾಡಿದ್ದೇಕೆ?

ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಕಾರಣವೇನೆಂದರೆ, ಕೆಲವರು ತಮ್ಮ ಹೆಸರಿನಲ್ಲಿ 2 ರಿಂದ 3 ಪ್ಯಾನ್ ಕಾರ್ಡ ಗಳ್ನು ಮಾಡಿಸಿಕೊಂಡು ಒಂದೊಂದು ಬ್ಯಾಂಕ್ ಅಕೌಂಟ್ ನಂಬರಿಗೆ ಒಂದೊಂದು ಪ್ಯಾನ್ ಕಾರ್ಡ್ ನಂಬರ್ ಕೊಟ್ಟಿದ್ದರು.  ಹೀಗಾಗಿ ಹಣಕಾಸು ವ್ಯವಹಾರಕ್ಕೆ ತೆರಿಗೆ ಲೆಕ್ಕ ಸಿಗುತ್ತಿರಲಿಲ್ಲ. ಇದನ್ನು ತಪ್ಪಿಸುವುದಕ್ಕಾಗಿ ಆದಾಯ ತೆರಿಗೆಯು ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಬೇಕೆಂದು ಸೂಚಿಸಿದೆ. ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದರೆ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಇದ್ದವರ ಕಾರ್ಡ್ ನಿಷ್ಕ್ರೀಯಗೊಳ್ಳಲಿದೆ.

ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಶುಲ್ಕವೆಷ್ಟಿದೆ?

ಪ್ಯಾನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಈ ಮೊದಲು ಉಚಿತವಾಗಿತ್ತು. ನಂತರ  500 ರೂಪಾಯಿ ಪಾವತಿಸಿ ಆಧಾರ್ ಲಿಂಕ್ ಮಾಡಬೇಕಿತ್ತು.  ಇದಾದ ನಂತರ 1000 ರೂಪಾಯಿ ಪಾವತಿಸಬೇಕೆಂದು ಹೇಳಲಾಗಿತ್ತು. ಆದರೂ ಇನ್ನೂ ಬಹಳ ಜನ ಲಿಂಕ್ ಮಾಡಿಸಿದ್ದಿಲ್ಲ.

ಇದನ್ನೂ ಓದಿ : ನಿಮ್ಮ ಜಮೀನಿನ ಅಕ್ಕಪಕ್ಕ ಯಾರಿಗೆಷ್ಟು ಎಕರೆಯಿದೆ? ಇಲ್ಲೆ ಚೆಕ್ ಮಾಡಿ

ಒಂದು ವೇಳೆ ಗಡುವಿನ ಒಳಗೆ ಲಿಂಕ್ ಮಾಡದಿದ್ದರೆ ಆ ನಂತರ ಬರುವ ಅರ್ಜಿಗಳಿಗೆ 10 ಸಾವಿರ ರೂಪಾಯಿ ದಂಡ ಹಾಕಲಾಗುವುದು ಎಂದು ಹೇಳಲಾಗಿತ್ತು. ಆದರೆ ಇದೀಗ ಗಡುವು ಮತ್ತೇ ವಿಸ್ತರಣೆಯಾಗಿರುವುದರಿಂದ 1000 ಶುಲ್ಕದೊಂದಿಗೆ ಜೂನ್ 30 ರವರೆಗೆ ಆಧಾರ್ ಸಂಖ್ಯೆಯನ್ನು ಪ್ಯಾನ್ ಗೆ ಲಿಂಕ್ ಮಾಡಲು ಕಾಲಾವಕಾಶ ನೀಡಲಾಗಿದೆ.

Leave a Comment