ಈ ರೈತರಿಗೇಕೆ ಪಿಎಂ ಕಿಸಾನ್ ಹಣ ಜಮೆಯಾಗಿಲ್ಲ?

Written by Ramlinganna

Updated on:

have you not received PMKisan money ಪಿಎಂ ಕಿಸಾನ್ ಯೋಜನೆಯ ಕೆಲವು ಫಲಾನುಭವಿಗಳಿಗೆ 12ನೇ ಕಂತಿನ ಹಣ ಜಮೆಯಾದರೆ ಇನ್ನೂ ಕೆಲವು ರೈತರಿಗೆ ಜಮೆಯಾಗಿಲ್ಲ. ಹಾಗಾದರೆ ಯಾವ ಕಾರಣಕ್ಕಾಗಿ ಪಿಎಂ ಕಿಸಾನ್ ಹಣ ಸ್ಥಗಿತಗೊಳಿಸಲಾಗಿದೆ? ಇನ್ನೂ ಮುಂದೆ ಪಿಎಂ ಕಿಸಾನ್ ಹಣ ಜಮೆಯಾಗುವುದಿಲ್ಲವೇ? ಎಲ್ಲಾ ಅರ್ಹತೆಯಿದ್ದರೂ ನಿಮಗೆ ಪಿಎಂ ಕಿಸಾನ್ ಹಣ ನಿಲ್ಲಿಸಲಾಗಿದೆಯೇ? ಇದೆಲ್ಲಾ ಕಾರಣಗಳಿಗಿಲ್ಲಿದೆ ಉತ್ತರ.

ಪಿಎಂ ಕಿಸಾನ್ ಯೋಜನೆಗೆ ನೋಂದಾಯಿಸಿದ ಎಲ್ಲಾ ಫಲಾನುಭವಿ ರೈತರಿಗೆ ಈಗಾಗಲೇ 12 ಕಂತುಗಳ ಹಣ ಜಮೆ ಮಾಡಲಾಗಿದೆ. 11ನೇ ಕಂತಿನವರೆಗೆ ಎಲ್ಲಾ ರೈತರಿಗೆ ಯಾವುದೇ ಅಡೆತಡೆಯಿಲ್ಲದೆ ಜಮೆಯಾಗುತ್ತಿತ್ತು. ಆದರೆ 12ನೇ ಕಂತಿನ ಹಣ ಕೆಲವು ರೈತರಿಗೆ ಜಮೆಯಾದರೆ ಇನ್ನೂ ಕೆಲವು ರೈತರಿಗೆ ಜಮೆಯಾಗಿಲ್ಲ. ಕೆಲವು ರೈತರು ಇಕೆವೈಸಿ ಮಾಡಿಸಿದ್ದರೂ ಸಹ 12ನೇ ಕಂತಿನ ಹಣ ಜಮೆಯಾಗಿಲ್ಲ. 13ನೇ ಕಂತಿನ ಹಣ ಜಮೆಯಾಗಬೇಕಾದರೆ ರೈತರಿಗೆ ಪಿಎಂ ಕಿಸಾನ್ ಸ್ಟೇಟಸ್ ಪೇಜ್ ನಲ್ಲಿ ಮೂರುಕಡೆ ಯಸ್ ಎಂಬ ಮೆಸೇಜ್ ಇರಬೇಕು. ಹಾಗಾದರೆ ಸ್ಟೇಟಸ್ ಪೇಜ್ ನಲ್ಲಿ ಎಲ್ಲೆಲ್ಲಿ ಯಸ್ ಇರಬೇಕು? ಇಲ್ಲಿದೆಮಾಹಿತಿ

have you not received PMKisan money ಪಿಎಂ ಕಿಸಾನ್ ಸ್ಟೇಟಸ್ ನಲ್ಲಿ ಈ ಮೂರು ಕಡೆ ಯಸ್ ಇರಬೇಕು

ಹೌದು, ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಸ್ಟೇಟಸ್ ಪೇಜ್ ನಲ್ಲಿ ಎಲ್ಲೆಲ್ಲಿ ಯಸ್ ಇರಬೇಕೆಂಬುದನ್ನು ಚೆಕ್ ಮಾಡಲು ಈ

https://pmkisan.gov.in/BeneficiaryStatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಮೊಬೈಲ್ ನಂಬರ್ ಹಾಕಬೇಕು ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್  ಹಾಕಿ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಸ್ಟೇಟಸ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಹೆಸರು, ತಂದೆಯ ಹೆಸರು, ಗ್ರಾಮ, ಜಿಲ್ಲೆ ಕಾಣುತ್ತದೆ.

ಈ ಮೂರು ಕಡೆ ಯಸ್ ಇರಬೇಕು.

ಇಕೆವೈಸಿ ಡನ್ ಮುಂದುಗಡೆ Yes ಇರಬೇಕು.

ಎಲಿಬಿಲಿಟಿ ಮುಂದುಗಡೆ Yes ಇರಬೇಕು.

ಲ್ಯಾಂಡ್ ಸೀಡಿಂಗ್ ಎದುರುಗಡೆ Yes ಇರಬೇಕು

ಈ ಮೂರು ಕಡೆ ಯಸ್ ಮೆಸೆಜ್ ಇದ್ದರೆ ಮಾತ್ರ ಮುಂದಿನ 13ನೇ ಕಂತಿನ ಹಣ ನಿಮ್ಮ ಖಾತೆಗೆ ಜಮೆಯಾಗಲಿದೆ.

ಇದನ್ನೂ ಓದಿ : ನಿಮ್ಮ ಸರ್ವೆ ನಂಬರ್ ಅಕ್ಕಪಕ್ಕದ ಯಾವ ಮಾಲಿಕರಿಗೆ ಎಷ್ಟು ಜಮೀನಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಪಿಎಂ ಕಿಸಾನ್ ಸ್ಟೇಟಸ್ ಈ ಪೇಜ್ ನಲ್ಲಿ ಮೇಲೆ ಹೇಳಿದ ಮೂರು ಕಡೆ ಯಸ್ ಇದ್ದರೂ ನಿಮಗೆ ಪಿಎಂ ಕಿಸಾನ್ ಯೋಜನೆಯ 12ನೇ ಕಂತಿನ ಹಣ ತಡೆಹಿಡಿದಿದ್ದರೆ ಕೂಡಲೇ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಗೆ ಭೇಟಿ ನೀಡಬೇಕು. ನಿಮ್ಮ ಜಮೀನಿನ ಪಹಣಿ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಪ್ರತಿಯನ್ನು ತೆಗೆದುಕೊಂಡು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸಬೇಕು.

ಈ ಕಾರಣಗಳಿಂದಲೂ ಪಿಎಂ ಕಿಸಾನ್ ಹಣ ಕೆಲವು ರೈತರಿಗೆ ಜಮೆಯಾಗಿಲ್ಲ

ಪಿಎಂ ಕಿಸಾನ್ ಯೋಜನೆಯು ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಸೌಲಭ್ಯ ನೀಡುತ್ತದೆ. ಒಂದು ವೇಳೆ ನೀವು ಒಂದೇ ಕುಟುಂಬದಲ್ಲಿ ಒಬ್ಬ ಸದಸ್ಯರಿಗಿಂತ ಹೆಚ್ಚು ಸದಸ್ಯರು ಪಿಎಂ ಕಿಸಾನ್ ಯೋಜನೆಯ ಹಣ ಪಡೆಯುತ್ತಿದ್ದರೆ ಒಬ್ಬ ಸದಸ್ಯರಿಗೆ ತಡೆಹಿಡಿಲಾಗುವುದು ಅದೇ ರೀತಿ ನಿಮ್ಮ ಕುಟುಂಬದಲ್ಲಿ ಒಬ್ಬ ಸದಸ್ಯರು ಸರ್ಕಾರಿ ನೌಕರರಾಗಿದ್ದರೆ ಆ ಕುಟುಂಬದವರಿಗೂ ಹಣ ಜಮೆಯಾಗಲ್ಲ.  ಸರ್ಕಾರದ ವತಿಯಿಂದ ಪೆನ್ಶನ್ ಪಡೆಯುವ ರೈತ ಕುಟುಂಬಕ್ಕೂ ಪಿಎಂ ಕಿಸಾನ್ ಹಣ ತಡೆಯಲಾಗುತ್ತಿದೆ.

Leave a Comment