ಈ ನಂಬರಿಗೆ ಕರೆ ಮಾಡಿ ಬೆಳೆ ವಿಮೆ ಪಡೆಯಿರಿ

Written by Ramlinganna

Updated on:

insurance helpline number ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದ ಬೆಳೆ ಹಾಳಾದ ರೈತರೂ ಕೂಡಲೇ ವಿಮಾ ಕಂಪನಿಗೆ ತಿಳಿಸಿ ವಿಮಾ ಸೌಲಭ್ಯ ಪಡೆದುಕೊಳ್ಳಬಹುದು.

ಹೌದು, ಪ್ರಧಾನಮಂತ್ರಿ ಫಸಲಿ ಬಿಮಾ ಯೋಜನೆಯಡಿಯಲ್ಲಿ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆಗಳಿಗೆ ವಿಮೆ ಮಾಡಿಸಿದ ರೈತರ ಬೆಳೆ ಹಾಳಾದರೆ ವಿಮಾ ಸೌಲಭ್ಯ ಪಡೆದುಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಕಳೆದೆರಡು ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಅಪಾರ ಬೆಳೆ ಹಾಳಾಗಿದೆ. ವಿಶೇಷವಾಗಿ ತೋಟಗಾರಿಕೆ ಬೆಳೆಗಾರರಿಗೆ ಅಪಾರ ನಷ್ಟವಾಗಿದೆ. ಬಿರುಗಾಳಿ ಸಹಿತ ಆಲಿಕಲ್ಲು ಮಳಿಯಂದ ದ್ರಾಕ್ಷಿ ಬೆಳೆಗೆ ಹಾನಿಯಾಗಿದೆ. ಹೂವಿನ ತೋಟ, ತರಕಾರಿ ಸೇರಿದಂತೆ ದಾಳಿಂಬೆ ಬೆಳೆಗಳಿಗೂ ಹಾನಿಯುಂಟಾಗಿ ಲಕ್ಷಾಂತರ ರೂಪಾಯಿ ಬೆಳೆ ಹಾನಿಯಾಗಿದೆ.

ಹಿಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರೇನು ಮಾಡಬೇಕು?

ಹಿಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರು ಮಳೆಯಿಂದಾಗಿ ಬೆಳೆ ಹಾಳಾದರೆ 72 ಗಂಟೆಯೊಳಗೆ ಯಾವ ವಿಮಾ ಕಂಪನಿಗೆ ವಿಮೆ ಮಾಡಿಸಿದ್ದಾರೋ ಆ ವಿಮಾ ಕಂಪನಿಗೆ ಕರೆ ಮಾಡಬೇಕು. ಹೌದು, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ನಿಯಮದಂತೆ 72 ಗಂಟೆಯೊಳಗೆ ವಿಮಾ ಕಂಪನಿಗೆ ತಿಳಿಸಬೇಕು. ಆಗ ವಿಮಾ ಕಂಪನಿಯ ಸಿಬ್ಬಂದಿಗಳು ರೈತರ ಜಮೀನಿಗೆ ಭೇಟಿ ನೀಡುತ್ತಾರೆ.  ಜಮೀನಿಗೆ ಭೇಟಿ ನೀಡಿದ ನಂತರ ಬೆಳೆ ಹಾನಿಯಾದ ಬಗ್ಗೆ ಪರಿಶೀಲನೆ ಮಾಡಿ ಎಷ್ಟು ಪ್ರಮಾಣದಲ್ಲಿ ಬೆಳೆ ಹಾಳಾಗಿದೆ ಎಂಬುದರ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತಾರೆ. ಈ ವರಧಿ ಆಧಾರದ ಮೇಲೆ ರೈತರಿಗೆ ಬೆಳೆ ವಿಮೆ ಪಾವತಿಸಲಾಗುವುದು.

insurance helpline number ನೀವು ಯಾವ ವಿಮಾ ಕಂಪನಿಗೆ  ಬೆಳೆ ವಿಮೆ ಕಟ್ಟಿದ್ದೀರಿ? ಗೊತ್ತಿಲ್ಲವೇ?

ರೈತರು ಬೆಳೆ ವಿಮೆ ಮಾಡಿಸಿರುತ್ತಾರೆ. ಆದರೆ ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದಾರೆಂಬುದು ಗೊತ್ತಿರುವುದಿಲ್ಲ. ಆದರೆ ರೈತರು ಇಲ್ಲೇ ನಿಮ್ಮ ಜಿಲ್ಲೆಯ ವಿಮಾ ಕಂಪನಿ ಹೆಸರು ತಿಳಿದುಕೊಳ್ಳಬಹುದು. ರೈತರು ಈ

https://www.samrakshane.karnataka.gov.in/publichome.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆ ವೆಬ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿಫಾರ್ಮರ್ಸ್ ಕಾಲಂ ಕೆಳಗಡೆ ಕಾಣುವ Know your Insurance co. ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಥವಾ

https://www.samrakshane.karnataka.gov.in/HomePages/frmKnowYourInsCompany.aspx

ಈ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ರಾಜ್ಯದಲ್ಲಿ ಯಾವ ಜಿಲ್ಲೆಗೆ ಯಾವ ವಿಮಾ ಕಂಪನಿ ನಿಗದಿಪಡಿಸಲಾಗಿದೆ ಎಂಬ ಪಟ್ಟಿ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ತಮ್ಮ ಜಿಲ್ಲೆಯ ಮುಂದಿರುವ ವಿಮಾ ಕಂಪನಿಗೆ ಬೆಳೆ ವಿಮೆ ಮಾಡಿಸಿದ್ದಾರೆಂದರ್ಥ.

ವಿಮಾ ಕಂಪನಿಯ ಸಿಬ್ಬಂದಿ ನಂಬರ್ ಪಡೆದುಕೊಳ್ಳುವುದು ಹೇಗೆ?

ಬೆಳೆ ವಿಮೆ ಮಾಡಿಸಿದ ರೈತರು ತಮ್ಮ ಜಿಲ್ಲೆಯ ವಿಮಾ ಕಂಪನಿಯ ಸಿಬ್ಬಂದಿ ನಂಬರ್ ಪಡೆದುಕೊಳ್ಳಬೇಕಾದರೆ ಉಚಿತ ಸಹಾಯವಾಣಿ 1800 180 1551 ನಂಬರಿಗೆ ಕರೆ ಮಾಡಬೇಕು. ಆಗ ನೀವು ನಿಮ್ಮ ಜಿಲ್ಲೆಯ ಹೆಸರು ಹೇಳಿ ವಿಮಾ ಕಂಪನಿಯ ಸಿಬ್ಬಂದಿ ನಂಬರ್ ಪಡೆದುಕೊಳ್ಳಬಹುದು. ಈ ಕರೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಇದಕ್ಕೆ ರೈತರು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ.

ಇದನ್ನೂ ಓದಿ : ನಿಮ್ಮ ಜಮೀನಿನ ಮೇಲೆ ನಿಮಗೆ ಗೊತ್ತಿಲ್ಲದೆ ಬೆಳೆ ಸಾಲ ಪಡೆಯಲಾಗಿದೆಯೇ? ಇಲ್ಲೇ ಚೆಕ್ ಮಾಡಿ

ವಿಮೆ ಮಾಡಿಸಿದ ಮಾತ್ರಕ್ಕೆ ಬೆಳೆ ವಿಮೆ ಜಮೆಯಾಗುವುದಿಲ್ಲ. ಹಾಗಾಗಿ ಬೆಳೆ ಹಾಳಾದಾಗ ವಿಮಾ ಕಂಪನಿಗೆ ತಿಳಿಸುವುದು ಕಡ್ಡಾಯವಾಗಿದೆ. ಕೂಡಲೇ ರೈತರು ವಿಮಾ ಕಂಪನಿಗೆ ತಿಳಿಸಿ ವಿಮಾ ಸೌಲಭ್ಯ ಪಡೆದುಕೊಳ್ಳಲು ಕೋರಲಾಗಿದೆ.

Leave a Comment