ಯಾವ ಯಾವ ರೈತರಿಗೆ ಬೆಳೆ ಸಾಲಮನ್ನಾ ಭಾಗ್ಯ ಸಿಕ್ಕಿದೆ?

Written by Ramlinganna

Updated on:

Which farmers got croploan waiver 2018 ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ. ಕುಮಾರಸ್ವಾಮಿಯವರು ರಾಜ್ಯದ ರೈತರಿಗೆ ಬೆಳೆಸಾಲಮನ್ನಾ ಘೋಷಣೆ ಮಾಡಿದ್ದು ತಮಗೆಲ್ಲಾ ಗೊತ್ತಿದ್ದ ಸಂಗತಿ. ಆದರೆ ಇನ್ನೂವರೆಗೆ ಹಲವಾರು ರೈತರಿಗೆ ತಾಂತ್ರಿಕ ಕಾರಣಗಳಿಂದ ಸಾಲಮನ್ನಾಭಾಗ್ಯ ಸಿಕ್ಕಿಲ್ಲ. ಯಾವ ರೈತರಿಗೆ ಬೆಳೆ ಸಾಲಮನ್ನಾ ಆಗಿದೆ. ಯಾವ ರೈತರಿಗೆ ಬೆಳೆ ಸಾಲಮನ್ನಾ ಆಗಿಲ್ಲ? ಬೆಳೆ ಸಾಲಮನ್ನಾ ಯಾವ ಕಾರಣಕ್ಕಾಗಿ ಆಗಿಲ್ಲ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

Which farmers got croploan waiver ಮೊಬೈಲ್ ನಲ್ಲೇ ತಮಗೆಷ್ಟು ಬೆಳೆ ಸಾಲಮನ್ನಾ ಆಗಿದೆ ಚೆಕ್ ಮಾಡಿ

ರೈತರು ಬೆಳೆ ಸಾಲಮನ್ನಾ ಚೆಕ್ ಮಾಡಲು ಈ

https://mahitikanaja.karnataka.gov.in/Revenue/LoanWaiverReportBANKNew?ServiceId=2059&Type=TABLE&DepartmentId=2066

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ  ವಾಣಿಜ್ಯ ಬ್ಯಾಂಕಿನಲ್ಲಿ ಸಾಲ ಪಡೆದವರು ಸಾಲಮನ್ನಾವರದಿ ಚೆಕ್ ಮಾಡುವ ಲಿಂಕ್ ಓಪನ್ ಆಗುತ್ತದೆ. ಅಲ್ಲಿ ರೈತರು ರೈತ ಆಯ್ಕೆ ಮಾಡಿಕೊಳ್ಳಬೇಕು, ಜಿಲ್ಲೆಯ ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಹಾಗೂ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ಸಲ್ಲಿಸು ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮೂರು, ರೈತರ ಹೆಸರು, ಬ್ಯಾಂಕಿನ ಹೆಸರು, ಬ್ಯಾಂಕ್ ಶಾಖೆ, ಸಾಲದ ಖಾತೆಯ ಕೊನೆಯ ನಾಲ್ಕು ಅಂಕಿಗಳು, ಸಾಲದ ಪ್ರಕಾರ, ನೀವೆಷ್ಟು ಸಾಲ ಪಡೆದಿದ್ದೀರಿ. ಹಸಿರು ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಯಸ್ ಇರುತ್ತದೆ. ಹಸಿರು ಪಟ್ಟಿಯಲ್ಲಿ ನಿಮ್ಮೆಸರು ಏಕಿಲ್ಲ, ಕಾರಣ ತಿಳಿಸಲಾಗಿರುತ್ತದೆ. ನಂತರ ಸಾಲಮನ್ನಾ ವಿತರಿಸಲಾಗಿದೆಯೇ ಎಷ್ಟು ಸಾಲ ವಿತರಿಸಲಾಗಿದೆಹಾಗೂ ಸಾಲಮನ್ನಾ ಪ್ರಕ್ರಿಯೆ ಪೂರ್ಣಗೊಂಡಿದೆಯೇ ಎಂಬ ಮಾಹಿತಿ ಇರುತ್ತದೆ.

ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಸಾಲ ಮನ್ನಾ ವರದಿ ಚೆಕ್ ಮಾಡುವುದು ಹೇಗೆ?

ರೈತರು ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿಂದ ಸಾಲ ಪಡೆದಿದ್ದರೆ ಈ

https://mahitikanaja.karnataka.gov.in/Revenue/LoanWaiverReportPACSNew?ServiceId=2060&Type=TABLE&DepartmentId=2066

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ರೈತ, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿ ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು.

ಯಾವ ಬ್ಕಾಂಕಿನಲ್ಲಿ ಸಾಲ ಪಡೆದಿದ್ದಾರೆ. ಆ ಬ್ಯಾಂಕಿನ ಬ್ರ್ಯಾಂಚ್ ಹೆಸರು 31-12-2017 ರವರೆಗೆ ಎಷ್ಟು ಬೆಳೆ ಸಾಲ ಇತ್ತು. ನಿಮ್ಮ ಹೆಸರು ಗ್ರೀನ್ ಲಿಸ್ಟ್ ನಲ್ಲಿ ಏಕಿಲ್ಲ. ಬೆಳೆ ಸಾಲಮನ್ನಾ ಸಂಪೂರ್ಣವಾಗಿ ಆಗಿದೆಯೋ ಇಲ್ಲವೋ ಎಂಬುದನ್ನು ರೈತರು ಮೊಬೈಲ್ ನಲ್ಲಿ ಚೆಕ್ ಮಾಡಬಹುದು.

ರೈತರು ಸಹಕಾರ ಸಂಘಗಳಿಂದ ಪಡೆದ ಸಾಲದಲ್ಲಿ 1 ಲಕ್ಷ ರೂಪಾಯಿಯವರೆಗೆ ಸಾಲಮನ್ನಾ ಘೋಷಣೆ ಮಾಡಿತ್ತು. ಆದರೆ ತಾಂತ್ರಿಕ ದೋಷದಿಂದ ರೈತ ಸಾಲ ಮನ್ನಾ ಆಗಿರಲಿಲ್ಲ. ಒಟ್ಟು 17,50386 ರೈತರ ಪೈಕಿ 13334 ರೈತ ಪ್ರಕರಣಗಳಲ್ಲಿತಾಂತ್ರಿಕ ದೋ ಷದಿಂದ ಸಾಲಮನ್ನಾ ಆಗಿರಲಿಲ್ಲ.

ಇದನ್ನೂ ಓದಿ ನಿಮ್ಮ ಜಮೀನಿನ ಮೇಲೆ ಸಾಲವೆಷ್ಟಿದೆ? ಇಲ್ಲೇ ಚೆಕ್ ಮಾಡಿ

ಸಾಲಮನ್ನಾಕ್ಕಾಗಿ ವಿಧಿಸಲಾಗಿದ್ದ ಷರತ್ತುಗಳನ್ನು ಪೂರೈಸದೇ ಇರುವ ರೈತರ ಸಾಲಮನ್ನಾ ಮಾಡಲು ಮತ್ತೊಂದು ಅವಕಾಶ ನೀಡುವುದಾಗಿೆ ಸಹಕಾರ ಸಚಿವರು ಇತ್ತೀಚೆಗೆ ತಿಳಿಸಿದ್ದರು. ಇದರಿಂದಾಗಿ ಸಾಲಮನ್ನಾ ಆಗದೆ ಇರುವ ರೈತರಿಗೆ ಮತ್ತೊಂದು ಅವಕಾಶ ದೊರೆತಂತಾಗಿತ್ತು. ಆದರೆ ಇನ್ನೂವರೆಗೂ ಸಾಲಮನ್ನಾ ಕುರಿತಂತೆ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ. ಹಾಗಾಗಿ ಸಾಲಮನ್ನಾ ಭಾಗ್ಯದಿಂದ ವಂಚಿತರಾದ ರೈತರು ಸರ್ಕಾರದ ಘೋಷಣೆಕ್ಕಾಗಿ ಕಾಯುತ್ತಾ ಕುಳಿತಿದ್ದಾರೆ.

ಬೆಳೆ ಸಾಲಮನ್ನಾ ಮಾಡಿ- ಬಿ.ಆರ್. ಪಾಟೀಲ್

ರಾಜ್ಯ ಸರ್ಕಾರವು ಕೂಡಲೇ ರೈತರ ಸಹಾಯಕ್ಕೆ ಧಾವಿಸಬೇಕು ರಾಜ್ಯದ ಎಲ್ಲಾ ಬ್ಯಾಂಕುಗಳಿಂದ ಪಡದಿರುವಂತಹ ಬೆಳೆ ಸಾಲವನ್ನು ಮನ್ನಾ ಮಾಡಬೇಕಂದು ಮಾಜಿ ಶಾಸಕ ಬಿ.ಆರ್. ಪಾಟೀಲ್್ ಆಗ್ರಹಿಸಿದ್ದಾರೆ. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ರಾಜ್ಯದ ರೈತರಿಗೆ ಬೆಳೆ ಸಾಲಮನ್ನಾ ಮಾಡದಿದ್ದರೆ ಸರ್ಕಾರದ ವಿರುದ್ಧ ರೈತರೊಂದಿಗೆ ಸೇರಿ ಉಗ್ರವಾದ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Leave a Comment