ಪಿಎಂ ಕಿಸಾನ್ 14ನೇ ಕಂತು ಯಾರಿಗೆ ಜಮೆ

Written by Ramlinganna

Updated on:

Which farmer will get pmkisan money ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಯಾವ ರೈತರಿಗೆ ಜಮೆಯಾಗುತ್ತದೆ? ಯಾವ ರೈತರಿಗೆ ಜಮೆಯಾಗುವುದಿಲ್ಲ ಎಂಬುದನ್ನುರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು,  ರೈತರು ದೇಶದ ಯಾವುದೇ ಮೂಲೆಯಲ್ಲಿ ಕುಳಿತು ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ನೊಂದಿಗೆ ಯಾವ ಯಾವ ರೈತರಿಗೆ ಹಣ ಜಮೆಯಾಗುತ್ತದೆ ಯಾವ ಯಾವ ರೈತರಿಗೆ ಜಮೆಯಾಗುವುದಿಲ್ಲ ಎಂಬುದನ್ನು ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಸಿಂಪಲ್ ವಿಧಾನ.

ಪಿಎಂ ಕಿಸಾನ್ ಹಣ ಯಾವ ರೈತರಿಗೆ ಜಮೆ ಯಾವ ರೈತರಿಗೆ ಜಮೆಯಾಗುವುದಿಲ್ಲ ಚೆಕ್ ಮಾಡುವುದು ಹೇಗೆ?

ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಯಾರಿಗೆ ಜಮೆಯಾಗುತ್ತದೆ ಯಾರಿಗೆ ಜಮೆಯಾಗಲ್ಲಎಂಬುದನ್ನು ಚೆಕ್ ಮಾಡಲು ಈ

https://pmkisan.gov.in/VillageDashboard_Portal.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಆಗ ಗ್ರಾಮವಾರು ಅಂದರೆ ಒಂದು ಗ್ರಾಮದಲ್ಲಿ ಯಾವ ಯಾವ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗುತ್ತದೆ ಎಂಬುದನ್ನುಚೆಕ್ ಮಾಡುವ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರು ಕರ್ನಾಟಕ ರಾಜ್ಯ, ಕಲಬುರಗಿ ಜಿಲ್ಲೆ, ತಾಲೂಕು ಹಾಗೂ ನಿಮ್ಮ ಊರು ಆಯ್ಕೆ ಮಾಡಿಕೊಂಡು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದರೆ ಸಾಕು,  ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರು ಆಧಾರ್ ಅಥೆಂಟಿಕೇಶನ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

Successfully authenticated ಲಿಸ್ಟ್

ಸಕ್ಸೆಸಫುಲಿ ಅಥೆಂಟಿಕೇಟೆಡ್ ಲಿಸ್ಟ್ ನಲ್ಲಿರುವ ರೈತರು ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಪಡೆಯಲು ಅರ್ಹರಾಗಿರುತ್ತಾರೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಚೆಕ್ ಮಾಡಬಹುದು. ಅಲ್ಲಿ ಹೆಸರು ಅಲ್ಪಾಬೆಟಿಕ್ ಆರ್ಡರ್ ಅಂದರೆ ಎ ದಿಂದ ಆರಂಭವಾಗುತ್ತದೆ. ನಿಮ್ಮ ಹೆಸರು ಯಾವ ಅಕ್ಷರದಿಂದ ಆರಂಭವಾಗುತ್ತದೆ ಎಂಬುದನ್ನು ನೋಡಿಕೊಂಡು ನಿಮ್ಮ ಹೆಸರು ಚೆಕ್ ಮಾಡಬಹುದು.

ಅನರ್ಹ ರೈತರ ಪಟ್ಟಿTotal ineligible  ಲಿಸ್ಟ್

ಟೋಟಲ್ ಇನ್ ಎಲಿಜಿಬಲ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ನೀವು ಪಿಎಂ ಕಿಸಾನ್ ಯೋಜನೆಗೆ ಅನರ್ಹರಾಗಿರುತ್ತೀರಿ ಎಂದರ್ಥ. ನಿಮಗೆ ಹಿಂದಿನ ಅಂದರೆ ಪಿಎಂ ಕಿಸಾನ್ ಯೋಜನೆಯ13ನೇ ಕಂತಿನ ಹಣ ನಿಮಗೆ ಜಮೆಯಾದರೂ ಮುಂದಿನ ಅಂದರೆ ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಜಮೆಯಾಗುವುದಿಲ್ಲ ಎಂದರ್ಥ.

ಇದನ್ನೂ ಓದಿ : ರೈತರ ಜಮೀನಿಗೆ ಹೋಗುವ ಕಾಲಾದಾರಿ, ಬಂಡಿದಾರಿ ಹಳ್ಳಕೊಳ್ಳಗಳ ಮಾಹಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ

ಇಲ್ಲಿಯೂ ರೈತರ ಹೆಸರು ಅಲ್ಪಾಬೆಟಿಕ್ ಆರ್ಡರ್ ಎ ಟು ಝಡ್ ವರೆಗೆ ಇರುತ್ತದೆ.. ನಿಮ್ಮ ಹೆಸರು ಯಾವ ಅಕ್ಷರದಿಂದ ಆರಂಭವಾಗುತ್ತದೆ ಎಂಬುದನ್ನು ಲಿಸ್ಟ್ ನಲ್ಲಿ ಚೆಕ್ ಮಾಡಬಹುದು.

Which farmer will get pmkisan money ಆನ್ಲೈನ್ ನಲ್ಲಿ ನೋಂದಣಿ ಮಾಡಿರುವ  ರೈತರ ಸ್ಟೇಟಸ್

ಪಿಎಂ ಕಿಸಾನ್ ಯೋಜನೆಗೆ ಆನ್ಲೈನ್ ನಲ್ಲಿ ನೋಂದಣಿ ಮಾಡಿಸಿರುವ ರೈತರು ನೋಂದಣಿ Accept ಆಗಿದೆಯೋ ಇಲ್ಲವೋ ಎಂಬುದನ್ನುಚೆಕ್ ಮಾಡಬಹುದು. ಆನ್ಲೈನ್ ನಲ್ಲಿ ನೋಂದಣಿ ಮಾಡಿಸಿದ ರೈತರು ಅರ್ಹತೆ ಪಡೆದಿದ್ದರೂ ಪಿಎಂ ಕಿಸಾನ್ ಹಣ ಜಮೆಯಾಗದಿದ್ದರೆ ಕೂಡಲೇ ಬಯೋಮೆಟ್ರಿಕ್ ಆಧಾರಿತ ಇಕೆವೈಸಿ ಮಾಡಿಸಿಕೊಳ್ಳಬಹುದು. ರೈತರು ತಮ್ಮ ಆಧಾರ್ ಕಾರ್ಡ್, ಜಮೀನಿನ ಪಹಣಿ ಹಾಗೂ ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಸಲ್ಲಿಸಬೇಕು. ಇಕೆವೈಸಿ ಮಾಡಿಸದೆ ಇರುವ ರೈತರು ಬಯೋಮೆಟ್ರಿಕ್ ಆಧಾರಿತ ಇಕೆವೈಸಿ ಮಾಡಿಸಿದರೆ ಮಾತ್ರ ಪಿಎಂ ಕಿಸಾನ್ ಹಣ ಜಮೆಯಾಗುತ್ತದೆ. ಅಂದರೆ ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಜಮೆಯಾಗುತ್ತದೆ.

Leave a Comment