IAS officer Salary ದೇಶದ ಅತೀ ದೊಡ್ಡ ಮತ್ತು ಗೌರವಾನ್ವಿತ ಹುದ್ದೆಗಳು ಯಾವುದು ನಿಮಗೆ ಗೊತ್ತಾ. ಡಿಸಿ ಮತ್ತು ಎಸ್.ಪಿ ಎಂಬ ಹೆಸರುಗಳನ್ನು ಪ್ರತಿಯೊಬ್ಬರೂ ಕೇಳಿರುತ್ತೀರಿ. ಇವೆರಡು ಹುದ್ದೆಗಳೇ ಐಎಎಸ್ ಮತ್ತು ಐಪಿಎಸ್. ಡಿಸಿ ಐಎಎಸ್ ಆಫಿಸರ್. ಎಸ್.ಪಿ ಐಪಿಎಸ್ ಆಫೀಸರ್.ಇವರೆಡು ಹುದ್ದೆಗಳು ದೇಶಕ್ಕೆ ಗೌರವ ತರುವ ಮತ್ತು ಹೆಚ್ಚು ಪ್ರಸಿದ್ಧಿ ಪಡೆದಿರುವ ಹುದ್ದೆಗಳಾಗಿವೆ (What is the salary of an IAS officer?).
ರಾಜ್ಯದಲ್ಲಿ ಕೆಎಎಸ್ ಪರೀಕ್ಷೆಯಂತೆ ದೇಶದಲ್ಲಿ ಐಎಎಸ್ ಪರೀಕ್ಷೆಗಳು ನಡೆಯುತ್ತವೆ. ಇದಕ್ಕಾಗಿ ದೇಶದ ಎಲ್ಲಾ ರಾಜ್ಯದ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಈ ಹುದ್ದೆಗಳು ಯಾರ ಶಿಫಾರಸ್ಸು ಇಲ್ಲದೆ ಯಾವ ಲಂಚವೂ ಇಲ್ಲದೆ ಆಯ್ಕೆಯಾಗುವ ಅತ್ಯುನ್ನತ ಹುದ್ದೆಗಳಾಗಿವೆ.
ಈ ಹುದ್ದೆಗಳಿಗೆ ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆ ನಡೆಸಿ ನೇಮಕಾತಿ ಮಾಡುತ್ತದೆ. ಪ್ರತಿವರ್ಷವು ಯುಪಿಎಸ್ಸಿ ಐಎಎಸ್, ಐಪಿಎಸ್, ಐಎಫ್ಎಸ್ ಹುದ್ದೆಗಳನ್ನು ಭರ್ತಿ ಮಾಡುತ್ತದೆ. ದೇಶದಾದ್ಯಂತ ಲಕ್ಷಾಂತರ ಐಎಎಸ್, ಐಪಿಎಸ್ ಆಕಾಂಕ್ಷಿಗಳು ವರ್ಷಾನುಗಟ್ಟಲೇ ಈ ಪರೀಕ್ಷೆಗಳಿಗೆ ತಯಾರಿ ನಡೆಸಿ ಹುದ್ದೆಗಿಟ್ಟಿಸಿಕೊಳ್ಳುತ್ತಾರೆ. ಅಂದಹಾಗೆ ಈ ಹುದ್ದೆಗಳಿಗೆ ವೇತನ ಎಷ್ಟು ಎಂಬುದು ನಿಮಗೆ ಗೊತ್ತೇ. ವೇತನದೊಂದಿಗೆ ಈ ಹುದ್ದೆಗಳಿಗೆ, ಏನೆಲ್ಲಾ ಸೌಲಭ್ಯಗಳು ಸಿಗಲಿವೆ ಎಂಬ ಮಾಹಿತಿ ಇಲ್ಲಿದೆ.
ಐಎಎಸ್ ಮತ್ತು ಐಪಿಎಸ್ ಆಫೀಸರ್ ಗಳಿಗೂ ಇತರ ಎಲ್ಲಾ ಹುದ್ದೆಗಳಂತೆ ಬೇಸಿಕ್ ಇರುತ್ತದೆ. ಇವರಿಗೆ ಬೇಸಿಕ್ ವೇತನ 56,100 ರೂಪಾಯಿ ನೀಡಲಾಗುತ್ತದೆ. ರೂ.16,500 ಗ್ರೇಡ್ ಪೇ ನೀಡಲಾಗುತ್ತದೆ. ಒಬ್ಬ ಸೀನಿಯರ್ ಐಎಎಸ್ ಆಫೀಸರ್ ಗರಿಷ್ಠ ರೂ.2,70,000 ಬೇಸಿಕ್ ಮಾಸಿಕ ವೇತನವನ್ನು ಪಡೆಯುತ್ತಾರೆ. ಇದಲ್ಲದೆ ಈ ಕೆಳಗಿನ ವಿಶೇಷ ಭತ್ಯೆಗಳನ್ನು ಅವರಿಗೆ ನೀಡಲಾಗುತ್ತದೆ.
– ತುಟ್ಟಿ ಭತ್ಯೆ (Dearness Allowance)
– ಮನೆ ಬಾಡಿಗೆ ಭತ್ಯೆ (House Rent Allowance)
– ಪ್ರಯಾಣ ಭತ್ಯೆ (Travel Allowance)
– ಸಾರಿಗೆ ಭತ್ಯೆ (Transport Allowance)
– ವೈದ್ಯಕೀಯ ಭತ್ಯೆ (Medical Allowance)
ಐಪಿಎಸ್ ಹುದ್ದೆಗಳಿಗೆ ಅವರು ತೆಗೆದ ರ್ಯಾಂಕ್ ಆಧಾರಿತವಾಗಿ ವಿವಿಧ ಮಟ್ಟದ ಹುದ್ದೆಗಳಾದ ಡೈರೆಕ್ಟರ್ ಜೆನೆರಲ್ ಆಫ್ ಪೊಲೀಸ್, ಡೈರೆಕ್ಟರ್ ಆಫ್ ಐಬಿ ಅಥವಾ ಸಿಬಿಐ, ಇನ್ಸ್ಪೆಕ್ಟರ್ ಜೆನೆರಲ್ ಆಫ್ ಪೊಲೀಸ್, ಡೆಪ್ಯೂಟಿ ಇನ್ಸ್ಪೆಕ್ಟರ್ ಜೆನೆರಲ್ ಆಫ್ ಪೊಲೀಸ್, ಸೀನಿಯರ್ ಸೂಪರಿಂಟೆಂಡಂಟ್ ಆಫ್ ಪೊಲೀಸ್, ಅಡಿಷನಲ್ ಸೂಪರಿಂಟೆಂಡಂಟ್ ಆಫ್ ಪೊಲೀಸ್, ಡೆಪ್ಯೂಟಿ ಸೂಪರಿಂಟೆಂಡಂಟ್ ಆಫ್ ಪೊಲೀಸ್ ಆಗಿ ನೇಮಕ ಮಾಡಲಾಗುತ್ತದೆ. ಈ ಹುದ್ದೆಗಳಿಗೆ 7ನೇ ಪೇ ಕಮಿಷನ್ ಸ್ಕೇಲ್ ಪ್ರಕಾರ ಕೆಳಗಿನಂತೆ ವೇತನ ನೀಡಲಾಗುತ್ತದೆ. ಐಪಿಎಸ್ ಆಫೀಸರ್ ಗಳನ್ನು ರ್ಯಾಂಕ್ ಆಧಾರಿತವಾಗಿ ಈ ಕೆಳಗಿನ ಹುದ್ದೆಗಳಿಗೆ ನೇಮಕ ಮಾಡಲಾಗುವುದು.
IAS officer Salary ಟಾಪ್ ಹುದ್ದೆಗಳ ಬೇಸಿಕ್ ವೇತನದ ಪಟ್ಟಿ
ಡೈರೆಕ್ಟರ್ ಜೆನೆರಲ್ ಆಫ್ ಪೊಲೀಸ್ /ಡೈರೆಕ್ಟರ್ ಆಫ್ ಐಬಿ ಅಥವಾ ಸಿಬಿಐ | ರೂ. 2,25,000 |
ಡೈರೆಕ್ಟರ್ ಜೆನೆರಲ್ ಆಫ್ ಪೊಲೀಸ್ | ರೂ. 2,05,400 |
ಇನ್ಸ್ಪೆಕ್ಟರ್ ಜೆನೆರಲ್ ಆಫ್ ಪೊಲೀಸ್ | ರೂ. 1,44,200 |
ಡೆಪ್ಯೂಟಿ ಇನ್ಸ್ಪೆಕ್ಟರ್ ಜೆನೆರಲ್ ಆಫ್ ಪೊಲೀಸ್ | 1,31,100 |
ಸೀನಿಯರ್ ಸೂಪರಿಂಟೆಂಡಂಟ್ ಆಫ್ ಪೊಲೀಸ್ | 78,800 |
ಅಡಿಷನಲ್ ಸೂಪರಿಂಟೆಂಡಂಟ್ ಆಫ್ ಪೊಲೀಸ್ | 67,700 |
ಡೆಪ್ಯೂಟಿ ಸೂಪರಿಂಟೆಂಡಂಟ್ ಆಫ್ ಪೊಲೀಸ್ | 56,100 |
ಐಎಎಸ್ ತರಬೇತಿ ವೇಳೆ ಸಂಬಳ (IAS Training)
ಐಎಎಸ್ ಅಧಿಕಾರಿಗಳಿಗೆ ತರಬೇತಿ ವೇಳೆ ಸಂಬಳ ವೂ ಸಿಗುತ್ತದೆ. ಆದರೆ ಅಧಿಕೃತವಾಗಿ ಇದು ಸಂಬಳವಲ್ಲ, ಇದನ್ನು ಸ್ಪೆಷಲ್ ಪೇ ಅಡ್ವಾನ್ಸ್ ಎಂದು ಕರೆಯಲಾಗುತ್ತದೆ. ಆದರೆ, ಈ ಮೊತ್ತ ವು ತಿಂಗಳಿಗೆ 45,000 ರೂ. ಅಂದರೆ, ದಿನದ ಕೊನೆಯಲ್ಲಿ, ಅವರು 38,500 ಪಡೆಯುತ್ತಾರೆ ಏಕೆಂದರೆ 10,000 ಮೆಸ್ ಫುಡ್, ಯೂನಿಫಾರ್ಮ್, ಟ್ರ್ಯಾಕ್ ಸೂಟ್, ಕುದುರೆ ಸವಾರಿ ಯ ಉಡುಪುಗಳು ಇತ್ಯಾದಿ. ಇದು ಇತರ ಇತರ ವೆಚ್ಚಗಳನ್ನು ಒಳಗೊಂಡಿದೆ.
ಇದನ್ನೂ ಓದಿ : Aadhar Voter id link ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಇಡೀ ಐಎಎಸ್ ಕೇಡರ್ ಅನ್ನು 8 Ranks ಅಥವಾ ಗ್ರೇಡ್ ಗಳಾಗಿ ವಿಂಗಡಿಸಲಾಗಿದೆ. ಅಲ್ಲದೆ, ಬಡ್ತಿ ಗಳನ್ನು ಪಡೆಯುತ್ತಿದ್ದಂತೆ ಮೂಲ ವೇತನವು ಕಾಲಕಾಲಕ್ಕೆ ಹೆಚ್ಚಾಗುತ್ತಲೇ ಇರುತ್ತದೆ. ಅಲ್ಲದೆ, ಬಡ್ತಿಯು ಸೇವಾ ದಾಖಲೆ ಆಧಾರದ ಮೇಲೆ ನಡೆಯುತ್ತದೆ., ಐಎಎಸ್ ಆಫೀಸರ್ ಸಂಬಳವು ಅವರ ಅನುಭವ, ಶ್ರೇಯಾಂಕಗಳು ಮತ್ತು ವೇತನ ದರ್ಜೆಯನ್ನು ಅವಲಂಬಿಸಿರುತ್ತದೆ. ಖಾಸಗಿ ಸಂಸ್ಥೆಯಲ್ಲಿ ಸಂಬಳ ಹೆಚ್ಚು ಇದ್ದರೂ ಐಎಎಸ್ ಅಧಿಕಾರಿ ಪಡೆಯುವ ಗೌರವಕ್ಕೆ ಹೋಲಿಕೆ ಮಾಡಲು ಸಾಧ್ಯವಿಲ್ಲ.
ಯಾವುದು ಉತ್ತಮ ಐಎಎಸ್ ಅಥವಾ ಐಪಿಎಸ್? (Which is better IAS or IPS)
ಭಾರತೀಯ ಪೊಲೀಸ್ ಸೇವೆ ಐಎಎಸ್ ನಂತರ ಬರುತ್ತದೆ. ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಗ್ರ ಶ್ರೇಣಿಯಲ್ಲಿರುವ ಅಭ್ಯರ್ಥಿಗಳು ಐ.ಎ.ಎಸ್. ಇಷ್ಟಕ್ಕೂ ಐಪಿಎಸ್ ಆಯ್ಕೆ ಮಾಡಲು ಇಚ್ಛಿಸಿದರೆ ಅದು ಅಭ್ಯರ್ಥಿಯ ಮೇಲೆ ಅವಲಂಬಿತವಾಗಿರುತ್ತದೆ. ಐಎಎಸ್ ಗಿಂತ ಐಪಿಎಸ್ ಕೆಳಗಿನ ರ್ಯಾಂಕ್ ಹೊಂದಿದೆ.