ಪೋಡಿ ನಕ್ಷೆ, ಆಲಿನೇಷನ್, ಇ-ನಕ್ಷೆ, ಸ್ಟೇಟಸ್ ಮೋಜಿನಿಯಲ್ಲಿ ನೋಡಿ

Written by By: janajagran

Updated on:

what is mojini status ಹದ್ದುಬಸ್ತು ಹಾಗೂ ಜಮೀನಿನ ಸರ್ವೆ ನಂಬರ್ ಅಳತೆಗಾಗಿ ಅರ್ಜಿ ಸಲ್ಲಿಸಿದ ನಂತರ ಯಾವ ದಿನಾಂಕದಂದು ಯಾವ ಅಧಿಕಾರಿ ಬರುತ್ತಾರೆ, ನಿಮ್ಮೂರಿನ ಮೊಬೈಲ್ ಆ್ಯಪ್, ಪೋಡಿ, ಇ ನಕ್ಷೆಯ ಮ್ಯಾಪ್ ವೀಕ್ಷಿಸಲು ನೀವು ಎಲ್ಲಿಗೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿಯೇ ನೋಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ…. ಇಲ್ಲಿದೆ ಸಂಪೂರ್ಣ ಮಾಹಿತಿ.
ಹೌದು, ಕರ್ನಾಟಕ ಸರ್ಕಾರ ಕಂದಾಯ ಇಲಾಖೆಯು ಅಭಿವೃದ್ಧಿಪಡಿಸಿದ ಮೋಜಿನಿ ಆ್ಯಪ್ ಮೂಲಕ ರೈತರು ಹಾಗೂ ಸಾಮಾನ್ಯ ಜನರು ಮೊಬೈಲ್ ನಲ್ಲಿಯೇ ಈ ಸೌಲಭ್ಯ ಪಡೆದುಕೊಳ್ಳಬಹುದು. ಗೂಗಲ್ ನಲ್ಲಿ ಮೋಜಿನಿ ಎಂದು ಟೈಪ್ ಮಾಡಬೇಕು. ಅಲ್ಲಿ ಕಾಣುವ ಭೂಮೋಜಿನಿ ಕರ್ನಾಟಕ ಸರ್ಕಾರದ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಥವಾ ಈ

  http://bhoomojini.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು. ಲಿಂಕ್ ಓಪನ್ ಆಗುತ್ತದೆ. ಅಲ್ಲಿ ಮೋಜಿನಿ ಆ್ಯಪ್ ನೀಡುವ ಸೇವೆಗಳ ಮಾಹಿತಿ ಕಾಣುತ್ತದೆ.

what is mojini status ಮೋಜಿನಿ ಆ್ಯಪ್ ದಿಂದಾಗುವ ಉಪಯೋಗಗಳು

ಮೋಜಿನಿ ಆ್ಯಪ್ ಸಹಾಯದಿಂದಾಗಿ ಊರಿನ ಮ್ಯಾಪ್ ಡೌನ್ಲೋಡ್ ಮಾಡಿಕೊಳ್ಳಬಹುದು. 11 ಇ ನಕ್ಷೆ, ಆ್ಯಲಿನೇಷನ್ ಮತ್ತು ಪೋಡಿ ನಕ್ಷೆ ವೀಕ್ಷಿಸಿ ಡೌನ್ಲೋಡ್ ಮಾಡಿಕೊಳ್ಳಬಹುದು. ಮೋಜಿನಗಾಗಿ ಸಲ್ಲಿಸಿದ ಅರ್ಜಿಯ ಸ್ಥಿತಿಯನ್ನು ನೋಡಬಹುದು. ಹೌಗೂ ಈ ಮೇಲೆ ಹೇಳಿದ ಮೂರು ಸೌಲಭ್ಯಗಳನ್ನು ಮೊಬೈಲ್ ನಲ್ಲಿಯೇ ಕ್ಷಣಾರ್ಧದಲ್ಲಿ ಮನೆಯಲ್ಲಿಯೇ ಕುಳಿತು ನೋಡಬಹುದು.
ಅದು ಹೇಗೆ ಅಂದುಕೊಂಡಿದ್ದೀರಾ…. ಇಲ್ಲಿದೆ ಸಂಪೂರ್ಣ ಮಾಹಿತಿ
1. ಗ್ರಾಮದ ನಕ್ಷೆ ನೋಡಬೇಕಾಗದರೆ ಮೋಜಿನಿ ಆ್ಯಪ್ ನ ಡೌನ್ಲೋಡ್ ವಿಲೇಜ್ ಮ್ಯಾಪ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ  ನಿಮ್ಮ ಜಮೀನಿನ ಮ್ಯಾಪ್ mobileನಲ್ಲಿ ಡೌನ್ಲೋಡ್ ಮಾಡಿ

ಇಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಂಡು ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ಕೆಳಕೆ ಕಾಣುವ ನಕ್ಷೆ ಮೇಲೆ ಕ್ಲಿಕ್ ಮಾಡಿ ನಿಮ್ಮ ಗ್ರಾಮದ ನಕ್ಷೆ ವೀಕ್ಷಿಸಬಹುದು. ಇಲ್ಲಿ ನಿಮ್ಮೂರಿನ ಸರಹದ್ದು, ನಿಮ್ಮೂರಿನ, ರಸ್ತೆ, ಕಾಲುವೆ, ಹಳ್ಳಕೊಳ್ಳ, ದೇವಸ್ಥಾನ, ಸರ್ವೆ ನಂಬರ್, ಗುಡ್ಡ, ಗಡಿ ಊರಿನ ಸರಹದ್ದುಗಳನ್ನು ನೋಡಬಹುದು.
2. 11 ಇ- ನಕ್ಷೆ, ಆಲಿನೇಷನ್ ನಕ್ಷೆ, ಹದ್ದುಬಸ್ತು, ಮತ್ತು ಪೋಡಿ ನಕ್ಷೆಗಳಿಗಾಗಿ ಎರಡನೇ ಆಪಷನ್ 11 ಇ -ನಕ್ಷೆ, ಆಲಿನೇಷನ್ ನಕ್ಷೆ, ಪೋಡಿ ನಕ್ಷೆ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಪ್ಲಿಕೇಷನ್ ನಂಬರ್ ಹಾಗೂ ಅರ್ಜಿಯ ವಿಧದ ಮೇಲೆ ಕ್ಲಿಕ್ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದರೆ ಸಿದ್ದವಾದ 11ಇ-ನಕ್ಷೆ, ಪೋಡಿ ನಕ್ಷೆ ವೀಕ್ಷಿಸಬಹುದು.
3.11ಇ ನಕ್ಷೆ, ಪೋಡಿ, ಆಲಿನೇಷನ್, ಹದ್ದುಬಸ್ತು ಮತ್ತು ಇ ಸ್ವತ್ತು ಗಾಗಿ ಅರ್ಜಿ ಸಲ್ಲಿಸಿದ್ದರೆ ಅರ್ಜಿಯ ಸ್ಟೇಟಸ್ ನೋಡಬೇಕಾಗದರೆ ವೀವ್ ಮೋಜಿನಿ ರೆಕ್ಟೇಸ್ಟ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ಆಗ ಅಪ್ಲಿಕೇಷನ್ ನಂಬರ್ ನಮೂದಿಸಿದ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಅರ್ಜಿಗೆ ಸಂಬಂಧಿಸಿದಂತೆ ಸರ್ವೆ ಮಾಡಲ್ ಯಾವ ಸರ್ವೆಯರ್ ಗೆ ಹಂಚಿಕೆಯಾಗಿದೆ ಎಂಬುದನ್ನು ತಿಳಿಯಲು ಅಲಾಟಮೆಂಟ್ ಡಿಟೇಲ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಅಪ್ಲಿಕೇಷನ್ ನಂಬರ್ ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು.ಸರ್ವೆಯರ್, ಯಾವ ದಿನಾಂಕದಂದು ಸರ್ವೆ ಮಾಡಲು ಬರುತ್ತಾರೆ ಎಂಬಿತ್ಯಾದಿ ಮಾಹಿತಿ ಕಾಣುತ್ತದೆ.

ಯಾರೂ ಮೋಜಿನಿಗಾಗಿ ಅರ

Leave a Comment