ಇಂದಿನಿಂದ ಮತ್ತೆ ಈ ಜಿಲ್ಲೆಗಳಲ್ಲಿ ಭಾರಿ ಮಳೆ- ನಿಮ್ಮೂರಿನ ಮಳೆಯ ಮಾಹಿತಿ ಇಲ್ಲಿ ಸಿಗಲಿದೆ

Written by Ramlinganna

Published on:

weather report check here :  ಕರ್ನಾಟಕ ರಾಜ್ಯಾದ್ಯಂತ ಮತ್ತೆ ಮುಂಗಾರು ಮಳೆ ಚುರುಕುಗೊಂಡಿದೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಈಗ ರಾಜ್ಯಾದ್ಯಂತ ವ್ಯಾಪಿಸಿದೆ.

ಹೌದು, ಇಂದು ಕಲಬುರಗಿ, ಬೀದರ್, ಯಾದಗಿರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.

ಹವಾಮಾನ ಇಲಾಖೆಯ ಪ್ರಕಾರ ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಜೋರು ಗಾಳಿ ಸಹಿತ ಧಾರಾಕಾರ ಮಳೆಯಾಗಲಿದೆ. ಇದರಿಂದಾಗಿ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಸೆಪ್ಟೆಂಬರ್ 11 ರಂದು ಚಾಮರಾಜನಗರ, ಮಂಡ್ಯ ಮೈಸೂರು  ಹಾಗೂ ರಾಮನಗರ ಜಿಲ್ಲೆಗಳಲ್ಲಿಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ : ಪಿಎಂ ಕಿಸಾನ್ ಮುಂದಿನ ಕಂತಿನ ಹಣ ಜಮೆಯಾಗಬೇಕೆ? ಇಲ್ಲಿ ಆಧಾರ್ ಸೀಡ್ ಮಾಡಿ

ಸೆಪ್ಟೆಂಬರ್ 12 ರಿಂದ ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಮಳೆಯಾಗಲಿದೆ.ಬಾಗಲಕೋಟೆ, ಕೊಪ್ಪಳ, ವಿಜಯಪುರ ಜಿಲ್ಲೆಗಳಲ್ಲಿಯೂ ಧಾರಾಕಾರ ಮಳೆಯಾಗಲಿರುವುದರಿಂದ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಳಗಾವಿ, ವಿಜಯಪುರ, ಜಿಲ್ಲೆಗಳ ವಿವಿಧ ಭಾಗಗಳಲ್ಲಿಯೂ ಮಳೆಯಾಗಲಿದೆ. ಕರಾವಳಿಹಾಗೂ ಮಲೆನಾಡಿಗೆ ತಾತ್ಕಾಲಿಕ ವಿರಾಮ ನೀಡಿದ್ದ ಮಳೆರಾಯ ಮತ್ತೆ ಒಳನಾಡು ಪ್ರದೇಶಗಳಲ್ಲಿ ಅಬ್ಬರಿಸಲಿದ್ದಾನೆ. ಬೆಂಗಳೂರು ಕಲಬುರಗಿ, ಧಾರವಾಡ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಿಮ್ಮೂರಲ್ಲಿ ಮಳೆಯಾಗುತ್ತೋ ಇಲ್ಲವೋ? ಇಲ್ಲಿ ನೀಡಲಾದ ನಂಬರಿಗೆ ಕರೆ ಮಾಡಿದರೆ ಸಾಕು, ನಿಮಗೆ ಮಾಹಿತಿ ಸಿಗಲಿದೆ.

weather report check here  ನಿಮ್ಮೂರಿನ ಮಳೆಯ ಮಾಹಿತಿ ಬೇಕೆ?

ನಿಮ್ಮೂರಿನಲ್ಲಿ ಮಳೆಯಾಗುವ ಬರುತ್ತದೆ ಎಂಬ ಮಾಹಿತಿ ಬೇಕೆ?  ವರುಣಮಿತ್ರ ಸಹಾಯವಾಣಿ ನಂಬರ್ 92433 45433 ಗೆ ಕರೆ ಮಾಡಿದರೆ ಸಾಕು, ನಿಮಗೆ ಮಳೆಯ ಮಾಹಿತಿ ದೊರೆಯಲಿದೆ. ಮುಂದಿನ ದಿನಗಳಲ್ಲಿ ಮಳೆ ಯಾವಾಗ ಬರುತ್ತದೆ ಎಂಬುದನ್ನು ಸಹ ತಿಳಿದುಕೊಳ್ಳಬಹುದು.

ಐದು ದಿನ ಮೊದಲೇ ಮಳೆಯ ಮಾಹಿತಿ ಇಲ್ಲಿ ಪಡೆಯಿರಿ

ಮೇಘದೂತ್ ಆ್ಯಪ್ ಮೂಲಕ ರೈತರು ಐದು ದಿನ ಮೊದಲೇ ಮಳೆಯ ಮಾಹಿತಿ ಸಿಗಲಿದೆ. ಮಳೆಯ ಮಾಹಿತಿ ಪಡೆಯಲು ಈ

https://play.google.com/store/apps/details?id=com.aas.meghdoot&hl=en_IN&gl=US&pli=1

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೇಘದೂತ್ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ Install ಮೇಲೆ ಕ್ಲಿಕ್ ಮಾಡಬೇಕು.  ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಮೇಘದೂತ್ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ ನೀವು ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು.

ಆಗ ನಿಮಗೆ ನಿಖರವಾದ ಬೆಳೆ ಸಲಹೆ ಪಡೆಯಿರಿ ಎಂಬ ಸಂದೇಶ ಕಾಣಿಸುತ್ತದೆ. ಅದರ ಕೆಳಗಡೆಯಿರುವ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ನಂತರ ವಿವಿಧ ಭಾಷೆಗಳಲ್ಲಿ ದಾದನಂತರ ಹವಾಮಾನ ಮುನ್ಸೂಚನೆ ಎಂಬ ಸಂದೇಶ ಕಾಣಿಸುತ್ತದೆ.

Leave a Comment