subsidy for rotavator cultivator ಕೃಷಿ ಇಲಾಖೆಯಿಂದ ವಿವಿಧ ಯೋಜನೆಗಳಡಿಯಲ್ಲಿ ಕೃಷಿ ಯಂತ್ರೋಪಕರಣಗಳ ಖರೀದಿಗೆ ಶೇ. 90 ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಹಾಸನ ಜಿಲ್ಲೆ, ಮೈಸೂರು ಜಿಲ್ಲೆ ಹಾಗೂ ತುಮಕೂರು ಜಿಲ್ಲೆಯ ರೈತರಿಂದ ವಿವಿಧ ಯೋಜನೆಗಳಡಿಯಲ್ಲಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
subsidy for rotavator cultivator ಮೈಸೂರು ಜಿಲ್ಲೆಯ ರೈತರಿಂದಲೂ ಅರ್ಜಿ ಆಹ್ವಾನ
2022-23ನೇ ಸಾಲಿನ ಕೃಷಿ ಯಾಂತ್ರೀಕರಣ, ಕೃಷಿ ಸಂಸ್ಕರಣ ಘಟಕ ಮತ್ತು ಸೂಕ್ಷ್ಮ ನೀರಾವರಿ ಯೋಜನೆಯಡಿ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಮೈಸೂರು ತಾಲೂಕಿನ ಕಸಬಾ, ವರುಣ, ಇಲವಾಲ ಮತ್ತು ಜಯಪುರ ಹೋಬಳಿಯಲ್ಲಿ ಕೃಷಿ ಯಾಂತ್ರೀಕರಣ ಘಟಕಗಳಾದ ರೋಟಾವೇಟರ್, ಕಲ್ಟಿವೇಟರ್, 5 ಹಲ್ಲಿನ ನೇಗಿಲು, ಪವರ್ ವೀಡರ್, ಬ್ರಷ್ ಕಟರ್, ಮೇವು ಕಟಾವು ಯಂತ್ರ, ಭತ್ತಕಟಾವು ಯಂತ್ರ, ಬಹು ಬೆಳೆ ಒಕ್ಕಣೆ ಯಂತ್ರ ಹಾಗೂ ಕೃಷಿ ಸಂಸ್ಕರಣಾ ಘಟಕಗಳಾದ ರಾಗಿ ಕ್ಲೀನಿಂಗ್ ಮಿಷಿನ್, ಪ್ಲೋರ್ ಮಿಲ್, ಹಲ್ಲರ್, ಶುಗನ್ ಕೇನ್ ಜ್ಯೂಸ್ ಹಾಗೂ ಸೂಕ್ಷ್ಮ ನೀರಾವರಿ ಘಟಕಗಳಾದ ತಂತುಂರು ನೀರೀವರ್ ಘಟಕ ಹನಿ ನೀರಾವರಿ ಘಟಗ ಸ್ಥಾಪನೆಗೆ ಕೃಷಿ ಯಂತ್ರೋಪಕರಣಗಳು ಲಭ್ಯವಿದೆ.
ಬಲ್ಕ್ ಸಿಟಿ ಕಾಂಪೋಸ್ಟ್ ಒಂದು ಟನ್ ಗೆ 1850 ರೂಪಾಯಿ ಅಥವಾ ನೇರವಾಗಿ ಸಂಸ್ಥೆಯವರಿಂದ ಖರೀದಿಸಿದರೆ ಪ್ರತಿ ಟನ್ ಗೆ ರೂಪಾಯಿ 200 ರೂಪಾಯಿ ಪಾವತಿಸಬಹುದು.
ಇದನ್ನೂ ಓದಿ : ಪಿಎಂ ಕಿಸಾನ್ 13ನೇ ಕಂತಿನ ಹಣ ನಿಮಗೇಕೆ ಜಮೆಯಾಗಿಲ್ಲ? ನೀವೇನು ಮಾಡಬೇಕು? ಇಲ್ಲಿದೆ ಮಾಹಿತಿ
ಕೃಷಿ ಯಾಂತ್ರೀಕರಣ ಮತ್ತು ಕೃಷಿ ಸಂಸ್ಕರಣಾ ಘಟಕಗಳಿಗೆ ಸಾಮಾನ್ಯ ವರ್ಗದವರಿಗೆ ಶೇ. 50 ರಷ್ಟು ಸಹಾಯಧನ ನೀಡಲಾಗುವುದು. ಪರಿಶಿಷ್ಟ ಜಾತಿ ಮಾತ್ತು ಪರಿಶಿಷ್ಟ ಪಂಗಡದವರಿಗೆ ಶೇ. 90 ರಷ್ಟು ಸಹಾಯಧನ ನೀಡಲಾಗುವುದು. ಸೂಕ್ಷ್ಮ ನೀರಾವರಿ ಘಟಕಗಳಿಗೆ ಸಾಮಾನ್ಯ ವರ್ಗದವರಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. 90 ರಷ್ಟು ಸಹಾಯಧನ ನೀಡಲಾಗುವುದು.
ಹಾಸನ ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನ
2022-23ನೇ ಸಾಲಿನಲ್ಲಿ ಕೃಷಿ ಇಲಾಖೆಯಿಂದ ಕೃಷಿ ಉತ್ಪನ್ನಗಳ ಸಂಸ್ಕರಣಾ ಯೋಜನೆಯು ಚಾಲ್ತಿಯಲ್ಲಿರುತ್ತದೆ. ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕಗಳಾದ ದಾಲ್ ಪ್ರೊಸೆಸರ್, ಪ್ಲೋರ್ ಮಿಲ್, ಮಿನಿ ರೈಸ್ ಮಿಲ್, ಮಿನಿ ಆಯಿಲ್ ಎಕ್ಸಪೆಲ್ಲರ್, ರಾಗಿ ಕ್ಲೀನಿಂಗ್ ಮಿಷನ್ , ಚಿಲ್ಲಿ ಪೌಡಿಂಗ್ ಮಷಿನ್, ಶಾವಿಗೆ ಮಷಿನ್ ಹಾಗೂ ಇನ್ನಿತರ ಕೃಷಿ ಸಂಸ್ಕರಣಾ ಘಟಕಗಳು ಲಭ್ಯವಿರುತ್ತದೆ.
ಸಾಮಾನ್ಯ ರೈತರಿಗೆ ಶೇ. 50 ರಷ್ಟು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರಷ್ಟು ಸಹಾಯಧನ ನೀಡಲಾಗುವುದು. ಆಸಕ್ತ ಹಾಸನ ಜಿಲ್ಲೆಯ ರೈತರು ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು ಎಂದು ತಿಳಿಸಲಾಗಿದೆ.
ಕೃಷಿ ಯಾಂತ್ರೀಕರಣ ಯೋಜನೆಯಡಿ ಸಹಾಯಧನ ನೀಡಲು ಅರ್ಜಿ ಆಹ್ವಾನ
2022-23ನೇ ಸಾಲಿನ ಕೃಷಿ ಯಾಂತ್ರೀಕರಣ ಸಹಾಯಧನದ ಯೋಜನೆಯಡಿ ಪವರ್ ಟಿಲ್ಲರ್, ಪವರ್ ವೀಡರ್, ರೋಟರಿ ಟಿಲ್ಲರ್, ಕಳೆ ಕೊಚ್ಚುವ ಮಿಷನ್, ಡೀಸೆಲ್ ಮೋಟರ್, 5 ಹಲ್ಲಿನ ನೇಗಿಲು, 9 ಹಲ್ಲಿನ ನೇಗಿಲು, ಕಲ್ಟಿವೇಟರ್, ಲೆವೆಲ್ಲರ್ ಹಾಗೂ ಇತರೆ ಯಂತ್ರಗಳನ್ನು ಸಹಾಯಧನದಲ್ಲಿ ವಿತರಣೆ ಮಾಡಲಾಗುವುದು.
ಸಾಮಾನ್ಯ ವರ್ಗದವರಿಗೆ ಶೇ. 50 ರಷ್ಟು ಸಹಾಯಧನವಿದ್ದು, ಆಸಕ್ತ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ರೈತರು ಸಮೀಪದರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಆಸಕ್ತ ರೈತರು ಪಹಣಿ, ಆಧಾರ್ ಕಾರ್ಡ್ ಸಲ್ಲಿಸಬೇಕು. ಇದರೊಂದಿಗೆ ಬ್ಯಾಂಕ್ ಪಾಸ್ ಬುಗ್ ಝರಾಕ್ಸ್ ಪ್ರತಿ ಸಲ್ಲಿಸಬೇಕು. ಒಂದು ಭಾವ ಚಿತ್ರ ಇರಬೇಕು ಹಾಗೂ 20 ರೂಪಾಯಿಯ ಛಾಪಾ ಕಾಗದ ಸಲ್ಲಿಸಬೇಕು.
ಟ್ರ್ಯಾಕ್ಟರ್ ಚಾಲಿತ ಉಪಕರಣಗಳಿಗೆ ಟ್ರ್ಯಾಕ್ಟರ್ ಆರ್.ಸಿಯ ಪ್ರತಿ ಒಳಗೊಂಡಂತೆ ಅರ್ಜಿ ಸಲ್ಲಿಸಲು ಈ ಮೂಲಕ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು.