ನಿಮ್ಮೂರಿನಲ್ಲಿ ಯಾರಿಗೆ Pension ಬರುತ್ತಿದೆ? ಇಲ್ಲೇ ಚೆಕ್ ಮಾಡಿ

Written by Ramlinganna

Published on:

under pension scheme whose name is there ವೃದ್ಯಾಪ್ಯ ವೇತನ, ವಿಧವಾ ವೇತನ ಪಡೆಯುವವರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರ್ಪಡೆ ಮಾಡಲಾಗಿದೆಯೋ ಇಲ್ಲ ವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು,  ತಮ್ಮ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ನಿಮ್ಮೂರಿನಲ್ಲಿ ಯಾರ್ಯಾರು ವೃದ್ಯಾಪ್ಯ ವೇತನ, ವಿಧವ ವೇತನ, ಅಂಗವಿಕಲರ ವೇತನ ಪಡೆಯುತಿದ್ದಾರೆಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ವೃದ್ಯಾಪ್ಯ ವೇತನ, ವಿಧವ ವೇತನ, ಅಂಗವಿಕಲರ ವೇತನ ಪಡೆಯುವವರ ಪಟ್ಟಿಯಲ್ಲಿ  ನಿಿಿಿ ಹೆಸರಿದೆಯೇ? ಚೆಕ್ ಮಾಡಿ

ವೃದ್ಯಾಪ್ಯವೇತನ , ವಿಧವಾ ವೇತನ, ಅಂಗವಿಕಲರ ವೇತನ ನಿಮ್ಮೂರಿನಲ್ಲಿಯ ರ್ಯಾರ್ಯಾರು ಪಡೆಯುತ್ತಿದ್ದಾರೆಂಬುದನ್ನು ಚೆಕ್ ಮಾಡಲು ಈ

https://mahitikanaja.karnataka.gov.in/Pension/PensionData?ServiceId=1045&Type=TABLE&DepartmentId=1011

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಅಲ್ಲಿ ನೀವು ಗ್ರಾಮೀಣ ಪ್ರದೇಶದವರಾಗಿದ್ದರೆ ಗ್ರಾಮೀಣ ಹಾಗೂ ನಗರ ಪ್ರದೇಶದವರಾಗಿದ್ದರೆ ನಗ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಜಿಲ್ಲೆ ಆಯ್ಕೆಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.  ಇದಾದ ಮೇಲೆ ಹೋಬಳಿ ಆಯ್ಕೆ ಮಾಡಿಕೊಂಡು ನಿಮ್ಮ ಗ್ರಾಮ ಆಯ್ಕೆಮಾಡಿಕೊಳ್ಳಬೇಕು. ನಂತರ ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮೂರಿನಲ್ಲಿ ಯಾರ್ಯಾರು ಪಿಂಚಣಿ ಪಡೆಯುತ್ತಿದ್ದಾರೆ ಎಂಬ ಪಟ್ಟಿ ತೆರೆದುಕೊಳ್ಳುತ್ತದೆ.

under pension scheme whose name is there ವೃದ್ಯಾಪ್ಯ ವೇತನಕ್ಕೆ ಯಾರು ಅರ್ಹರು

60 ವರ್ಷ  ದಾಟಿದವರು ಇನ್ನೂ ಮುಂದೆ ವೃದ್ಯಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಬೇಕಿಲ್ಲ. ಸ್ವಯಂ ಸರ್ಕಾರವು ಫಲಾನುಭವಿಗಳಿಗೆ ಗುರುತಿಸಿ ಮನೆಗೆ ಪಿಂಚಣಿ ಕಳುಹಿಸುತ್ತದೆ.  ಹೌದು, ಆಧಾರ್ ಕಾರ್ಡ್ ನಲ್ಲಿ ನಮೂದಾಗಿರುವ ವಯಸ್ಸಿನ ಆಧಾರದಲ್ಲಿ 60 ವರ್ಷ  ಮೀರುತ್ತಿದ್ದಂತೆಯೇ ಫಲಾನುಭವಿಗಳನ್ನು ಸ್ವಯಂಚಾಲಿತವಾಗಿ ಗುರುತಿಸುವ ವ್ಯವಸ್ಥೆಯನ್ನು ಸರ್ಕಾರದ ಮಾಡಿದೆ.

ಈವರೆಗೆ ವೃದ್ದಾಪ್ಯ ವೇತನಕ್ಕಾಗಿ ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೇ ಕಾಯಬೇಕಿತ್ತು.ಇನ್ನೂ ಮುಂದೆ ಅದಕ್ಕೆ ಅವಕಾಶವಿಲ್ಲ. ಬಿಪಿಎಲ್ ಪಡಿತರ ಚೀಟಿಯನ್ನು ಆಧಾರ್ ಗೆ ಜೋಡಿಸುವದರಿಂದ ಬಿಪಿಎಲ್ ಕುಟುಂಬಗಳ ಪೂರ್ಣ ದತ್ತಾಂಶ ಇಲಾಖೆಯಲ್ಲಿದೆ. ಪ್ರತಿ ವ್ಯಕ್ತಿಯ ಜನ್ಮ ದಿನಾಂಕದ ಅನ್ವಯ 60 ವರ್ಷ  ವಯಸ್ಸು ತುಂಬಿದ ತಕ್ಷಣವೇ ಅವರು ವೃದ್ದಾಪ್ಯ ವೇತನಕ್ಕೆ ಅರ್ಹರಾಗುತ್ತಾರೆ.

ಇದನ್ನೂ ಓದಿ : ನಿಮ್ಮ ಯಾವ ಸರ್ವೆ ನಂಬರ್ ಮೇಲೆ ಎಷ್ಟು ಸಾಲವಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

60 ವರ್ಷ ತುಂಬಿದ ವಯೋವೃದ್ಧರು ನಿರ್ಧಿಷ್ಟ ದಿನಾಂಕದಂದು ನಾಡ ಕಚೇರಿಗೆ ಬಂದು ಫೋಟ ತೆಗೆಸಿಕೊಂಡು ಸಹಿ ಹಾಕಲು ಸೂಚಿಸಲಾಗುತ್ತದೆ. ಫೋಟೋ ಮತ್ತು ಸಹಿ ಸರ್ವರ್ ಗೆ ಅಪ್ಲೋಡ್ ಮಾಡಲಾಗುತ್ತದೆ.ಈ ಪ್ರಕ್ರಿಯೆ ಮುಗಿದ ಬಳಿಕ ಅವರ ಖಾತೆಗೆ ಹಣ ಜಮೆಯಾಗುತ್ತದೆ.

ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ವಯೋ ವೃದ್ಧರಿಗೆ 65 ವರ್ಷಗಳಾಗಿರಬೇಕು. ದುಡಿಯಲು ಅಸಮರ್ಥರಾಗಿರಬೇಕು. ವಯಸಸ್ಸಿನ ಬಗ್ಗೆ ದಾಖಲೆ ಸರ್ಕಾರಿ ವೈದ್ಯಾಧಿಕಾರಿಗಳಿಂದ ದೃಢೀಕೃತ ನಕಲು ಹೊಂದಿರಬೇಕು. ಇತ್ತೀಚಿನ ಭಾವಚಿತ್ರ ಇರಬೇಕು.

ಸರ್ಕಾರದ ವತಿಯಿಂದ ವೃದ್ದಾಪ್ಯ ವೇತನ, ವಿಧವ ವೇತನ, ಅಂಗವಿಕಲರ ವೇತನ ನೀಡಲಾಗುವದು. ಅಂಚೆ ಕಚೇರಿಗಳ ಮೂಲಕ ಕೊಡುವ ವ್ಯವಸ್ಥೆ ರದ್ದುಮಾಡಿ ನೇರವಾಗಿ ಖಾತೆಗಳಿಗೆ ಹಣ ಸಂದಾಯವಾಗಲಿದೆ.  ಪ್ರತಿ ತಿಂಗಳ 5ನೇ ತಾರಿಖಿನೊಳಗೆ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು.

ಪಿಂಚಣಿ ಪಟ್ಟಿಯಲ್ಲಿರುವ ಫಲಾನುಭವಿಗಳು ಎಷ್ಟು ಪಿಂಚಣಿ ಪಡೆಯುತ್ತಿದ್ದಾರೆಂಬುಬನ್ನು ಸಹ ಚೆಕ್ ಮಾಡಬಹುದು.

ಪಿಂಚಣಿ ಸಹಾಯವಾಣಿ (pension helpline Number)

ಪಿಂಚಣಿಗೆ ಸಂಬಂಧಿಸಿದಂತೆ ಪಿಂಚಣಿಗೆ ಅರ್ಹರಾದವರು ಉಚಿತ ಸಹಾಯವಾಣಿಗೆ ಕರೆ ಮಾಡಬಹುದು. ಹೌದು, ಫಲಾನುಭವಿಗಳು ಮನೆಯಲ್ಲಿಯೇ ಕುಳಿತು ಪಿಂಚಣಿ ಸಹಾಯವಾಣಿ ಸಂಖ್ಯೆ 155245 ಗೆ ಕರೆ ಮಾಡಿ ಪಿಂಚಣಿ ಕುರಿತಂತೆ ಮಾಹಿತಿ ಪಡೆಯಬಹುದು.

Leave a Comment