ತೀರ್ಥಯಾತ್ರೆಗೆ ಹೋಗಲು 17 ಸಾವಿರ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ

Written by Ramlinganna

Published on:

Tour Package subsidy : ಧಾರ್ಮಿಕ ಹಾಗೂ ಪುಣ್ಯ ಕ್ಷೇತ್ರಗಳಿಗೆ ತೆರಳುವ ಯಾತ್ರಾರ್ಥಿಗಳಿಗೆ ಧಾರ್ಮಿಕ ದತ್ತಿ ಇಲಾಖೆ ಯೋಜನೆಯ ವತಿಯಿಂದ 17500 ರೂಪಾಯಿಯವರೆಗೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಇಂತಹ ಮಾಹಿತಿ ಪಡೆಯಿರಿ

ಹೌದು, ಧಾರ್ಮಿಕ ಹಾಗೂ ಪುಣ್ಯ ಕ್ಷೇತ್ರಗಳಿಗೆ ತೆರಳುವವರಿಗೆ ರಾಜ್ಯ ಸರ್ಕಾರ ಹೊಸ ವರ್ಷಕ್ಕಾಗಿ ಮೂರು ಪ್ಯಾಕೇಜ್ ಗಳನ್ನು ಘೋಷಣೆ ಮಾಡಿ ವಿಶೇಷ ಸಬ್ಸಿಡಿ ಘೋಷಣೆ ಮಾಡಿದೆ.

ಮೊದಲ ಬಾರಿ ದಕ್ಷಿಣ ಕ್ಷೇತ್ರಗಳ ಯಾತ್ರಾ, ದ್ವಾರಕಾ ಯಾತ್ರಾ, ಪುರಿ ಜಗನ್ನಾಥ್ ದರ್ಶನಕ್ಕೆ ಸಹಾಯಧನ ಘೋಷಿಸಿದೆ.

ಈ ಮೂಲಕ ಧಾರ್ಮಿಕ ದತ್ತಿ ಇಲಾಖೆಯಿಂದ ಪುಣ್ಯ ಕ್ಷೇತ್ರಗಳ ದರ್ಶನ ಭಾಗ್ಯದ ಅವಕಾಶ ಕಲ್ಪಿಸಿದೆಯಲ್ಲದೆ, ಸಬ್ಸಿಡಿಯನ್ನೂ ಹೆಚ್ಚಿಸಿ ಘೋಷಣೆ ಮಾಡಿದೆ.

Tour Package subsidy  ದಕ್ಷಿಣ ಕ್ಷೇತ್ರಗಳ ಯಾತ್ರೆ

ರಾಮೇಶ್ವರ-ಕನ್ಯಾಕುಮಾರಿ-ಮಧುರೈ, ತಿರುವನಂತಪುರಂ ಇದು ಒಟ್ಟು ಆರು ದಿನಗಳ ತೀರ್ಥಯಾತ್ರೆ ಪ್ಯಾಕೇಜ್ ಆಗಿದೆ.ಅದಕ್ಕಾಗಿ 25 ಸಾವಿರ ರೂಪಾಯಿ ವೆಚ್ಚಆಗಲಿದೆ. ಇದಕ್ಕೆ  ಸರ್ಕಾರ 10 ಸಾವಿರ ರೂಪಾಯಿ ಸಬ್ಸಿಡಿ ನೀಡಲಿದೆ.

ವೈದ್ಯಕೀಯ ವೆಚ್ಚ ಸೇರಿದಂತೆ ಇತರೆ ವೆಚ್ಚ ಸೇರಿದಂತೆ 5000 ರೂಪಾಯಿ ಸಹಾಯಧನ ಸೇರಿ ಒಟ್ಟು 15 ಸಾವಿರ ರೂಪಾಯಿ ಹಣವನ್ನುಸರ್ಕಾರ ನೀಡಲಿದೆ. ಇನ್ನೂ ಯಾತ್ರಿಗಳು 10 ಸಾವಿರ ರೂಪಾಯಿ ಮಾತ್ರ ಪಾವತಿಸಬೇಕಾಗುತ್ತದೆ. ಉಳಿದ 15 ಸಾವಿರ ರೂಪಾಯಿ ಹಣವನ್ನು ಮಾತ್ರ ಯಾತ್ರಾರ್ಥಿಗಳು ನೀಡಬೇಕಾಗುತ್ತದೆ.

ಪ್ರಯಾಣಿಕರು ಪ್ರಯಾಣ ಮಾಡುವಾಗ ರೈಲಿನಲ್ಲಿಯೇ ಉತ್ತಮ ಆಹಾರ ತಯಾರಿಸಿ ನೀಡಲಾಗುತ್ತದೆ. ಈ ಪ್ಯಾಕೇಜ್ ನಲ್ಲಿ 3 ಟೈರ್ ಎಸಿ ರೈಲಿನಲ್ಲಿ ಪ್ರಯಾಣ, ಊಟ, ವಸತಿ, ಸ್ಥಳೀಯ ಸಾರಿಗೆ ಮತ್ತು ದರ್ಶನ ವ್ಯವಸ್ಥೆ ಇರುತ್ತದೆ. ಯಾತ್ರಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ರೈಲಿನಲ್ಲಿ ವೈದ್ಯಕೀಯ ಸೇವೆಯ ವ್ಯವಸ್ಥೆ ಮಾಡಲಾಗುತ್ತದೆ.

ಇದನ್ನೂ ಓದಿ ಇಲ್ಲಿ ಆಧಾರ್ ಸೀಡ್ ಮಾಡಿದರೆ ಮಾತ್ರ ನಿಮಗೆ ಸಬ್ಸಿಡಿ ಹಣ ಜಮೆ

ದಕ್ಷಿಣ ಕ್ಷೇತ್ರಗಳ ಯಾತ್ರಾ ರೈಲು ಹತ್ತುವ ಹಾಗೂ ಇಳಿಯುವ ಸ್ಥಳಗಳನ್ನು ಇಲ್ಲಿ ನೀಡಲಾಗಿದೆ. ಈ ರೈಲು ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ತುಮಕೂರು, ಬೆಂಗಳೂರು ಸರ್. ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣ ಮೂಲಕ ಸಾಗಲಿದೆ. ಈ ರೈಲು 2025ರ ಜನವರಿ 25 ರಂದು ಹೊರಡಲಿದ್ದು ಜನವರಿ 30ಕ್ಕೆ ಹಿಂದಿರುಗಲಿದೆ.

Tour Package subsidy ಪುರಿ ಜಗನ್ನಾಥ  ಯಾತ್ರೆ

ಇದಕ್ಕೂ 32,500 ರೂಪಾಯಿ ನಿಗದಿಪಡಿಸಿದ್ದು, ಸರ್ಕಾರ17500 ರೂಪಾಯಿ ಹಣ ನೀಡಲಿದೆ. ಉಳಿದ 15 ಸಾವಿರ ರೂಪಾಯಿ ಹಣವನ್ನು ಮಾತ್ರ ಯಾತ್ರಾರ್ಥಿಗಳು ನೀಡಬೇಕಾಗುತ್ತದೆ.

ಪುರಿ ಜಗನ್ನಾಥ ದರ್ಶನ ಹಾಗೂ ದ್ವಾರಕ ಯಾತ್ರಾ ರೈಲು ಬೆಂಗಳೂರು ಸರ್.ಎಂ. ವಿಶ್ವವೇಶ್ವರಯ್ಯ ರೈಲು ನಿಲ್ದಾಣ, ತುಮಕೂರು, ಅರಸಿಕೆರೆ, ಬೀರುರು, ದಾವಣೆಗೆರೆ, ಹಾವೇರಿ, ಬೆಳಗಾವಿ ಮೂಲಕ ಸಾಗಲಿದೆ. ದ್ವಾರಕ ಯಾತ್ರಾ ರೈಲು ಜನವರಿ 6 ರಂದು ಹೊರಡಲಿದ್ದು, ಜನವರಿ 13ಕ್ಕೆ ಹಿಂದಿರುಗಲಿದೆ.

ಪುರಿ ಜಗನ್ನಾಥ ದರ್ಶನಕ್ಕೆ ಹೊರಡುವ ರೈಲು ಫೆಬ್ರವರಿ 3 ರಂದು ಹೊರಡಲಿದ್ದು, ಮತ್ತೆ ಫೆಬ್ರವರಿ 10ಕ್ಕೆ ಹಿಂದಿರುಗಲಿದೆ. ಅಷ್ಟೇ ಅಲ್ಲದೆ ಈ ವರ್ಷ 1200 ಅರ್ಚಕರು ಹಾಗೂ1200 ಅರ್ಚಕ ಕುಟುಂಬದ ಒಬ್ಬ ಸದಸ್ಯರು ಸೇರಿ 2400 ಜನರನ್ನು ಉಚಿತವಾಗಿ ಯಾತ್ರೆಗೆ ಕಳುಹಿಸಲಾಗುತ್ತದೆ.

 ಟಿಕೆಟ್ ಬುಕಿಂಗ್ ಇನ್ನಿತರ ಮಾಹಿತಿ ಬೇಕೆ?

ಯಾತ್ರಾರ್ಥಿಗಳು ಟಿಕೆಟ್ ಬುಕಿಂಗ್ ಹಾಗೂ ಇನ್ನಿತರ ಮಾಹಿತಿಗಾಗಿ 9003140710, 8595931292, 9731641611,8595931293 ಅಥವಾ 8595931291 ಗೆ ಸಂಪರ್ಕಿಸಲು ಕೋರಲಾಗಿದೆ.

ಇದನ್ನೂ ಓದಿ : ರೈತರೇಕೆ ಜಮೀನಿನ ಪೋಡಿ ಮಾಡಿಸಬೇಕು? ಮಾಹಿತಿ ಇಲ್ಲಿದೆ

Leave a Comment