Today Mini job fair ಇಂದು ಮಿನಿ ಉದ್ಯೋಗ ಮೇಳ

Written by Ramlinganna

Published on:

Today Mini job fair : ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಡಿಪ್ಲೋಮಾ ಐಟಿಐ ಪಾಸಾದವರಿಗೆ  ಉದ್ಯೋಗ ಒದಗಿಸುವುದಕ್ಕಾಗಿ ನಿರುದ್ಯೋಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ ಫೆಬ್ರವರಿ 7 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಜೋಯಾಲುಕ್ಕಾಸ್‌ದಲ್ಲಿ ಸೇಲ್ಸ್ ಟ್ರೆನಿ ಹುದ್ದೆಗೆ ವಯೋಮಿತಿ 18 ರಿಂದ 26 ವರ್ಷದೊಳಗಿರಬೇಕು. ಸೇಲ್ಸ್ ಎಕ್ಸಿಕ್ಯೊಟಿವ್ ಹುದ್ದೆಗೆ ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು. ರಿಸೆಪ್ಷನಿಸ್ಟ್  (ಮಹಿಳೆ) ಹುದ್ದೆಗೆ ವಯೋಮಿತಿ 18 ರಿಂದ 26 ವರ್ಷದೊಳಗಿರಬೇಕು. ಡಿಪ್ಲೋಮಾ / ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು.

Today Mini job fair ಯಾವ ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನ

ಎಸ್.ಆರ್.ವಿ. ಇಲೆಕ್ಟಾçನಿಸ್‌ದಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆಗೆ ಐಟಿಐ / ಡಿಪ್ಲೋಮಾ (ಕೋಪಾ/ ಇಲೆಕ್ಟಿçಕಲ್) ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 25 ವರ್ಷದೊಳಗಿರಬೇಕು.

ಫ್ರೀಚಾರ್ಜ್ದಲ್ಲಿ ಫೀಲ್ಡ್ ಆಫೀಸರ್ ಹುದ್ದೆಗೆ ಪಿಯುಸಿ ಹಾಗೂ ಟೀಮ್ ಲೀಡರ್ ಹುದ್ದೆಗೆ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು.

ಪರ್ಸೊಕ್ಲೆಲಿ ಇಂಡಿಯಾ ಲೀ. ದಲ್ಲಿ ಎ.ಎಲ್.ಓ., ಕ್ಯೂಸಿ, ಕ್ಯೂಎ, ಟೀಮ್ ಲೀಡರ್, ಮೆಶೀನ್ ಆಪರೇಟರ್ ಹುದ್ದೆಗೆ ಎಸ್.ಎಸ್.ಎಲ್.ಸಿ/ಪಿಯುಸಿ/ಐಟಿಐ/ ಡಿಪ್ಲೋಮಾ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ ೧೮ ರಿಂದ ೨೭ ವರ್ಷದೊಳಗಿರಬೇಕು.

ಜೂಮ್‌ಟೇಕ್ ಐಜಿ ದಲ್ಲಿ ನೆಟ್‌ವರ್ಕಿಂಗ್ ವೇಲ್ಡರ್/ ಡಿಇಒ/ ಸಿಎಸ್‌ಟಿ/ ಟೆಲಿಕಾಲರ್/ಎಚ್.ಆರ್‌ಎಕ್ಸಿಕ್ಯೊಟಿವ್/ ಡೆಸ್ಕ್ಟಾಪ್ ಇಂಜಿನಿಯರ್/ ಸೈಟ್ ಇಂಜಿನಿಯಿರ್ ಇ.ಟಿಸಿ ಹುದ್ದೆಗೆ ಎಸ್.ಎಸ್.ಎಲ್.ಸಿ./ಪಿಯುಸಿ/ ಯಾವುದೇ ಪದವಿ, ಐಟಿಐ/ ಡಿಪ್ಲೋಮಾ/ ಬಿ.ಎಮ್ (ಫಾರ್ಮಾ) ಬಿ.ಇ/ ಬಿ.ಟೇಕ್. ಪಾಸಾಗಿರಬೇಕು. ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು.

ಲಾಹೋಟಿ ಮೋಟರ‍್ಸ್ದಲ್ಲಿ ಸೇಲ್ಸ್ / ಸರ್ವಿಸ್/ ಬಾಡಿಶಾಪ್ / ಇನ್ಸೂರನ್ಸ್, ಫೈನಾನ್ಸ್, ಅಕೌಂಟ್ಸ್ ಹುದ್ದೆಗೆ ಬಿ.ಎ, ಬಿ.ಕಾಂ, ಬಿ.ಎಸ್.ಸಿ, ಬಿ.ಬಿ.ಎ, ಬಿ.ಬಿ.ಎಮ್ ಯಾವುದೇ ಪಾಸಾಗಿರಬೇಕು. ವಯೋಮಿತಿ ೧೮ ರಿಂದ ೩೫ ವರ್ಷದೊಳಗಿರಬೇಕು. ಸೇಲ್ಸ್ / ಸರ್ವಿಸ್/ ಬಾಡಿಶಾಪ್ ಹುದ್ದೆಗೆ ಬಿ.ಎ, ಬಿ.ಕಾಂ, ಬಿ.ಎಸ್.ಸಿ, ಬಿ.ಬಿ.ಎ, ಬಿ.ಬಿ.ಎಮ್ ಯಾವುದೇ ಪಾಸಾಗಿರಬೇಕು. ವಯೋಮಿತಿ 18 ರಿಂದ 40 ವರ್ಷದೊಳಗಿರಬೇಕು.

ಯುನಿವರ್ಸಲ್ ಸೊಂಪೊ ಜಿಐಸಿ ದಲ್ಲಿ ಸೇಲ್ಸ್ ಮ್ಯಾನೇಜರ್ ಹುದ್ದೆಗೆ ಯಾವುದೇ ಪದವಿ, ಇನ್ಸೂರೆನ್ಸ್ ಸಲಹೆಗಾರ ಹುದ್ದೆಗೆ ಎಸ್.ಎಸ್.ಎಲ್.ಸಿ/ಪಿಯುಸಿ ಐಟಿಐ / ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು.

ಇದನ್ನೂ ಓದಿ : ನಿಮ್ಮ ಜಮೀನಿನ ಅಕ್ಕಪಕ್ಕ ಯಾರಿಗೆಷ್ಟು ಎಕರೆಯಿದೆ? ಇಲ್ಲೆ ಚೆಕ್ ಮಾಡಿ

ಝೋಮ್ಯಾಟೋದಲ್ಲಿ ಡೆಲಿವರಿ ಎಕ್ಸಿಕ್ಯೊಟಿವ್ ಹುದ್ದೆಗೆ ಎಸ್.ಎಸ್.ಎಲ್.ಸಿ/ಪಿಯುಸಿ/ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 45 ವರ್ಷದೊಳಗಿರಬೇಕು.

ಮಹೀಂದ್ರದಲ್ಲಿ ಟೆಕ್ನಿಶಿಯನ್, ಸರ್ವಿರ್ಸ್ ಅಡ್ವಜರ್, ಪಾಟ್ಸ್ ಇನ್ ಚಾರ್ಜ್ ಹುದ್ದೆಗೆ ಐಟಿಐ, ಡಿಪ್ಲೋಮಾ, ಬಿಇ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು.

ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಝೆರಾಕ್ಸ್, ರೆಸ್ಯೂಮ್(ಬಯೋಡೆÀಟಾ) ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ದೊಂದಿಗೆ ಮೇಲ್ಕಂಡ ದಿನದಂದು ನಡೆಯುವ ಮಿನಿ ಉದ್ಯೋಗಮೇಳದಲ್ಲ್ಲಿ ಭಾಗವಹಿಸಬೇಕು. ನೇರ ಸಂದರ್ಶನದಲ್ಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-274846 ಹಾಗೂ ಮೊಬೈಲ್ ಸಂಖ್ಯೆ 9620095270 ಗೆ ಸಂಪರ್ಕಿಸಲು ಕೋರಲಾಗಿದೆ. ಈಗಲೇ ಕರೆ ಮಾಡಿ ಮೇಳದಲ್ಲಿ ಭಾಗವಹಿಸಕೊಳ್ಳಲು ಕೋಲಾಗಿದೆ.

Leave a Comment