This year good rain alert : ಭಾರತದಲ್ಲಿ ಪ್ರಸ್ತುತ ಮುಂಗಾರು ಋತುವಿನಲ್ಲಿ ಸಾಮಾನ್ಯಕ್ಕಿಂತ ತುಸು ಹೆಚ್ಚಾಗಿ ಮಳೆ ಬೀಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಭೀಕರ ಬರಗಾಲದಿಂದ ಕಂಗೆಟ್ಟಿರುವ ದೇಶದ ಜನರಿಗೆ ಹವಾಮಾನ ಇಲಾಖೆ ಸಂತಸದಸುದ್ದಿ ನೀಡಿದೆ. ಈ ಸಮಯದಲ್ಲಿ ಕರ್ನಾಟಕ ಒಳಗೊಂಡಂತೆ ನೈಋತ್ಯ ಭಾರತದಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂಬುದಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹವಾಮಾನ ಇಲಾಖೆ ಮುಖ್ಯಸ್ಥ ಮೃತ್ಯುಂಜಯಮ ಮಹಾಪಾತ್ರ ಈ ವಿಷಯ ತಿಳಿಸಿದರು.
ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಮುಂಗಾರು ಋತುವಿನಲ್ಲಿ ಈ ಬಾರಿ ಶೇ.106 ರಷ್ಟು ಮಳೆ ಬೀಳುವ ಸಂಭವವಿದೆ. ಅಂದರೆ ಒಟ್ಟಾರೆ ಸರಾಸರಿಯನ್ನು ತೆಗೆದುಕೊಂಡಾಗ ಸುಮಾರು 87 ಸೆಂ.ಮೀ.ಮಳೆ ಬೀಳುವ ಸಂಭವವಿದೆ ಎಂದು ಹೇಳಿದ್ದಾರೆ.
ಈ ಬಾರಿ ಕಡಿಮೆ ಅವಧಿಯಲ್ಲಿ ಬೃಹತ್ ಪ್ರಮಾಣದ ಮಳೆಯಾಗುವ ಸಂಭವವಿದ್ದು, ಅಧಕ್ಕೆ ತಕ್ಕುದಾದ ತಯಾರಿಗಳ್ನು ಮಾಡಿಕೊಳ್ಳಬೇಕಾದ ಅಗತ್ಯವಿದೆ. ಜೊತೆಗೆ ಪೆಸಿಫಿಕ್ ಸಾಗರದಲ್ಲಿ ಮಾರುತಗಳು, ಹಿಮಾಲಯದಲ್ಲಿ ಹಿಮಗಾಳಿಯೂ ಸಾಧಾರಣ ಮಟ್ಟದಲ್ಲಿ ಬೀಸುತ್ತಿರುವುದು ಭಾರತೀಯ ಮುಂಗಾರು ಋತುವಿಗೆ ಪೂರಕವಾಗಿ ಪರಣಮಿಸಿದೆ. ಜೊತೆಗೆ ಮುಂಗಾರು ಋತುವಿನಲ್ಲಿ ಆಗಸ್ಟ್ ವೇಳೆಗೆ ಲಾ-ನಿನಾ ಹವಾಗುಣ ನಿರ್ಮಾಣವಾಗಿ ಕೃಷಿಗೆ ಪೂರಕವಾಗಿ ಮುಂಗಾರು ತಂಪೆರೆಯಲಿದೆ ಎಂದು ಪ್ರಕಟಿಸಿದ್ದಾರೆ.
ಕಳದೆ ಬಾರಿ ಮುಂಗಾರು ನಾಲ್ಕು ತಿಂಗಳ ಸರಾಸರಿಯನ್ನು ತೆಗೆದುಕೊಂಡಾಗ 82 ಸೆಂ.ಮೀ ಮಳೆಯಾಗಿ ಸಾಧಾರಣಕ್ಕಿಂತ ಕಡಿಮೆ ಮಳೆಯನ್ನು ದಾಖಲಿಸಿತ್ತು.
ಭಾರತದಲ್ಲಿ ಕೃಷಿ ಚಟುವಟಿಕೆಯಲ್ಲಿ ಹೆಚ್ಚಿನ ಪಾಲು ಮುಂಗಾರಿನ ಮೇಲೆ ಅವಲಂಬಿತವಾಗಿದ್ದು, ಕೃಷಿ ವಲಯದಿಂದ ಭಾರತದ ಜಿಡಿಪಿಗೆ ಶೇ. 14 ರಷ್ಟು ಕೊಡುಗೆಯಿದೆ.
ಇದನ್ನೂ ಓದಿ : ಮುಟೇಶನ್ ಪ್ರಕಾರ ನಿಮಗೆಷ್ಟು ಎಕರೆ ಜಮೀನಿದೆ? ಇಲ್ಲೇ ಚೆಕ್ ಮಾಡಿ
ಇದರ ಜೊತೆಗೆ ಮತ್ತಷ್ಟು ಕರಾರುವಕ್ಕಾದ ಮುಂಗಾರು ವರದಿಯನ್ನು ಮೇ ಮಧ್ಯಭಾಗದಲ್ಲಿ ನೀಡಲಾಗುವುದು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಶೇ. 90 ರಿಂದ ಶೇ. 95 ರಷ್ಟು ಮಳೆ ಬೀಳುವುವಾದರೆ ಅದನ್ನು ಸಾಮಾನ್ಯಕ್ಕಿಂತ ಕಡಿಮೆ ಎಂದು ವಿಂಗಡಿಸಲಾಗುತ್ತದೆ. ಶೇ. 95 ರಿಂದ 105 ರಷ್ಟುಮಳೆ ಬೀಳುವುದನ್ನು ಸಾಮಾನ್ಯ ಎಂದು ಪರಿಗಣಿಸಲಾಗಿದ್ದು. ಶೇ. 105 ರಿಂದ ಶೇ. 110 ರಷ್ಟುಮಳೆ ಬಿದ್ದಲ್ಲಿ ಅದನ್ನು ಸಾಮಾನ್ಯಕ್ಕಿಂತ ಅಧಿಕ ಎಂದು ಪರಿಗಣಿಸಲಾಗುತ್ತದೆ. ಶೇ. 110 ಕ್ಕಿಂತ ಅಧಿಕ ಮಳೆ ಬಿದ್ದಲ್ಲಿ ಅದನ್ನು ಅಧಿಕ ಎಂದು ವಿಂಗಡಿಸಲಾಗುತ್ತದೆ.
ಕಡಿಮೆ ಅವಧಿಯಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕ ಸೇರಿದಂತೆ ನೈಋತ್ಯ ಭಾರತದಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ. ದೇಶದಲ್ಲಿ ಒಟ್ಟಾರೆ ಮುಂಗಾರು ಋತುವಿನಲ್ಲಿ 87 ಸೆಂ.ಮೀ. ಮಳೆ ಸಂಭವ
ಪೆಸಿಪಿಕ್ ಮಹಾಸಾಗರದಲ್ಲಿ ಲಾ-ನಿನಾ ಪ್ರಭಾವದಿಂದ ಈ ಸಲ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಆದರೆ ಕಡಿಮೆ ಅವಧಿಯಲ್ಲಿ ಭಾರಿ ಮಳೆ ಸುರಿಯುವ ಕುರಿತು ತಜ್ಞರ ಎಚ್ಚರಿಕೆ ನೀಡಿದ್ದಾರೆ. ಮೇ ಮಧ್ಯ ಭಾಗದಲ್ಲಿ ಕರಾರುವಕ್ಕಾದ ಮುಂಗಾರು ವರದಿ ನೀಡುವ ಭರವಸೆ ನೀಡಲಾಗಿದೆ.
This year good rain alert ನಿಮ್ಮೂರಿನಲ್ಲಿ ಮಳೆಯಾಗುವುದೇ? ಈ 92433 45433 ನಂಬರಿಗೆ ಕರೆ ಮಾಡಿ
ನಿಮ್ಮೂರಿನಲ್ಲಿ ಮಳೆಯಾಗುವುದೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ವರುಣಮಿತ್ರ ನಂಬರ್ 92433 45433 ಗೆ ಕರೆ ಮಾಡಿ ತಿಳಿದುಕೊಳ್ಳಬಹುದು. ಹೌದು, ವರುಣಮಿತ್ರ ಸಹಾಯವಾಣಿ ನಂಬರಿಗೆ ಕರೆ ಮಾಡಿದರೆ ಸಾಕು ನಿಮ್ಮೂರಿನ ಸುತ್ತಮುತ್ತ ಮಳೆ ಯಾವಾಗ ಬರುತ್ತದೆ? ಮಳೆ ಆಗಲಿದೆಯೋ ಇಲ್ಲವೋ ಎಂಬ ಮಾಹಿತಿ ಕೇವಲ ಒಂದೇ ನಿಮಿಷದಲ್ಲಿ ತಿಳಿದುಕೊಳ್ಳಬಹುದು.
ಪ್ರಸಕ್ತ ವರ್ಷ ರಾಜ್ಯದಲ್ಲಿಯೂ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದರಿಂದ ರೈತರಲ್ಲಿ ಹರ್ಷ ಉಂಟಾಗಿದೆ. ಆದರೆ ಮುಂಗಾರಿನಲ್ಲಿಯೇ ಮಳೆಯಾಗುವುದೋ ಇಲ್ಲವೋ ಎಂಬುದು ಗೊತ್ತಾಗಲಿದೆ.