ಎರೆಹುಳು ಘಟಕ ಸ್ಥಾಪನೆಗೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ

Written by Ramlinganna

Published on:

Subsidy for setting up earthworm unit : ಎರೆಹುಳು ಘಟಕ ಸ್ಥಾಪನೆಗೆ ಸಬ್ಸಿಡಿ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಹೌದು, ತೋಟಗಾರಿಕೆ ಇಲಾಖೆಯಿಂದ 2025-26 ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಸಾಮರ್ಥ್ಯವುಳ್ಳ ರಾಜ್ಯಗಳಲ್ಲಿ ಎಣ್ಣೆ ತಾಳೆಬೆಳೆ ಅಭಿವೃದ್ಧಿ ಯೋಜನೆಯಗಳಡಿ ಹೊಸ ಪ್ರದೇಶ ವಿಸ್ತರಣೆ ಅಂತರ ಬೆಳೆ ಬೆಸಾಯ, ಕಟಾವು ಏಣಿ ಹಾಗೂ ಎರೆಹುಳು ಘಟಕಗಳ ಸಹಾಯಧನ ಪಡೆಯಲು ಆಸಕ್ತಿಯುಳ್ಳ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ (ಜಿ.ಪಂ.) ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.

ಆಸಕ್ತಿಯುಳ್ಳ ರೈತರು ತಮ್ಮ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿ ಈ ಯೋಜನೆಗಳ ಸದುಪಯೋಗ ಪಡೆಯಬೇಕು.

Subsidy for setting up earthworm unit ಯಾರಿಗೆ ಸಂಪರ್ಕಿಸಬೇಕು?

ರೈತ ಬಾಂಧವರು ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ ಮತ್ತು ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಲು  ಹಾಗೂ ಅಫಜಲಪೂರ ಮೊಬೈಲ್ ಸಂಖ್ಯೆ-9743518608, ಚಿಂಚೋಳಿ-9611250501, ಚಿತ್ತಾಪೂರ-7760969088, ಕಲಬುರಗಿ- 9900108196, ಜೇವರ್ಗಿ-9986516251 ಹಾಗೂ ಸೇಡಂ-9972147778 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

ಪ್ರಧಾನ ಆವಾಸ್ ಯೋಜನೆಯಡಿ ಮನೆ ಕಟ್ಟಲು ಸಹಾಯಧನ ನೀಡಲು ಅರ್ಜಿ ಆಹ್ವಾನ

Pradhan mantra avas yojana : ಪ್ರಧಾನ ಮಂತ್ರಿ ಆವಾಸ ಯೋಜನೆ ನಗರ 2..0 ಯೋಜನೆ ಅಡಿಯಲ್ಲಿ 4 ಯೋಜನೆಯನ್ನು ಜಾರಿಗೊಳಿಸಿದ್ದು, ಅರ್ಹ ಹಾಗೂ ಆಸಕ್ತಿ ಇರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಕೆಳಗಿನಂತೆ ದಾಖಲೆಗಳೊಂದಿಗೆ ಆನ್‌ಲೈನ್ ಸೇವಾ ಕೇಂದ್ರದಲ್ಲಿ ಅಥವಾ ತಾವೇ ಖುದ್ದಾಗಿ

https://pmay-urban.gov.in/

ವೆಬ್ ಸೈಟ್‌ನಲ್ಲಿ ಅರ್ಜಿ ಹಾಗು ದಾಖಲೆ ಸಲ್ಲಿಸಲು ಜುಲೈ 15 ರಂದು ಕೊನೆಯ ದಿನಾಂಕವಾಗಿರುತ್ತದೆ. ಎಂದು   ಜಿಲ್ಲೆಯ ಜಿಲ್ಲಾ ನಗರಾಭಿವೃದ್ದಿ ಕೋಶ   ಯೋಜನಾ ನಿರ್ದೇಶಕರು ಕಲಬುರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿಯನ್ನು ಮಹಿಳಾ ಫಲಾನುಭವಿ ಹೆಸರಿನಲ್ಲಿ ಅರ್ಜಿ ಸಲ್ಲಿಸುವುದು, ಫಲಾನುಭವಿ ನೇತೃತ್ವದ ನಿರ್ಮಾಣ ವಸತಿ ಯೋಜನೆ (ಬಿಎಲ್‌ಸಿ), ಪಾಲುದಾರಿಕೆಯಲ್ಲಿ ಕೈಗೆಟಕುವ ಬಹುಮಹಡಿ ವಸತಿ ಯೋಜನೆ (ಎ.ಹೆಚ್.ಪಿ) ಕೈಗೆಟಕುವ ಬಾಡಿಗೆ ವಸತಿ ಯೋಜನೆ (ಎ.ಆರ್.ಹೆಚ್) , ಬಡ್ಡಿ ಸಹಾಯಧನ (ಸಬ್ಸೀಡಿ) ವಸತಿ ಯೋಜನೆ (ಐ.ಎಸ್.ಎಸ್.)

Pradhan mantra avas yojana  ಅರ್ಜಿದಾರರ ಅರ್ಹತೆ

ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳಿಂದ/ ಇಲಾಖೆಗಳಿಂದ  ಯಾವುದೇ ಸಹಾಯಧನ ಪಡೆದು ಮನೆ ನಿರ್ಮಿಸಿಕೊಂಡಿರಬಾರದು. ವಿವಾಹಿತ ಮಹಿಳೆ , ಏಕ ಮಹಿಳಾ ಒಡೆತನ ಗೃಹಣೆ, ಪುರುಷರಾಗಿದ್ದಲ್ಲಿ ಮಾಜಿಯೋಧರು, ವಿಧುರರು, ಅಂಗವಿಕಲರು, ವಿಚ್ಫೇದಿತರು ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ ಇಂದು ನಿಮ್ಮೂರಲ್ಲಿ ಮಳೆಯಾಗುತ್ತೋ ಇಲ್ಲೋ? ಈ ನಂಬರಿಗೆ ಕರೆ ಮಾಡಿ ಮಾಹಿತಿ ಪಡೆಯಿರಿ

ನಿವೇಶನ/ಕಚ್ಚಾನೆಯ ಮೂಲ ದಾಖಲಾತಿಗಳ ಪರಿಶೀಲನೆ ವೇಳೆಯಲ್ಲಿ ಹಾಜರ ಪಡಿಸಬೇಕು ಹಾಗೂ ಜಿ.ಪಿ.ಎಸ್. ಆಧಾರಿತ ಫೋಟೋ ನೀಡುವುದು. ಮನೆ ನಿರ್ಮಾಣಕ್ಕೆ ನಿಗದಿ ಪಡಿಸಿದ ನಿವೇಶನ/ಕಚ್ಚಾಮನೆ ಸ್ಥಳವನ್ನು ಯಾವುದೇ ಕಾರಣಕ್ಕೂ ಬದಲಾಯಿಸುವಂತಿಲ್ಲ.

ಅರ್ಜಿದಾರರ ಆಧಾರಕಾರ್ಡ್ ಪ್ರತಿ ಕುಟುಂಬ ಸದಸ್ಯರ ಆಧರಕಾರ್ಡ್ ಅರ್ಜಿದಾರರ ಇತ್ತೀಚಿನ 3 ಭಾವ ಚಿತ್ರ (ಫೋಟೋ ) ಸಲ್ಲಿಸುವುದು, ನಿವೇಶನ/ಕಚ್ಚಾ ಮನೆಗೆ ಸಂಬಂಧಸಿದ  ಇತ್ತೀಚಿನ ಚಾಲ್ತಿ ಉತ್ತಾರ ಪ್ರತಿ ಹಾಗೂ ಜಿ.ಪಿ.ಎಸ್. ಆಧಾರಿತ ಪೋಟೋ ನೀಡುವುದು. ಚಾಲ್ತಿಯಲ್ಲಿರುವ ಆದಾಯು ಮತ್ತು ಜಾತಿ ಪ್ರಮಾಣ ಪತ್ರ ಮತ್ತು ಪಡಿತರ ಚೀಟಿ ಹಾಗೂ ಮತದಾನ ಚೀಟಿ ನೀಡುವುದು. ಅರ್ಜಿದಾರರ (ರಾಷ್ಟ್ರೀಕೃತ ಬ್ಯಾಂಕ್ ಖಾತೆ ರಾಷ್ಟ್ರೀಕೃತ ಬ್ಯಾಂಕ್) ನೀಡುವುದು. ಅರ್ಜಿದಾರರ ಹೆಸರಿನಲ್ಲಿ ಅಥವಾ ಪತಿ.ಪತ್ನಿ ಅವಿವಾಹಿತ ಮಗ/ಮಗಳು, ಹೆಸರಿನಲ್ಲಿ ಸ್ವಂತ ಮನೆ ಹೊಂದಿಲ್ಲ ಎಂಬುದರ ಬಗ್ಗೆ 100 ಛಾಪಾ ಪತ್ರದಲ್ಲಿ ತಂಟೆ-ವ ತಕಾರರು ಇಲ್ಲದಿರುವ ಬಗ್ಗೆ ಒಪ್ಪಿಗೆ ಪತ್ರವನ್ನು ನೀಡುವುದು.

ಕಡ್ಡಾಯವಾಗಿ ಅರ್ಜಿದಾರರು ತಮ್ಮ ಮೊಬೈಲ್ ಸಂಖ್ಯೆ ಆಧಾರ ನಂಬರ ಬ್ಯಾಂಕ್ ಖಾತೆಗೆ ಜೋಡಣಗೆ ಯಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ  ಕಲಬುರಗಿ ಜಿಲ್ಲೆಯ ಜಿಲ್ಲಾ ನಗರಾಭಿವೃದ್ದಿ ಕೋಶ   ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment