Atal Bhu jala ಯೋಜನೆಯಡಿಯಲ್ಲಿ ರೈತರಿಗೆ ಪಾಲಿಹೌಸ್ ನಿರ್ಮಾಣಕ್ಕೆ ಸಹಾಯದನ ನೀಡಲು ವಿವಿಧ ಜಿಲ್ಲೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೌದು, 2023-24ನೇ ಸಾಲಿಗೆ ಅಟಲ್ ಭೂ ಜಲ ಯೋಜನೆಯನ್ನು ವಿಶ್ವಬ್ಯಾಂಕ್ ನೆರವಿನೊಂದಿಗೆ ಆರಂಭಿಸಲಾಗಿದೆ.ಈ ಯೋಜನೆಯಡಿ ರೈತರು ಸಬ್ಸಿಡಿಯಲ್ಲಿ ಸಹಾಯಧನ ನೀಡಲು ತೋಟಗಾರಿಕೆ ಇಲಾಖೆಯ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಧೀನಕ್ಕೆ ಸೇರಿದ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲೂಕುಗಳಲ್ಲಿ ಆಯ್ಕೆಯಾದ 24 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ದೇವನಹಳ್ಳಿ ತಾಲೂಕಿನ ಗೊಡ್ಲುಮುದ್ದೇನಹಳ್ಳಿ, ಯಲಿಯೂರು, ಕೊಯರಾ ಗ್ರಾಮ ಪಂಚಾಯತಗಳಲ್ಲಿ, ನೆಲಮಂಗಲ ತಾಲೂಕಿನ ಶ್ರೀನಿವಾಸಪುರ, ಯಂಟಿಗಾನಹಳ್ಳಿ, ಗ್ರಾಮ ಪಂಚಾಯತಗಳಲ್ಲಿ, ಹೊಸಕೋಟೆ ತಾಲೂಕಿನ ಅನುಗೊಂಡನಹಳ್ಳಿ, ದೊಡ್ಡಗಟ್ಟಗನಬ್ಬೆ, ದೊಡ್ಡ ಅರಳಗೆರೆ, ಗಣಗಲೂರು, ಜಟಿಗೇನಹಳ್ಳಿ, ನಂದಗುಡಿ, ಸೂಲಿಬೆಲೆ, ಗ್ರಾಮ ಪಂಚಾಯತಗಳಲ್ಲಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಅರುಳು ಮಲ್ಲಿಗೆ, ಆರೂಡಿ, ಚನ್ನಾದೇವಿ ಅಗ್ರಹಾರ, ಹಾಡೋನಹಳ್ಳಿ, ಹೊನ್ನಾವರ, ಹೊಸಹಳ್ಳಿ, ಹುಲಿಕುಂಟೆ, ಕನಸವಾಡಿ, ಕೆಸ್ತೂರು, ಕೊನ್ನಘಟ್ಟ, ಮಾಜರ ಹೊಸಹಳ್ಳಿ, ರಾಜಘಟ್ಟ ಗ್ರಾಮ ಪಂಚಾಯಗಳ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತದೆ.
ಹಸಿರುಮನೆ ನಿರ್ಮಾಣಕ್ಕೆ ಸಹಾಯಧನ ಪಡೆಯಲು ಆಸಕ್ತಿಯಿರುವ ರೈತರು ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಫಲಾನುಭವಿಯ ಭಾವಚಿತ್ರ ಹಾಗೂ ಪ್ರಸಕ್ತ ಸಾಲಿನ ಪಹಣಿಯೊಂದಿಗೆ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಲ್ಲಾ ಪಂಚಾಯತ)ರವರ ಕಚೇರಿಗೆ ಜೂನ್ 17 ರೊಳಗಾಗಿ ಸಲ್ಲಿಸಬೇಕು.
ಇದನ್ನೂ ಓದಿ : ನೀವು ನಿಂತಿರುವ ಜಮೀನಿನ ಮಾಲಿಕರು ಯಾರಿದ್ದಾರೆ? ಒಂದೇ ನಿಮಿಷದಲ್ಲಿ ಮೊಬೈಲ್ ನಲ್ಲೇ ಚೆಕ್ ಮಾಡಿ
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕು ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.
Atal Bhu jala ಅಟಲ್ ಭೂ ಜಲ ಯೋಜನೆಯಡಿ ಅರ್ಜಿ ಆಹ್ವಾನ
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿಯೂ ಅಟಲ್ ಭೂ ಜಲ ಯೋಜನೆಯಡಿಯಲ್ಲಿ ಪಾಲಿ ಹೌಸ್ ನಿರ್ಮಾಣಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
2023-24ನೇ ಸಾಲಿನ ತೋಟಗಾರಿಕೆ ಇಲಾಖೆಯ ವತಿಯಿಂದ ಅಟಲ್ ಭೂ ಜಲ ಯೋಜನೆಯಡಿ ಗ್ರಾಮ ಪಂಚಾಯತ್ ವಾರು ಗುರಿಗಳನ್ನು ನಿಗದಿಪಡಿಸಿ ಪಾಲಿಹೌಸ್ ನಿರ್ಮಾಣಸಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಅಟಲ್ ಭೂ ಜಲ ಯೋಜನೆಯ ಸಂರಕ್ಷಿತ ಬೇಸಾಯ (ಪಾಲಿಹೌಸ್) ಚಟುವಟಿಕೆಗಳನ್ನು ಬೀಚಗಾನಹಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಲು ಜೂನ್ 30 ರೊಳಗೆ ಸಹಾಯಕ ತೋಟಗಾರಿಕೆ ಇಲಾಖೆಯ ಕಚೇರಿಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಹಿರಿಯ ತೋಟಗಾರಿಕೆ ನಿರ್ದೇಶಕರ ಮೊಬೈಲ್ ನಂಬರ್ 8147464177 ಗೆ ಸಂಪರ್ಕಿಸಲು ಕೋರಲಾಗಿದೆ.
ತೆಂಗಿನ ಸಸಿಗಳ ಮಾರಾಟಕ್ಕೆ ಅರ್ಜಿ ಆಹ್ವಾನ
ಮೈಸೂರು ತಾಲೂಕು ಹೆಬ್ಬಾಳ ತೋಟಗಾರಿಕೆ ಕ್ಷೇತ್ರದಲ್ಲಿ ತೆಂಗಿನ ಸಸಿಗಳು ಮಾರಾಟಕ್ಕೆ ಲಭ್ಯವಿದೆ. ಪ್ರತಿ ಗಿಡಕ್ಕೆ 75 ರೂಪಾಯಿ ದರ ನಿಗದಿಯಾಗಿರುತ್ತದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್ ಕಾರ್ಡ್ ಹೊಂದಿರುವ ರೈತರಿಗೆ ಒಂದು ಎಕರೆಗೆ ತೋಟ ಪ್ರದೇಶ ಅಭಿವೃದ್ಧಿ ಪಡಿಸಲು ಕೂಲಿ ವೆಚ್ಚ 17243 ನೀಡಲು ಅವಕಾಶವಿದೆ.
ಆಸಕ್ತ ರೈತರು ಇದರ ಸದುಪಯೋಗಪಡಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಹೆಬ್ಬಾಳ ತೋಟಗಾರಿಕೆ ಸಹಾಯಕ ಮೊಬೈಲ್ ನಂಬರ್ 87470 85225, ಕಸಬಾ ಹೋಬಳಿಯ ಸಹಾಯಕ ಕೋಟಗಾರಿಕೆ ಅಧಿಕಾರಿ ಮೊಬೈಲ್ ನಂಬರ್9901387284, ವರುಣ ಹೋಬಳಿ ಸಹಾಯಕ ತೋಟಗಾರಿಕೆ ಅಧಿಕಾರಿ ಮೊಬೈಲ್ ನಂಬರ್ 8197392697, ಜಯಪುರ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಮೊಬೈಲ್ ನಂಬರ್ 96867 66291 ಹಾಗೂ ಇಲವಾಲ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಮೊಬೈಲ್ ನಂಬರ್ 89046 73607 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತ್ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.