Subsidy for construction of personal toilet: ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ ಸಬ್ಸಿಡಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಹೌದು, ವೈಯಕ್ತಿಕವಾಗಿ ತಮ್ಮ ಮನೆ ಹತ್ತಿರ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಎಲ್ಲಿ ಸಲ್ಲಿಸಬೇಕು? ಯಾರು ಯಾರು ಅರ್ಜಿ ಸಲ್ಲಿಸಬೇಕು ಎಂಬುದರ ಮಾಹಿತಿ ಇಲ್ಲಿದೆ.
ಯಾರು ಯಾರು ಅರ್ಜಿ ಸಲ್ಲಿಸಬೇಕು
ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣ ಪಂಚಾಯತಿಯ ಕಚೇರಿಯಿಂದ 2024-25ನೇ ಸಾಲಿಗೆ ಸ್ವಚ್ಛ ಭಾರತ ಮಿಷನ್ (ನಗರ) 2.0 ಅಡಿಯಲ್ಲಿ ಯಡ್ರಾಮಿ ಪಟ್ಟಣದ ವ್ಯಾಪ್ತಿಯಲ್ಲಿ 32 ವೈಯಕ್ತಿಕ ಶೌಚಾಲಯ ಅನುಮೋದನೆಗೊಂಡಿದ್ದು, ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ ಸಹಾಯಧನ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಯಡ್ರಾಮಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
Subsidy for construction of personal toilet ಅರ್ಜಿ ಎಲ್ಲಿ ಸಲ್ಲಿಸಬೇಕು?
ಅರ್ಹ ಫಲಾನುಭವಿಗಳು ನಿಗದಿತ ಅರ್ಜಿ ನಮೂನೆಯನ್ನು ಯಡ್ರಾಮಿ ಪಟ್ಟಣ ಪಂಚಾಯತ್ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಅವಶ್ಯಕ ದಾಖಲೆಗಳಾದ ಆಧಾರ ಕಾರ್ಡ್, ಅರ್ಜಿದಾರರ ಭಾವಚಿತ್ರ, ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಬ್ಯಾಂಕ್ ಪಾಸ್‌ಬುಕ್, ಖಾತಾ ನಕಲು ದಾಖಲಾತಿ ಹಾಗೂ ಆಸ್ತಿಕರ ಪಾವತಿಸಿದ ರಸೀದಿಗಳನ್ನು ಲಗತ್ತಿಸಿ 2025ರ ಮಾರ್ಚ್ 7ರೊಳಗಾಗಿ ಯಡ್ರಾಮಿ ಪಟ್ಟಣ ಪಂಚಾಯತ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಇದನ್ನೂ ಓದಿ : ನಿಮ್ಮ ಜಮೀನು ಹಿಂದೆ ಯಾರ ಯಾರ ಹೆಸರಿನಲ್ಲಿತ್ತು? ಇಲ್ಲೇ ಚೆಕ್ ಮಾಡಿ
ಮೊದಲು ಅರ್ಜಿ ಸಲ್ಲಿಸಿ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಸುಳ್ಳು/ತಪ್ಪು ದಾಖಲಾತಿಗಳನ್ನು ಸಲ್ಲಿಸಿದ್ದಲ್ಲಿ ಯಾವುದೇ ಮುನ್ಸೂಚನೆ ನೀಡದೇ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಫೆಬ್ರವರಿ 19 ರಂದು ಮಿನಿ ಉದ್ಯೋಗ ಮೇಳ
ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಕಲಬುರಗಿ ನಗರದ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ 2025ರ ಫೆಬ್ರವರಿ 19 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಮಿನಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಶ್ರೀ ಸಾಯಿ ಅರ್ಥಮೂವರ್ಸ್ದಲ್ಲಿ ಸರ್ವೀಸ್ ಇಂಜಿನಿಯರ್ ಹುದ್ದೆಗೆ ಐಟಿಐ/ಡಿಪ್ಲೋಮಾ, ಸೇಲ್ಸ್ ಎಕ್ಸಿಕ್ಯೊಟಿವ್ ಹುದ್ದೆಗೆ ಎಮ್.ಬಿ.ಎ., ಸಿ.ಆರ್.ಎಮ್/ಸಿ.ಆರ್.ಇ. ಹುದ್ದೆಗೆ ಯಾವುದೇ ಪದವಿ, ಮಾರ್ಕೆಟಿಂಗ್ ಮ್ಯಾನೇಜರ್ ಹುದ್ದೆಗೆ ಎಮ್.ಬಿ.ಎ/ ಯಾವುದೇ ಪದವಿ, ಪಾರ್ಟ್ಸ್ ಮಾರ್ಕೆಟಿಂಗ್ ಹುದ್ದೆಗೆ ಡಿಪ್ಲೋಮಾ/ ಯಾವುದೇ ಪದವಿ ಹಾಗೂ ಹೆಲ್ಪರ್ ಹುದ್ದೆಗೆ ಎಸ್.ಎಸ್.ಎಲ್.ಸಿ/ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 21 ರಿಂದ 30 ವರ್ಷದೊಳಗಿರಬೇಕು.
ಅಫಜಲಪೂರ ತಾಲೂಕಿನ ಚೌಡಾಪುರದ ಪೂಜ್ಯ ಶ್ರೀವಿ.ಎಲ್.ಭಟ್ಟ ಆಂಗ್ಲಮಾಧ್ಯಮ ಶಾಲೆಯಲ್ಲಿ ಶಿಕ್ಷಕಿ (ಎಲ್.ಕೆ.ಜಿ/ಯು.ಕೆ.ಜಿ) ಹುದ್ದೆಗೆ ಎನ್.ಟಿ.ಸಿ./ಬಿ.ಎಸ್.ಸಿ. ಪಾಸಾಗಿರಬೇಕು. ಕನ್ನಡ/ ಆಂಗ್ಲ/ಹಿಂದಿ ಶಿಕ್ಷಕರ ಹುದ್ದೆಗೆ ಬಿ.ಎ., ಬಿ.ಎಡ್, ಎಮ್.ಎ. ವಿದ್ಯಾರ್ಹತೆ ಹೊಂದಿರಬೇಕು. ಪ್ರಾಥಮಿಕ ಗಣಿತ/ವಿಜ್ಞಾನ ಶಿಕ್ಷಕರ ಹುದ್ದೆಗೆ ಬಿ.ಎಸ್.ಸಿ. ಬಿ.ಎಡ್. ಪಾಸಾಗಿರಬೇಕು. ಕಂಪ್ಯೂಟರ ಶಿಕ್ಷಕ ಹುದ್ದೆಗೆ ಬಿ.ಸಿ.ಎ. ಪಾಸಾಗಿರಬೇಕು. ಮಹಿಳಾ ದೈಹಿಕ ಶಿಕ್ಷಕಿ ಹುದ್ದೆಗೆ ಬಿ.ಪಿ.ಎಡ್. ಪಾಸಾಗಿರಬೇಕು. ಕನ್ನಡ/ ಆಂಗ ್ಲ/ಹಿಂದಿ/ ಸಮಾಜ ವಿಜ್ಞಾನ ಶಿಕ್ಷಕ ಹುದ್ದೆಗೆ ಎಮ್.ಎ. ಬಿ.ಎಡ್. ಪಾಸಾಗಿರಬೇಕು. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ/ಗಣಿತ ಶಿಕ್ಷಕ ಹುದ್ದೆಗೆ ಎಮ್.ಎಸ್.ಸಿ., ಬಿ.ಎಡ್. ವಿದ್ಯಾರ್ಹತೆ ಹೊಂದಿರಬೇಕು. ಕಂಪ್ಯೂಟರ ಶಿಕ್ಷಕ ಹುದ್ದೆಗೆ ಬಿ.ಸಿ.ಎ. ಪಾಸಾಗಿರಬೇಕು. ಪುರುಷ ದೈಹಿಕ ಶಿಕ್ಷಕ ಹುದ್ದೆಗೆ ಎಮ್.ಎಸ್.ಸಿ., ಬಿ.ಎಡ್. ಪಾಸಾಗಿರಬೇಕು. ವಯೋಮಿತಿ 21 ರಿಂದ 35 ವರ್ಷದೊಳಗಿರಬೇಕು.