SSLC Model Answers released: ಎಸ್ಎಸ್ಎಲ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗಿಲ್ಲಿದೆ ಸಂತಸದ ಸುದ್ದಿ. ಮೊಬೈಲ್ ನಲ್ಲೇ ಉತ್ತರ ಮಾದರಿ ಪತ್ರಿಕೆ ಡೌನ್ಲೋಡ್ ಮಾಡಬಹುದು.
ಹೌದು, ಪ್ರಸಕ್ತ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಕನ್ನಡ ಪರೀಕ್ಷೆಯಲ್ಲಿ ಯಾವ ಯಾವ ಪಾಠದಿಂದ ಒಂದು ವಾಕ್ಯದಲ್ಲಿ ಉತ್ತರಿಸಿ, ಮೂರು ನಾಲ್ಕು ವಾಕ್ಯದಲ್ಲಿ ಉತ್ತರಿಸಿರಿ, ಸಂದರ್ಭ, ಎಂಟು ಹತ್ತು ವಾಕ್ಯದಲ್ಲಿ ಉತ್ತರಿಸಿ, ಪದ್ಯ ಯಾವ ಪಾಠದಿಂದ ಬರುತ್ತದೆ ಎಂಬುದು ಸೇರಿದಂತೆ ಪ್ರಶ್ನೆ ಪತ್ರಿಕೆ ಮತ್ತು ಕೀ ಉತ್ತರಗಳ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಹ ಇಲ್ಲಿ ನೀಡಲಾಗಿದೆ. ಈ ಆಧಾರದ ಮೇಲೆ ನೀವು ಅಭ್ಯಾಸ ಮಾಡಿ ಹೆಚ್ಚಿನ ಅಂಕಗಳನ್ನು ಗಳಿಸಬಹುದು.
ಪತ್ರ ಲೇಖನ ಹೇಗೆ ಬರೆಯಬೇಕು. ಗಾದೆ ಮಾತು ಹೇಗೆ ಬರೆಯಬೇಕು, ಪ್ರಬಂಧ ಹೇಗೆ ಬರೆಯಬೇಕು ಹಾಗೂ ಪದ್ಯದ ಸಾರಾಂಶ ಹೇಗೆ ಬರೆಯಬೇಕು ಎಂಬುದರ ಕುರಿತು ಉತ್ತರದೊಂದಿಗೆ ಎಲ್ಲಾ ಮಾದರಿ ಪತ್ರಿಕೆಯನ್ನು ಇಲ್ಲಿ ನೀಡಲಾಗಿದೆ.
SSLC Model Answers released ಮೂರು ಮಾದರಿ ಪ್ರಶ್ನೋತ್ತರಗಳು
ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿರುವ ಪ್ರಿಪೇಟರಿ ಪರೀಕ್ಷೆಯ ಪ್ರಶ್ನೋತ್ತರಗಳೊಂದಿಗೆ ಮಾದರಿ ಉತ್ತರ ಪತ್ರಿಕೆಗಳನ್ನು ಸಹ ಇಲ್ಲಿ ನೀಡಲಾಗಿದೆ.
ಮಾದರಿ ಉತ್ತರ ನೋಡಲು ಈ
https://kseeb.karnataka.gov.in/KOSMIG/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ 2025-26ನೇ ಸಾಲಿನ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ಪೇಜ್ ತೆರೆದುಕೊಳ್ಳುತ್ತದೆ. ಅದರ ಕೆಳಗಡೆ ನಿಮಗೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಂಬಂಧಿಸಿದ ಕೆಲವು ಮಾಹಿತಿಗಳು ಕಾಣಿಸುತ್ತವೆ.
7ನೇ ಕ್ರಮಾಂಕದಲ್ಲಿ 2025-26ರ ಎಸ್ಎಸ್ಎಲ್ಸಿ ಪರೀಕ್ಷೆಗೆ ಮಾದರಿ ಪ್ರಶ್ನೆ ಪತ್ರಿಕೆಗಳು ಹಾಗೂ ಮಾದರಿ ಉತ್ತರಗಳು ಕಾಣಿಸುತ್ತದೆ. ಅದರ ಎದುರಿರುವ click here ಮೇಲೆ ಕ್ಲಿಕ್ ಮಾಡಬೇಕು. ಆಂಗ್ಲ ಮಾದ್ಯಮದವರಿಗೆ Second language ಮುಂದುಗಡೆ ಮೂರು ಮಾದರಿ ಪ್ರಶ್ನೋತ್ತರಗಳು ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಮಾದರಿ ಪ್ರಶ್ನೋತ್ತರ ಪತ್ರಿಕೆ ತೆರೆದುಕೊಳ್ಳುತ್ತದೆ. ಅದನ್ನು ನೀವು ಡೌನ್ಲೋಡ್ ಮಾಡಿಕೊಂಡು ಅಭ್ಯಾಸ ಮಾಡಿ ಹೆಚ್ಚಿನ ಅಂಕ ಪಡೆಯಬಹುದು.
ಇದೇ ರೀತಿ ನೀವು ಇತರ ವಿಶಯ ಆಯ್ಕೆ ಮಾಡಿಕೊಂಡು ಮಾದರಿ ಪ್ರಶ್ನೋತ್ತರಗಳನ್ನು ನೋಡಬಹುದು.
ಒಂದು ವಾಕ್ಯದಲ್ಲಿ ಯಾವ ಯಾವ ಪಾಠದಿಂದ ಪ್ರಶ್ನೋತ್ತರಗಳು ಬರುತ್ತವೆ ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.
ಒಂದು ವಾಕ್ಯದಲ್ಲಿ ಉತ್ತರ ಯಾವ ಯಾವ ಪಾಠ ಪದ್ಯದಿಂದ ಪ್ರಶ್ನೆ ಬರುತ್ತವೆ?
ಅಸಿ ಮಸಿ, ಕೃಷಿ, ಗಾನ ಯೋಗಿ ಪಂಡಿತ ಪುಟ್ಟರಾಜಗವಾಯಿ, ಹಕ್ಕಿ ಗೂಡುಗಳ ನಿಗೂಢ ಜಗತ್ತು, ಗಂಗೆಯಲ್ಲಿ ದೀಪಮಾಲೆ, ನನ್ನ ಗೋಪಾಲ, ಸೌಜನ್ಯ, ಸವಿಚೈತ್ರ, ಸದ್ದು ಮಾಡದಿರು, ಮೂಡಲ್ ಕುಣಿಗಲ್ ಕೆರೆ, ವಚನಗಳು ಹಾಗೂ ನಿಟ್ಟೋಟದಲ್ಲಿ ಹಾಯ್ದನು ಬಿಟ್ಟ ಮಂಡೆಯಲ್ಲಿ ಪಾಠದಿಂದ ಒಂದು ವಾಕ್ಯದಲ್ಲಿ ಉತ್ತರಿಸಿ ಪ್ರಶ್ನೆಗಳು ಬರುತ್ತವೆ.
ಯಾವ ಯಾವ ಫಾಠದಿಂದ ಮೂರು ನಾಲ್ಕು ವಾಕ್ಯದಲ್ಲಿ ಪ್ರಶ್ನೆಗಳು ಬರುತ್ತವೆ
ಅಸಿ ಮಸಿ, ಕೃಷಿ, ಹಕ್ಕಿ ಗೂಡುಗಳ ನಿಗೂಢ ಜಗತ್ತು, ಗಂಗೆಯಲ್ಲಿ ದೀಪಮಾಲೆ, ಸೌಜನ್ಯ, ಮೂಡಲ್ ಕುಣಿಗಲ್ ಕೆರೆ, ವಚನಗಳು, ಕಳ್ಳರ ಗುರು ಅಥವಾ ಪಂಪಾತೀರದ ಪುಷ್ಪಗಳು, ಹೊಂಗೆ ಬೇವುಗಳ ಹಾಡು ಅಥವಾ ಕನ್ನಡ ನಾಡು ನುಡಿ ಜನ ಪಾಠದಿಂದ ಮೂರು ನಾಲ್ಕು ವಾಕ್ಯದಲ್ಲಿ ಉತ್ತರಿಸಿರಿ ಪ್ರಶ್ನೆಗಳು ಬರುತ್ತವೆ.
ಯಾವ ಪಾಠದಿಂದ ಸಂದರ್ಭ ಸ್ವಾರಸ್ಯ ಪ್ರಶ್ನೆಗಳು ಬರುತ್ತವೆ.
ಒಣ ಮರದ ಗಿಳಿ, ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ, ಕಾಫೀ ಕಪ್, ನನ್ನ ಗೋಪಾಲ, ಸವಿಚೈತ್ರ, ಸದ್ದು ಮಾಡದಿರು, ನಿಟ್ಟೋಟದಲ್ಲಿ ಹಾಯ್ದನು ಬಿಟ್ಟಮಂಡೆಯಲಿ ಪದ್ಯದಿಂದ ಪ್ರಶ್ನೆಗಳಉ ಬರುತ್ತವೆ.
ಯಾವ ಪಾಠದಿಂದ ಪದ್ಯ ಬರುತ್ತದೆ.?
ಗುರಿ ಹಾಗೂ ಬೋಧಿ ವೃಕ್ಷದ ಹಾಡು ಪದ್ಯದಿಂದ ಪದ್ಯ ಬರುತ್ತದೆ.
ಯಾವ ಪಾಠದಿಂದ ಎಂಟು ಹತ್ತು ವಾಕ್ಯದಲ್ಲಿ ಪ್ರಶ್ನೆ ಬರುತ್ತವೆ
ಬೋಧಿ ವೃಕ್ಷದ ಹಾಡು ಅಥವಾ ಗುರಿ ಪಾಠದಿಂದ ಎಂಟು ಹತ್ತು ವಾಕ್ಯದಲ್ಲಿ ಪ್ರಶ್ನೆಗಳು ಬರುತ್ತವೆ.





