SSLC Blue print check : ಎಸ್ಎಸ್ಎಲ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗಿಲ್ಲಿದೆ. ಸಂತಸದ ಸುದ್ದಿ. ಈಗ ವಿದ್ಯಾರ್ಥಿಗಳಿಗೆ ಯಾವ ಯಾವ ಪಾಠದಿಂದ ಪ್ರಶ್ನೋತ್ತರಗಳು ಬರುತ್ತವೆ ಅಂದರೆ ಯಾವ ಪಾಠದಿಂದ ಒಂದು ಅಂಕಗಳ ಪ್ರಶ್ನೆ ಬರುತ್ತದೆ. ಯಾವ ಪಾಠದಿಂದ ಎರಡು ಅಂಕಗಳ ಪ್ರಶ್ನೆಗಳು ಬರುತ್ತವೆ. ಯಾವ ಪದ್ಯದಿಂದ ಪದ್ಯದ ಸಾರಾಂಶ ಬರುತ್ತದೆ. ಯಾವ ಪಾಠದಿಂದ ಭಾವಾರ್ಥ ಬರುತ್ತದೆ ಯಾವ ಪಾಠದಿಂದ ಎಂಟು ಹತ್ತುಗಳ ಪ್ರಶ್ನೆಗಳು ಬರುತ್ತವೆ ಎಂಬುದನ್ನು ಸರ್ಕಾರವೇ ಬ್ಲೂ ಪ್ರಿಂಟ್ ಬಿಡುಗಡೆ ಮಾಡಿದೆ.
ಹೌದು, ಈ ಬ್ಲೂ ಪ್ರಿಂಟ್ ಆಧಾರದ ಮೇಲೆ ವಿದ್ಯಾರ್ಥಿಗಳು ಅಭ್ಯಾಸ ಮಾಡಿದರೆ ಅತೀ ಹೆಚ್ಚು ಅಂಕಗಳನ್ನು ಪಡೆಯಬಹುದು. ಹಾಗಾದರೆ ಯಾವ ಯಾವ ಪಾಠದಿಂದ ಕನ್ನಡ, ಇಂಗ್ಲೀಷ್, ಹಿಂದಿ, ಸಮಾಜ, ವಿಜ್ಞಾನ, ಗಣಿತ ವಿಷಯದ ಪ್ರಶ್ನೆಗಳು ಬರುತ್ತವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಇದೊರೊಂದಿಗೆ ಉತ್ತರ ಸಹಿತ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಡೌನ್ಲೋಡ್ ಮಾಡುವುದು ಹೇಗೆ ಕಳೆದ ಸಾಲಿನಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳು ಸಹ ಈಗ ಆನ್ಲೈನ್ ನಲ್ಲಿ ಲಭ್ಯವಿದೆ. ಆಸಕ್ತ ವಿದ್ಯಾರ್ಥಿಗಳು ಅವರ ಉತ್ತರ ಪತ್ರಿಕೆಗಳನ್ನು ಡೌನ್ಲೋಡ್ ಮಾಡಿಕೊಂಡು ಯಾವ ರೀತಿ ಉತ್ತರಗಳನ್ನು ಬರೆದಿದ್ದಾರೆ ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.
ಇಂಗ್ಲೀಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಕನ್ನಡ ಯಾವ ಯಾವ ಪಾಠದಿಂದ ಪ್ರಶ್ನೆಗಳು ಬರುತ್ತವೆ.
SSLC Blue print check ಒಂದು ವಾಕ್ಯದಲ್ಲಿ ಉತ್ತರ ಯಾವ ಯಾವ ಪಾಠ ಪದ್ಯದಿಂದ ಪ್ರಶ್ನೆ ಬರುತ್ತವೆ?
ಅಸಿ ಮಸಿ, ಕೃಷಿ, ಗಾನ ಯೋಗಿ ಪಂಡಿತ ಪುಟ್ಟರಾಜಗವಾಯಿ, ಹಕ್ಕಿ ಗೂಡುಗಳ ನಿಗೂಢ ಜಗತ್ತು, ಗಂಗೆಯಲ್ಲಿ ದೀಪಮಾಲೆ, ನನ್ನ ಗೋಪಾಲ, ಸೌಜನ್ಯ, ಸವಿಚೈತ್ರ, ಸದ್ದು ಮಾಡದಿರು, ಮೂಡಲ್ ಕುಣಿಗಲ್ ಕೆರೆ, ವಚನಗಳು ಹಾಗೂ ನಿಟ್ಟೋಟದಲ್ಲಿ ಹಾಯ್ದನು ಬಿಟ್ಟ ಮಂಡೆಯಲ್ಲಿ ಪಾಠದಿಂದ ಒಂದು ವಾಕ್ಯದಲ್ಲಿ ಉತ್ತರಿಸಿ ಪ್ರಶ್ನೆಗಳು ಬರುತ್ತವೆ.
ಯಾವ ಯಾವ ಫಾಠದಿಂದ ಮೂರು ನಾಲ್ಕು ವಾಕ್ಯದಲ್ಲಿ ಪ್ರಶ್ನೆಗಳು ಬರುತ್ತವೆ ?
ಅಸಿ ಮಸಿ, ಕೃಷಿ, ಹಕ್ಕಿ ಗೂಡುಗಳ ನಿಗೂಢ ಜಗತ್ತು, ಗಂಗೆಯಲ್ಲಿ ದೀಪಮಾಲೆ, ಸೌಜನ್ಯ, ಮೂಡಲ್ ಕುಣಿಗಲ್ ಕೆರೆ, ವಚನಗಳು, ಕಳ್ಳರ ಗುರು ಅಥವಾ ಪಂಪಾತೀರದ ಪುಷ್ಪಗಳು, ಹೊಂಗೆ ಬೇವುಗಳ ಹಾಡು ಅಥವಾ ಕನ್ನಡ ನಾಡು ನುಡಿ ಜನ ಪಾಠದಿಂದ ಮೂರು ನಾಲ್ಕು ವಾಕ್ಯದಲ್ಲಿ ಉತ್ತರಿಸಿರಿ ಪ್ರಶ್ನೆಗಳು ಬರುತ್ತವೆ.
ಯಾವ ಪಾಠದಿಂದ ಸಂದರ್ಭ ಸ್ವಾರಸ್ಯ ಪ್ರಶ್ನೆಗಳು ಬರುತ್ತವೆ ?
ಒಣ ಮರದ ಗಿಳಿ, ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ, ಕಾಫೀ ಕಪ್, ನನ್ನ ಗೋಪಾಲ, ಸವಿಚೈತ್ರ, ಸದ್ದು ಮಾಡದಿರು, ನಿಟ್ಟೋಟದಲ್ಲಿ ಹಾಯ್ದನು ಬಿಟ್ಟಮಂಡೆಯಲಿ ಪದ್ಯದಿಂದ ಪ್ರಶ್ನೆಗಳಉ ಬರುತ್ತವೆ.
ಯಾವ ಪಾಠದಿಂದ ಪದ್ಯ ಬರುತ್ತದೆ.?
ಗುರಿ ಹಾಗೂ ಬೋಧಿ ವೃಕ್ಷದ ಹಾಡು ಪದ್ಯದಿಂದ ಪದ್ಯ ಬರುತ್ತದೆ.
ಯಾವ ಪಾಠದಿಂದ ಎಂಟು ಹತ್ತು ವಾಕ್ಯದಲ್ಲಿ ಪ್ರಶ್ನೆ ಬರುತ್ತವೆ ?
ಬೋಧಿ ವೃಕ್ಷದ ಹಾಡು ಅಥವಾ ಗುರಿ ಪಾಠದಿಂದ ಎಂಟು ಹತ್ತು ವಾಕ್ಯದಲ್ಲಿ ಪ್ರಶ್ನೆಗಳು ಬರುತ್ತವೆ.
ಮೂರು ಮಾದರಿ ಪ್ರಶ್ನೋತ್ತರಗಳು
ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿರುವ ಪ್ರಿಪೇಟರಿ ಪರೀಕ್ಷೆಯ ಪ್ರಶ್ನೋತ್ತರಗಳೊಂದಿಗೆ ಮಾದರಿ ಉತ್ತರ ಪತ್ರಿಕೆಗಳನ್ನು ಸಹ ಇಲ್ಲಿ ನೀಡಲಾಗಿದೆ.
ಮಾದರಿ ಉತ್ತರ ನೋಡಲು ಈ
https://kseeb.karnataka.gov.in/KOSMIG/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ 2025-26ನೇ ಸಾಲಿನ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ಪೇಜ್ ತೆರೆದುಕೊಳ್ಳುತ್ತದೆ. ಅದರ ಕೆಳಗಡೆ ನಿಮಗೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಸಂಬಂಧಿಸಿದ ಕೆಲವು ಮಾಹಿತಿಗಳು ಕಾಣಿಸುತ್ತವೆ.
7ನೇ ಕ್ರಮಾಂಕದಲ್ಲಿ 2025-26ರ ಎಸ್ಎಸ್ಎಲ್ಸಿ ಪರೀಕ್ಷೆಗೆ ಮಾದರಿ ಪ್ರಶ್ನೆ ಪತ್ರಿಕೆಗಳು ಹಾಗೂ ಮಾದರಿ ಉತ್ತರಗಳು ಕಾಣಿಸುತ್ತದೆ. ಅದರ ಎದುರಿರುವ click here ಮೇಲೆ ಕ್ಲಿಕ್ ಮಾಡಬೇಕು. ಆಂಗ್ಲ ಮಾದ್ಯಮದವರಿಗೆ Second language ಮುಂದುಗಡೆ ಮೂರು ಮಾದರಿ ಪ್ರಶ್ನೋತ್ತರಗಳು ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಮಾದರಿ ಪ್ರಶ್ನೋತ್ತರ ಪತ್ರಿಕೆ ತೆರೆದುಕೊಳ್ಳುತ್ತದೆ. ಅದನ್ನು ನೀವು ಡೌನ್ಲೋಡ್ ಮಾಡಿಕೊಂಡು ಅಭ್ಯಾಸ ಮಾಡಿ ಹೆಚ್ಚಿನ ಅಂಕ ಪಡೆಯಬಹುದು.
ಇದನ್ನೂ ಓದಿ 243.52 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರ ವಿತರಣೆಗೆ ಚಾಲನೆ
ಇತರ ವಿಶಯಗಳಿಗೆ ಬ್ಲೂ ಪ್ರಿಂಟ್ ಪಡೆಯಬೇಕಾದರೆ ಅಂದರೆ ಯಾವ ಯಾವ ಪಾಠದಿಂದ ಯಾವ ಯಾವ ಪ್ರಶ್ನೆಗಳು ಬರುತ್ತವೆ ಎಂಬುದನ್ನು ಚೆಕ್ ಮಾಡಲು ಈ
https://kseab.karnataka.gov.in/new-page/SSLC%202025-26%20Final%20Examination%20Subject-wise%20Blueprint/kn
ಲಿಂಕ್ ಮೇಲೆ ಕ್ಲಿಕ್ ಮಾಡಿ ಚೆಕ್ ಮಾಡಬಹುದು.





