ರಸಗೊಬ್ಬರಗಳ ಧಾರಣೆ ಎಪ್ರೀಲ್-2021 ರಿಂದ ಏರಿಕೆಯಾಗಿದೆ ಎಂಬ ಕಾರಣಕ್ಕೆ ಮಾರ್ಚ್-2021 ರ ವರೆಗೆ ಹೊಂದಿರುವ ಹಳೆಯ ರಸಗೊಬ್ಬರ ದಾಸ್ತಾನನ್ನು ಪರಿಷ್ಕೃತ ದರದ ಬದಲಾಗಿ ಹಳೆಯ ದರದಲ್ಲಿಯೆ ಮಾರಾಟ ಮಾಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸುಗೂರು ಅವರು ಜಿಲ್ಲೆಯ ಎಲ್ಲಾ ಸಗಟು, ಕಿರುಕುಳ ರಸಗೊಬ್ಬರ ಮಾರಾಟಗಾರರಿಗೆ ಸೂಚಿಸಿದ್ದಾರೆ.

ವಿಶೇಷವಾಗಿ ಚಿಲ್ಲರೆ ಮಾರಾಟಗಾರರು ಪಾಯಿಂಟ್ ಆಫ್ ಸೇಲ್ ಉಪಕರಣದಲ್ಲಿ ಹಳೆಯ ಗೊಬ್ಬರ ದಾಸ್ತಾನನ್ನು ಪರಿಷ್ಕೃತವಲ್ಲದ ದರದಲ್ಲಿ ಮಾರಾಟ ಮಾಡಲು ತಿಳಿಸಿದೆ. ರೈತರಿಗೆ ಈ ದಾಸ್ತಾನನ್ನು ಆದ್ಯತೆ ಮೇಲೆ ಮಾರಾಟ ಮಾಡಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ರಸಗೊಬ್ಬರಗಳ ಮಾರಾಟ ಮಳಿಗೆ ಮುಂದೆ ಗೋಚರವಾಗಿ ಕಾಣುವಂತೆ ದಾಸ್ತಾನು ಮತ್ತು ದರಗಳ ಬೋರ್ಡ್ ಪ್ರದರ್ಶಿಸುವುದು ಕಡ್ಡಾಯ. ಯಾವುದೇ ಸಂದರ್ಭದಲ್ಲಿ ರಸಗೊಬ್ಬರಗಳ ಚೀಲದ ಮೇಲೆ ಮುದ್ರಿತ ಎಂ.ಆರ್.ಪಿ. ದರಗಳಿಗಿಂತ ಹೆಚ್ಚಿನ ದರದಲ್ಲಿ ರೈತರಿಗೆ ಮಾರಾಟ ಮಾಡುವಂತಿಲ್ಲ ಎಂದು ರತೇಂದ್ರನಾಥ ಸುಗೂರು ಅವರು ಮಾರಾಟಗಾರರಿಗೆ ಎಚ್ಚರಿಕೆ ನೀಡಿದ್ದಾರೆ.

ರೈತ ಬಾಂಧವರು ಎಂ.ಆರ್.ಪಿ. ದರದಲ್ಲಿಯೇ (ಚೀಲದ ಮೇಲೆ ಮುದ್ರಿಸಿದಂತೆ) ರಸಗೊಬ್ಬರಗಳನ್ನು ಖರೀದಿಸುವುದು ಮತ್ತು ಖರೀದಿಸಿದಕ್ಕೆ ಅಂಗಡಿಯವರಿAದ ರಸೀದಿ ಪಡೆಯಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ರೈತರಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *