ಪ್ರಾಂಶುಪಾಲ, ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Written by By: janajagran

Updated on:

Recruitment ಶಿಕ್ಷಕರ ಹುದ್ದೆಗಾಗಿ ಕಾಯುತ್ತಿರುವ ಬಿಇಡಿ, ಎಮ್.ಇಡಿ ಮುಗಿಸಿದ ಅಭ್ಯರ್ಥಿಗಳಿಗಿಲ್ಲಿದೆ ಸಂತಸದ ಸುದ್ದಿ. ಬುಡಕಟ್ಟು ಸಂಬಂಧಿ ಸಚಿವಾಲಯವು, ಏಕಲವ್ಯ ಮಾದರಿ ವಸತಿ ಶಾಲೆಗಳ (ಇಎಂಆರ್‌ಎಸ್‌) ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಪ್ರೋಸ್ಟ್‌ ಗ್ರಾಜುಯೇಟ್ ಟೀಚರ್, ಟ್ರೈನ್ಡ್‌ ಗ್ರಾಜುಯೇಟ್ ಟೀಚರ್ ಸೇರಿದಂತೆ ಒಟ್ಟು 3479 ಹುದ್ದೆಗಳ ಭರ್ತಿಗೆ (Recruitment )ಆರ್ಜಿ ಆಹ್ವಾನಿಸಿದೆ.

ಈ ಮೇಲಿನ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು. ಸದರಿ ಹುದ್ದೆಗಳ ಅರ್ಹತೆಗಳು, ವಿದ್ಯಾರ್ಹತೆ, ಇತರೆ ಮಾಹಿತಿಗಳನ್ನು ತಿಳಿದು ಆನ್‌ಲೈನ್‌ ಮೂಲಕ ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು.

ಏಪ್ರೀಲ್ 1 ರಿಂದ  ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಏಪ್ರೀಲ್ 30 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳು  ಜೂನ್ ಮೊದಲ ವಾರದಲ್ಲಿ ನಡೆಯಲಿವೆ. ಇನ್ನೇಕೆ ತಡ ಎಲ್ಲಾ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ನಿಮ್ಮ ಕನಸು ನನಸು ಮಾಡಿಕೊಳ್ಳಿ.

Recruitment ಹುದ್ದೆಗಳ ವಿವರ

ಪ್ರಾಂಶುಪಾಲರು 175
ಉಪಪ್ರಾಂಶುಪಾಲರು 116
ಪಿಜಿಟಿ ಹುದ್ದೆಗಳು : 1244
ಟಿಜಿಟಿ ಹುದ್ದೆಗಳು 1944
ಒಟ್ಟು ಹುದ್ದೆಗಳ ಸಂಖ್ಯೆ 3479

ಈ ಮೇಲಿನ ಹುದ್ದೆಗಳನ್ನು ದೇಶದಲ್ಲಿರುವ ಆಯಾ ರಾಜ್ಯದ  ಏಕಲವ್ಯ ಮಾದರಿ ವಸತಿ ಶಾಲೆಗಳಲ್ಲಿ ಬುಡಕಟ್ಟು ಸಂಬಂಧಿ ಸಚಿವಾಲಯದ ವತಿಯಿಂದ ನೇಮಕ ಮಾಡಲಾಗುತ್ತದೆ.

ವಿದ್ಯಾರ್ಹತೆ:

ಹುದ್ದೆಗಳಿಗೆ ಅನುಗುಣವಾಗಿ ಪಿಯುಸಿ / ಪದವಿ / ಸ್ನಾತಕೋತ್ತರ ಪದವಿ / ಬಿ.ಇಡಿ / ಎಂ.ಇಡಿ ಉತ್ತೀರ್ಣರಾಗಿರಬೇಕು. ವಯೋಮಾನ, ವೇತನ ಸೇರಿದಂತೆ ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್‌ ವಿಳಾಸ ಗೆ ಭೇಟಿ ನೀಡಬಹುದು.

ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ 1000 ರೂಪಾಯಿ, ಓಬಿಸಿ ಅಭ್ಯರ್ಥಿಗಳಿಗೆ 800 ಹಾಗೂ ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ 600 ರೂಪಾಯಿ ಇದೆ.

ಇದನ್ನೂ ಓದಿ ಮೊಬೈಲ್ ನಲ್ಲೇ ಜಮೀನಿನ ಸ್ಕೆಚ್ ನಕ್ಷೆ ಹೀಗೆ ಪಡೆಯಿರಿ

ಈ ಲಿಂಕ್ ಮೇಲೆ ಕ್ಲೀಕ್ ಮಾಡಿದರೆ ನೇರವಾಗಿ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನ್ಯೂ ರೆಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಭರ್ತಿ ಮಾಡಬಹುದು.

ಸೆಪ್ಟೆಂಬರ್ 8 ರಂದು ನೇರ ಸಂದರ್ಶನ

ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ ಸೆಪ್ಟೆಂಬರ್ 8 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲಬುರಗಿ ಮುತ್ತೂಟ್ ಮೈಕ್ರಿಫಿನ್ ದಲ್ಲಿ ರಿಲೇಶನ್ ಶಿಪ್, ಆಫೀಸರ್ ಹುದ್ದೆಗೆ ಪಿಯುಸಿ ಅಥವಾ ಯಾವುದೇ ಪದವಿ ಪಾಸಾಗಿರಬೇಕು. ಶ್ರೀ ಬಸವ ಅಗ್ರಿಟೆಕ್ (ಜಾನ್ ಡೀರ್ ಟ್ರ್ಯಾಕ್ಟರ್ಸ್)ದಲ್ಲಿ ಸೇಲ್ಸ್, ಎಕ್ಸಿಕ್ಯೂಟಿವ್ ಹುದ್ದೆಗೆ ಪಿಯುಸಿ ಅಥವಾ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 35 ವಯೋಮಾನದೊಳಗಿರಬೇಕು. ಕನೆಕ್ಟ್ ಬಿಜಿನೆಸ್ ಸಲ್ಯೂಶನ್ ದಲ್ಲಿ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಹುದ್ದೆಗೆ ಪಿಯುಸಿ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 30 ವಯೋಮಾನದೊಳಗಿರಬೇಕು. ಆಸಕ್ತರು ತಮ್ಮದಾಖಲೆಗಳೊಂದಿಗೆ ಸಂದರ್ಶಕ್ಕೆ ಹಾಜರಾಗಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗೆ 08472 274846, ಮೊಬೈಲ್ ನಂಬರ್ 9620095270 ಗೆ ಸಂಪರ್ಕಿಲು ಕೋರಲಾಗಿದೆ.

Leave a Comment