Rain alerts two days ರಾಜ್ಯದಲ್ಲಿ ಹಿಂಗಾರು ಮಳೆ ಅಬ್ಬರಿಸುತ್ತಿದ್ದು, ಸೋಮವಾರದಿಂದ ಮಳೆಯ ಅಬ್ಬರ ಹೆಚ್ಚಾಗಿದೆ. ಹೌದು ಇನ್ನೂ ಎರಡು ದಿನ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ ಭಾರತೀಯ ಹವಾಮಾನ ಇಲಾಖೆಯು ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಿದೆ.
ಬೆಂಗಳೂರಿನಲ್ಲಿಇಂದು ಮತ್ತು ನಾಳೆ ಎರಡು ದಿನ ಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ನಗರದಲ್ಲಿ ಇಂದು ಮತ್ತು ನಾಳೆ ಮೋಡ ಕವಿದ ವಾತಾವರಣವಿರುವುದರಿಂದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.
Rain alerts two days ನಿಮ್ಮೂರಿನ ಮಳೆಯ ಮಾಹಿತಿ ಬೇಕೆ? ಈ ನಂಬರಿಗೆ ಕರೆ ಮಾಡಿ
ನಿಮ್ಮೂರಿನಲ್ಲಿ ಮಳೆ ಆಗುತ್ತೋ ಇಲ್ಲವೋ ಎಂಬ ಮಾಹಿತಿ ಪಡೆಯಲು ವರುಣಮಿತ್ರ ಉಚಿತ ಸಹಾಯವಾಣಿ ನಂಬರ್ 92433 45433 ಗೆ ಕರೆ ಮಾಡಬೇಕು. ಆಗ ನಿಮಗೆ ನಿಮ್ಮೂರಿನ ಸುತ್ತಮುತ್ತ ಯಾವಾಗ ಮಳೆ ಆಗುತ್ತದೆ ಎಂಬ ಮಾಹಿತಿ ಸಿಗುತ್ತದೆ. ಈ ಉಚಿತ ಸಹಾಯವಾಣಿ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ರೈತರು ಮನೆಯಿಂದ ಯಾವಾಗ ಬೇಕಾದರೂ ಕರೆ ಮಾಡಿ ಮಳೆಯ ಮಾಹಿತಿ ಪಡೆಯಬಹುದು.
ದಾಮಿನಿ ಆ್ಯಪ್ ಡೌನ್ಲೋಡ್ ಮಾಡಿ ಸಿಡಿಲಿನ ಮಾಹಿತಿ ಪಡೆಯಿರಿ
ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ದಾಮಿನಿ ಆ್ಯಪ್ ನ್ನು ಡೌನ್ಲೋಡ್ ಮಾಡಿ ಐದು ನಿಮಿಷ ಮೊದಲೇ ಸಿಡಿಲಿನ ಮಾಹಿತಿ ಪಡೆದುಕೊಳ್ಳಬಹುದು. ಹೌದು ರೈತರು ಗೂಗಲ್ ಪ್ಲೇ ಸ್ಟೋರ್ ನಲ್ಲಿ Damini app ಎಂದು ಟೈಪ್ ಮಾಡಬೇಕು. ಆಗ ದಾಮಿನಿ ಆ್ಯಪ್ ಮೇಲ್ಗಡೆ ಕಾಣಿಸುತ್ತದೆ. ಅಲ್ಲಿ ಇನಸ್ಟಾಲ್ ಮೇಲೆ ಕ್ಲಿಕ್ ಮಾಡಿಕೊಳ್ಳಬಹುದು. ಅಥವಾ ಈ
https://play.google.com/store/apps/details?id=com.lightening.live.damini
ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ದಾಮಿನಿ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ Install ಮೇಲೆ ಕ್ಲಿಕ್ ಮಾಡಬಹುದು. ನಂತರ ಓಪನ್ ಮೇಲೆ ಕ್ಲಿಕ್ ಮಾಡಿದರೆ ದಾಮಿನಿ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ ನೀವು ಭಾಷೆ ಆಯ್ಕೆ ಮಾಡಿಕೊಂಡು ಸರಿ ಮೇಲೆ ಕ್ಲಿಕ್ ಮಾಡಬೇಕು.
ನಿಮ್ಮ ಮೊಬೈಲ್ ನಲ್ಲಿ ಜಿಪಿಎಸ್ ಆನ್ ಇರಬೇಕು. ಜಿಪಿಎಸ್ ಆನ್ ಇದ್ದರೆ ಸಿಡಿಲಿನ ಸ್ಥಳ ಗುರುತಿಸಲು ಸುಲಭವಾಗುತ್ತದೆ. ಇದಕ್ಕೆ ನಾನು ಒಪ್ಪುತ್ತೇನೆ ಬಾಕ್ಸ್ ಆಯ್ಕೆ ಮಾಡಿಕೊಂಡು ಜಿಪಿಎಸ್ ನ್ನು ಸಕ್ರಿಯಗೊಳಿಸಿ ಮೇಲೆ ಕ್ಲಿಕ್ ಮಾಡಬೇಕು. ನಂತರ ವೈಲ್ ಯೂಸಿಂಗ್ ದಿ ಆ್ಯಪ್ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ : ರೈತರು ಜಮೀನಿನ ಅಳತೆ ಮೊಬೈಲ್ ನಲ್ಲೇ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಆಗ ನಿಮಗೆ ಒಂದು ಸರ್ಕಲ್ ಕಾಣಿಸುತ್ತದೆ. ಅಲ್ಲಿಎ ಷ್ಟು ನಿಮಿಷದೊಳಗೆ ನೀವು ಇರುವ ಸುತ್ತಮತ್ತಲಿನ ಪ್ರದೇಶದ ಎಲ್ಲೆಲ್ಲಿ ಸಿಡಿಲು ಬೀಳುವ ಸಾಧ್ಯತೆ ಎಂಬುದು ಕಾಣಿಸುತ್ತದೆ. ಕೆಳಗಡೆ ನಿಮಿಷ ಕಾಣಿಸುತ್ತದೆ. ಅದಕ್ಕೆ ಬಣ್ಣವನ್ನು ಸಹ ಗುರುತಿಸಲಾಗಿರುತ್ತದೆ. ಆ ಆಧಾರದ ಮೇಲೆ 7 ನಿಮಿಷದೊಳಗೆ ಎಲ್ಲೆಲ್ಲಿ 14 ನಿಮಿಷದೊಳಗೆ ಎಲ್ಲೆಲ್ಲಿ ಹಾಗೂ 21 ನಿಮಿಷದೊಳಗೆ ಎಲ್ಲೆಲ್ಲಿ ಸಿಡಿಲು ಬೀಳುತ್ತವೆ ಎಂಬ ಮಾಹಿತಿ ಕಾಣಿಸುತ್ತದೆ.
ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ದಿಢೀರನೇ ಮಳೆ
ಹಲವು ದಿನಗಳ ಬಿಡುವು ನಂತರ ರಾಜ್ಯದಲ್ಲಿ ಮಳೆ ಅಬ್ಬರಿಸಿದೆ. ಧಾರವಾಡ, ಬೆಂಗಳೂರು ಸೇರಿ ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾನುವಾರ ರಾತ್ರಿಯಿಂದ ಕೆಲ ಕಾಲ ಉತ್ತಮ ಮಳೆಯಾಗಿದೆ. ಈ ಮೂಲಕ ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ರೈತರಿಗೆ ತುಸು ಮಂದಹಾಸ ಮೂಡಿದೆ. ಬೆಂಗಳೂರು, ಬಾಗಲಕೋಟೆ, ತುಮಕೂರು, ಉಡುಪಿ, ಚಿಕ್ಕಮಗಳೂರು, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ ಜಿಲ್ಲೆಯ ಕೆಲವು ಕಡಮೆ ಉತ್ತಮ ಮಳೆಯಾಗಿದೆ.