ಈ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಇಲ್ಲಿದೆ ಮಾಹಿತಿ

Written by Ramlinganna

Published on:

rain alert call this number : ರಾಜ್ಯದ ಹಲವೆಡೆ ಮುಂಗಾರು ಮತ್ತೆ ಬಿರುಸು ಪಡೆದುಕೊಂಡಿದೆ. ಕರಾವಳಿ, ಮಲೆನಾಡು ಮತ್ತು ದಕ್ಷಿಣ ಕರ್ನಾಟಕ ವ್ಯಾಪ್ತಿಯ ಕೆಲ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಹಾಗೂ ಹಾಸನದಲ್ಲಿ ಜುಲೈ  20 ರಿಂದ  ಜುಲೈ 21 ರವರೆಗೆ ಬಿರುಸಾಗಿ ಮಳೆಯಾಗವ ಸಾಧ್ಯತೆಯಿರುವುದರಿಂದ ಹವಾಮಾನ ಇಲಾಖೆ ಆರೇಂಜ್ ಅಲರ್ಟ್ ಎಚ್ಚರಿಕೆನೀಡಲಿದೆ.

ಧಾರವಾಡ, ಗದಗ, ಹಾವೇರಿ, ಚಾಮರಾಜನಗರ, ಮಂಡ್ಯ, ಮೈಸೂರಿನಲ್ಲಿ ಮುಂದಿನ ಎರಡು ದಿನಗಳ ಭಾರಿ ಮಳೆಯಾಗಲಿದೆ. ಅದೇ ರೀತಿಜುಲೈ 21 ರಂದು ಬೆಂಗಳೂರು, ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ, ಕೊಪ್ಪಳದಲ್ಲಿ ಭಾರಿಮಳೆಯಾಗುವ ಸಾಧ್ಯತೆಯಿದೆ.ಹಾಗಾಗಿ ಈ ಜಿಲ್ಲೆಗಳಿಗೆ ಜುಲೈ 21 ರಂದು ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ ನಿಮ್ಮ ಯಾವ ಸರ್ವೆ ನಂಬರ್ ಮೇಲೆ ಎಷ್ಟು ಸಾಲವಿದೆ? ಇಲ್ಲೆ ಚೆಕ್ ಮಾಡಿ

ನಿಮ್ಮೂರಲ್ಲಿ ಮಳೆಯಾಗುತ್ತೋ ಇಲ್ಲವೋ ಎಂಬುದನ್ನು ಕೇಳಲು ನೀವು ಈಗ ಎಲ್ಲಿಯೂ ಹೋಗಬೇಕೀಲ್ಲ. ನಿಮ್ಮಮನೆಯಲ್ಲಿಯೇ ಕುಳಿತು ಮಳೆಯ ಮಾಹಿತಿಯನ್ನು ಪಡೆದುಕೊಳ್ಳಬಹುದು.

rain alert call this number  ನಿಮ್ಮೂರಿನಲ್ಲಿ ಮಳೆ ಯಾವಾಗ ಬರಲಿದೆ?

ನಿಮ್ಮೂರಿನಲ್ಲಿಇಂದು ಮಳೆಯಾಗುತ್ತೋ ಇಲ್ಲವೋ ಹಾಗೂ ನಿಮ್ಮೂರಿನಲ್ಲಿ ಮಳೆ ಯಾವಾಗಬರುತ್ತದೆ ಎಂಬ ಮಾಹಿತಿಯನ್ನು ಸಾರ್ವಜನಿಕರು ಪಡೆಯಬಹುದು.ಹೌದು, ವರುಣಮಿತ್ರ ಸಹಾಯವಾಣಿ ನಂಬರ್ 9243345433 ಗೆ ಕರೆ ಮಾಡಿದರೆ ಸಾಕು, ಈಗ ನೀವು ದಿನನಿತ್ಯದ ಹವಾಮಾನ ವರದಿಯನ್ನುಪಡೆದುಕೊಳ್ಳಬಹುದು. ಇದು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ರೈತರು, ಸಾರ್ವಜನಿಕರು ಯಾವುದೇ ಸಮಯದಲ್ಲಿ ಕರೆ ಮಾಡಿ ಮಳೆಯ ಮಾಹಿತಿಯನ್ನುಪಡೆಯಬಹುದು.

rain alert call this number  ಐದು ದಿನ ಮೊದಲೇ ಮಳೆಯ ಮಾಹಿತಿ ಇಲ್ಲಿ ಪಡೆಯಿರಿ

ಮೇಘದೂತ್ ಆ್ಯಪ್ ಮೂಲಕ ರೈತರು ಐದು ದಿನ ಮೊದಲೇ ಮಳೆಯ ಮಾಹಿತಿ ಸಿಗಲಿದೆ. ಮಳೆಯ ಮಾಹಿತಿ ಪಡೆಯಲು ಈ

https://play.google.com/store/apps/details?id=com.aas.meghdoot&hl=en_IN&gl=US&pli=1

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೇಘದೂತ್ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ Install ಮೇಲೆ ಕ್ಲಿಕ್ ಮಾಡಬೇಕು.  ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಮೇಘದೂತ್ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ ನೀವು ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು.

ಆಗ ನಿಮಗೆ ನಿಖರವಾದ ಬೆಳೆ ಸಲಹೆ ಪಡೆಯಿರಿ ಎಂಬ ಸಂದೇಶ ಕಾಣಿಸುತ್ತದೆ. ಅದರ ಕೆಳಗಡೆಯಿರುವ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ನಂತರ ವಿವಿಧ ಭಾಷೆಗಳಲ್ಲಿ ದಾದನಂತರ ಹವಾಮಾನ ಮುನ್ಸೂಚನೆ ಎಂಬ ಸಂದೇಶ ಕಾಣಿಸುತ್ತದೆ.

Leave a Comment