ಇಂದಿನಿಂದ ಈ ಜಿಲ್ಲೆಗಳಲ್ಲಿ ಮಳೆಯಾಗಲಿದೆ

Written by Ramlinganna

Published on:

rain alert again here : ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಒಂದುವಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

rain alert again here ಯಾವ ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ?

ಹೌದು, ಕಲಬುರಗಿ, ಬೀದರ್, ಯಾದಗಿರಿ, ಧಾರವಾಡ, ಬೆಳಗಾವಿ, ರಾಯಚೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಮಂಡ್ಯ, ಚಾಮರಾಜನಗರ, ರಾಮನಗರ, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ,  ಹಾವೇರಿ, ಹಾಸನ, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಲಬುರಗಿ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಭಾನುವಾರ ಮುಂದಿನ ಮೂರು ಗಂಟೆಯಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಆಂಧ್ರಪ್ರದೇಶದ ಕರಾವಳಿ ಭಾಗದ ಮಧ್ಯ ಭಾಗಗಳು, ಯಾಣಂ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಾಯು ಚಂಡಮಾರುತ ಇರುವುದರಿಂದ ಕರ್ನಾಟದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ದಕ್ಷಿಣಕನ್ನಡ, ಉಡುಪಿ, ಗದಗ, ಧಾರವಾಡ, ಹಾವೇರಿ, ಕೊಪ್ಪಳ, ರಾಯಚೂರು, ಚಿಕ್ಕಮಗಳೂರು, ಮೈಸೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಚಾಮರಾಜನಗರ, ಕೋಲಾರ, ಮಂಡ್ಯ ಕೊಡಗು, ಹಾಸನ, ಮತ್ತು ಶಿವಮೊಗ್ಗ, ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಏಪ್ರೀಲ್ 15, 16 ಹಾಗೂ 17 ರಂದು ಸಹ ವಿವಿಧ ಜಿಲ್ಲೆಗಳಲ್ಲಿ ಅಲ್ಲಲ್ಲಿಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸಿಡಿಲಿನಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ

ಸಿಡಿಲಿನ ಆಘಾತದಿಂದ ಪಾರಾಗುವುದು ಹೇಗೆ?  ಸಿಡಿಲಿನಿಂದ ತಪ್ಪಿಸಿಕೊಳ್ಳಲು  ರೈತರು ಸಾರ್ವಜನಿಕರು  ಏನೆಲ್ಲಾ  ಮುನ್ನೆಚ್ಚರೆಕೆ ಕೈಗೊಳ್ಳಬೇಕು ಎಂಬುದರ ಮಾಹಿತಿ ಇಲ್ಲಿದೆ.

ಗುಡುಗು ಮಿಂಚಿನ ಆರ್ಭಟ ಶುರುವಾದಾಗ ಈಗಲೂ ಹಿರಿಯಲು ಮಕ್ಕಳಿಗೆ ಮನೆಯೊಳಗಡೆ ಬಾ, ಅಥವಾ ಮನೆಯೊಳಗೆ ಹೋಗು ಎಂದು ಗದರಿಸುತ್ತಾರೆ. ಇದು ಸಿಡಿಲಿನಿಂದ ತಪ್ಪಿಸಿಕೊಳ್ಳಲು ಸುರಕ್ಷತೆಯ ಮೊದಲ ಪಾಠ. ಭಾರತದಲ್ಲಿ ಸಿಡಿಲಿನಿಂದ ಸಾಯುವವರಲ್ಲಿ ಹೆಚ್ಚಿನವರು ರೈತರು. ಅದೂ ಅವರು ಹೊಲದಲ್ಲಿದ್ದ ಸಂದರ್ಭದಲ್ಲೇ ಸಾಯುತ್ತಾರೆ ಹೊರತು ಮನೆಯಲ್ಲಿದ್ದಾಗ ಯಾವ ರೈತರೂ ಸಾವನ್ನಪ್ಪುವುದಿಲ್ಲ.

ಇದನ್ನೂ ಓದಿ ನಿಮ್ಮ ಹೆಸರಿಗೆ ಜಾಬ್ ಕಾರ್ಡ್ ಇದೆಯೋ ಇಲ್ಲವೋ? ಇಲ್ಲೇ ಚೆಕ್ ಮಾಡಿ

 ಸಾಮಾನ್ಯವಾಗಿ ಮುಂಗಾರು ಪೂರ್ವ ಕೆಲಸಗಳಿಗಾಗಿ ರೈತರು ಹೊಲಗಳಲ್ಲಿರುತ್ತಾರೆ. ಮಳೆ ಆರಂಭವಾದರೆ ಸಾಕು ತಕ್ಷಣವೇ ಮರಗಳ ಕೆಳಗೆ ನಿಲ್ಲುತ್ತಾರೆ. ಏಕೆಂದರೆ ಅವರಿಗೆ ಬೇರೆ ಆಸರೆ ಇರುವುದಿಲ್ಲ.  ಹಾಗಾಗಿ  ಹೊಲಗಳ ನಡುವೆ ಮರ ಇದ್ದರೆ ರೈತರು ತಮ್ಮ ಜಾನುವಾರುಗಳೊಂದಿಗೆ ಮರಗಳ  ಕೆಳಗಡೆ ಹೋಗಿ ನಿಲ್ಲುತ್ತಾರೆ.  ಆದರೆ ದುರಾದೃಸ್ಟ ನೋಡಿ ಹೇಗಿದೆ ಸಿಡಿಲು ಸಹ ಮರಗಳ ಮೇಲೆಯೇ ಹೆಚ್ಚ ಬೀಳುತ್ತವೆ.. ಹೀಗಾಗಿ ರೈತರು ಮತ್ತು ರೈತರ ಜಾನುವಾರುಗಳು  ಹೆಚ್ಚಾಗಿ ಸಾವನ್ನಪ್ಪುತ್ತವೆ.

ಸಿಡಿಲಿನಿಂದ ತಪ್ಪಿಸಿಕೊಳ್ಳಲು  ಇಲ್ಲಿ ನೀಡಲಾದ  ಕೆಲವು ಸಲಹೆಗಳನ್ನು ಅನುಸರಿಸಬಹುದು.

ಗುಡುಗು ಮಿಂಚು ಬರುವುದು ಗೊತ್ತಾದರೆ, ಬಯಲಿನಲ್ಲಿದ್ದವರು ತಕ್ಷಣವೇ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಬೇಕು. ಮರಗಳಿದ್ದರೆ ಅವಗಳಿಂದಲೂ ದೂರ ನಿಲ್ಲಬೇಕು. ಸಿಡಿಲು ಮತ್ತು ಗುಡುಗು ಹಸಿ ವಸ್ತುಗಳಿಗೆ ಹೆಚ್ಚು ಆಕರ್ಷಿತಗೊಳ್ಳುತ್ತವೆ. ಹಾಗಾಗಿ ಸಿಡಿಲುಗಳು ಮರಗಳ ಮೇಲೆಯೇ ಹೆಚ್ಚು ಬೀಳುತ್ತವೆ.  ಮರಗಳ ಕೆಳಗೆ ನಿಲ್ಲುವುದು ಸುರಕ್ಷಿತವಲ್ಲ.

ರೈತರು ಕುರಿ ಮಂದೆ ಅಥವಾ ದನಗಳ ಮಧ್ಯೆ ಇದ್ದರೆ, ಅವುಗಳ ಸಂದಿಯಲ್ಲಿ ಕುಳಿತುಕೊಳ್ಳಬೇಕು. ಎದ್ದು ನಿಂತರೆ ಎತ್ತರ ಇರುವ ಮನುಷ್ಯನಿಗೆ ಮೊದಲು ಸಿಡಿಲು ಬಡಿಯುತ್ತದೆ. ವಿದ್ಯುತ್ ಕಂಬ, ಮೊಬೈಲ್, ಟವರ್, ಟ್ರಾನ್ಸಫಾರ್ಮರ್ ಗಳಿಂದ ದೂರ ಇರಬೇಕು.

ಮನೆಯ ಕಿಟಕಿ ಪಕ್ಕದಲ್ಲಿ ನಿಲ್ಲುವುದರ ಬದಲು ಮನೆಯ ಮಧ್ಯದಲ್ಲಿ ಇರಬೇಕು.. ಮಳೆಯಲ್ಲಿ  ಕಾರು, ಚಲಾಯಿಸುತ್ತಿದ್ದರೆ ಗ್ಲಾಸ್ ಹಾಕಿಕೊಳ್ಳಬೇಕು. ಕಾರಿಗೆ ಒರಗಿ ಕೂಡುವ ಬದಲು ಮಧ್ಯದಲ್ಲಿ ಕೂಡಬೇಕೆಂದು ಕಂದಾಯ ಇಲಾಖೆ ಸಲಹೆ ನೀಡಿದೆ.

ಗುಡುಗು- ಮಿಂಚು ಬರಲಿದೆ ಎಂದು ಗೊತ್ತಾದಾಗ ನೀವು ಹೊಲದಲ್ಲಿದ್ದರೆ ಆದಸ್ಟು ಬೇಗ ಹತ್ತಿರದಲ್ಲಿರುವ ಯಾವುದೇ ಕಟ್ಟಡದಲ್ಲಿ ಆಶ್ರಯ ಪಡೆದುಕೊಳ್ಳುವುದು ಉತ್ತಮ.

Leave a Comment