Pradhan mantra avas yojana : ಪ್ರಧಾನ ಮಂತ್ರಿ ಆವಾಸ ಯೋಜನೆ ನಗರ 2..0 ಯೋಜನೆ ಅಡಿಯಲ್ಲಿ 4 ಯೋಜನೆಯನ್ನು ಜಾರಿಗೊಳಿಸಿದ್ದು, ಅರ್ಹ ಹಾಗೂ ಆಸಕ್ತಿ ಇರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಕೆಳಗಿನಂತೆ ದಾಖಲೆಗಳೊಂದಿಗೆ ಆನ್ಲೈನ್ ಸೇವಾ ಕೇಂದ್ರದಲ್ಲಿ ಅಥವಾ ತಾವೇ ಖುದ್ದಾಗಿ
https://pmay-urban.gov.in/
ವೆಬ್ ಸೈಟ್ನಲ್ಲಿ ಅರ್ಜಿ ಹಾಗು ದಾಖಲೆ ಸಲ್ಲಿಸಲು ಜುಲೈ 15 ರಂದು ಕೊನೆಯ ದಿನಾಂಕವಾಗಿರುತ್ತದೆ. ಎಂದು ಜಿಲ್ಲೆಯ ಜಿಲ್ಲಾ ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕರು ಕಲಬುರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿಯನ್ನು ಮಹಿಳಾ ಫಲಾನುಭವಿ ಹೆಸರಿನಲ್ಲಿ ಅರ್ಜಿ ಸಲ್ಲಿಸುವುದು, ಫಲಾನುಭವಿ ನೇತೃತ್ವದ ನಿರ್ಮಾಣ ವಸತಿ ಯೋಜನೆ (ಬಿಎಲ್ಸಿ), ಪಾಲುದಾರಿಕೆಯಲ್ಲಿ ಕೈಗೆಟಕುವ ಬಹುಮಹಡಿ ವಸತಿ ಯೋಜನೆ (ಎ.ಹೆಚ್.ಪಿ) ಕೈಗೆಟಕುವ ಬಾಡಿಗೆ ವಸತಿ ಯೋಜನೆ (ಎ.ಆರ್.ಹೆಚ್) , ಬಡ್ಡಿ ಸಹಾಯಧನ (ಸಬ್ಸೀಡಿ) ವಸತಿ ಯೋಜನೆ (ಐ.ಎಸ್.ಎಸ್.)
Pradhan mantra avas yojana ಅರ್ಜಿದಾರರ ಅರ್ಹತೆ
ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳಿಂದ/ ಇಲಾಖೆಗಳಿಂದ ಯಾವುದೇ ಸಹಾಯಧನ ಪಡೆದು ಮನೆ ನಿರ್ಮಿಸಿಕೊಂಡಿರಬಾರದು. ವಿವಾಹಿತ ಮಹಿಳೆ , ಏಕ ಮಹಿಳಾ ಒಡೆತನ ಗೃಹಣೆ, ಪುರುಷರಾಗಿದ್ದಲ್ಲಿ ಮಾಜಿಯೋಧರು, ವಿಧುರರು, ಅಂಗವಿಕಲರು, ವಿಚ್ಫೇದಿತರು ಅರ್ಜಿಯನ್ನು ಸಲ್ಲಿಸಬಹುದು.
ನಿವೇಶನ/ಕಚ್ಚಾನೆಯ ಮೂಲ ದಾಖಲಾತಿಗಳ ಪರಿಶೀಲನೆ ವೇಳೆಯಲ್ಲಿ ಹಾಜರ ಪಡಿಸಬೇಕು ಹಾಗೂ ಜಿ.ಪಿ.ಎಸ್. ಆಧಾರಿತ ಫೋಟೋ ನೀಡುವುದು. ಮನೆ ನಿರ್ಮಾಣಕ್ಕೆ ನಿಗದಿ ಪಡಿಸಿದ ನಿವೇಶನ/ಕಚ್ಚಾಮನೆ ಸ್ಥಳವನ್ನು ಯಾವುದೇ ಕಾರಣಕ್ಕೂ ಬದಲಾಯಿಸುವಂತಿಲ್ಲ.
ಅರ್ಜಿದಾರರ ಆಧಾರಕಾರ್ಡ್ ಪ್ರತಿ ಕುಟುಂಬ ಸದಸ್ಯರ ಆಧರಕಾರ್ಡ್ ಅರ್ಜಿದಾರರ ಇತ್ತೀಚಿನ 3 ಭಾವ ಚಿತ್ರ (ಫೋಟೋ ) ಸಲ್ಲಿಸುವುದು, ನಿವೇಶನ/ಕಚ್ಚಾ ಮನೆಗೆ ಸಂಬಂಧಸಿದ ಇತ್ತೀಚಿನ ಚಾಲ್ತಿ ಉತ್ತಾರ ಪ್ರತಿ ಹಾಗೂ ಜಿ.ಪಿ.ಎಸ್. ಆಧಾರಿತ ಪೋಟೋ ನೀಡುವುದು. ಚಾಲ್ತಿಯಲ್ಲಿರುವ ಆದಾಯು ಮತ್ತು ಜಾತಿ ಪ್ರಮಾಣ ಪತ್ರ ಮತ್ತು ಪಡಿತರ ಚೀಟಿ ಹಾಗೂ ಮತದಾನ ಚೀಟಿ ನೀಡುವುದು. ಅರ್ಜಿದಾರರ (ರಾಷ್ಟ್ರೀಕೃತ ಬ್ಯಾಂಕ್ ಖಾತೆ ರಾಷ್ಟ್ರೀಕೃತ ಬ್ಯಾಂಕ್) ನೀಡುವುದು. ಅರ್ಜಿದಾರರ ಹೆಸರಿನಲ್ಲಿ ಅಥವಾ ಪತಿ.ಪತ್ನಿ ಅವಿವಾಹಿತ ಮಗ/ಮಗಳು, ಹೆಸರಿನಲ್ಲಿ ಸ್ವಂತ ಮನೆ ಹೊಂದಿಲ್ಲ ಎಂಬುದರ ಬಗ್ಗೆ 100 ಛಾಪಾ ಪತ್ರದಲ್ಲಿ ತಂಟೆ-ವ ತಕಾರರು ಇಲ್ಲದಿರುವ ಬಗ್ಗೆ ಒಪ್ಪಿಗೆ ಪತ್ರವನ್ನು ನೀಡುವುದು.
ಇದನ್ನೂ ಓದಿ ಇಂದು ನಿಮ್ಮೂರಲ್ಲಿ ಮಳೆಯಾಗುತ್ತೋ ಇಲ್ಲೋ? ಈ ನಂಬರಿಗೆ ಕರೆ ಮಾಡಿ ಮಾಹಿತಿ ಪಡೆಯಿರಿ
ಕಡ್ಡಾಯವಾಗಿ ಅರ್ಜಿದಾರರು ತಮ್ಮ ಮೊಬೈಲ್ ಸಂಖ್ಯೆ ಆಧಾರ ನಂಬರ ಬ್ಯಾಂಕ್ ಖಾತೆಗೆ ಜೋಡಣಗೆ ಯಾಗಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲೆಯ ಜಿಲ್ಲಾ ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
10 ನೇ ತರಗತಿ ಪಾಸಾದ ಮಹಿಳಾ ಮತ್ತು ಪುರುಷರ ನೇಮಕ
ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ) ಕಲಬುರಗಿಯಲ್ಲಿ ಆಗಸ್ಟ್ 2025-26 ನೇ ಶೈಕ್ಷಣಿಕ ಸಾಲಿಗಾಗಿ 10 ನೇ ತರಗತಿ ಪಾಸಾದ ಮಹಿಳಾ ಮತ್ತು ಪುರುಷ ಪ್ರಕ್ರಿಯೆ ಪ್ರಾರಂಭವಾಗಿರುತ್ತದೆ. ಸರ್ಕಾರಿ ಸೀಟುಗಳ ಮೀಸಲಾತಿ ಆಧಾರದ ಜೂನ್ 12 ರಿಂದ ಆಗಸ್ಟ್ 31, 2025 ರವರೆಗೆ ಆಫ್ ಲೈನ್ನಲ್ಲಿ ಖಾಲಿ ಉಳಿದ ಸ್ಥಾನಗಳಿಗೆ ಮೇರಿಟ್ ಆಧಾರದ ಮೇರೆಗೆ ಭರ್ತಿಮಾಡಿಕೊಳ್ಳಲು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯರು ಪ್ರಾಚಾರ್ಯರು ತಿಳಿಸಿದ್ದಾರೆ.
ಪಿ.ಪಿ.ಪಿ ಯೋಜನೆಗೆ ಅಡಿಯಲ್ಲಿ ನೇರ ಪ್ರವೇಶಕ್ಕಾಗಿ ಮೊದಲು ಬಂದವರಿಗೆ ಅವಕಾಶವಿರುತ್ತದೆ. ಪಿಪಿಪಿ ಸೀಟುಗಳು ಪ್ರವೇಶಕ್ಕಾಗಿ ಮಹಿಳಾ ಅಭ್ಯರ್ಥಿಗಳಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ.
ಎಲೆಕ್ಟ್ರೀಷಿಯನ್, ಎಲೆಕ್ಟಾçನಿಕ್ ಮೆಕ್ಯಾನಿಕ್, ಫಿಟ್ಟರ್, 02 ವರ್ಷ ಅವಧಿ, ಕಂಪ್ಯೂಟರ್ ಹಾರ್ಡ್ವೇರ್ ಅಂಡ್ ನೆಟ್ವರ್ಕ್ ಮೆಂಟೆನನ್ಸ್, 01 ವರ್ಷ ಅವಧಿ,
ಕೋಪಾ, ಡ್ರೇಸ್ ಮೇಕಿಂಗ್, ಇಂಡ್ಸ್ಟ್ರಿಯಲ್ ಒರೋಬೋಟಿಕ್ಸ್ ಅಂಡ್ ಡಿಜಿಟಲ್ ಮ್ಯಾನಿಫ್ಯಾಕ್ಟರಿಂಗ್ ಟೇಕ್ನಿಷಿಯನ್, ಒಂದು ವರ್ಷ ಅವಧಿ,
ಮೆಕ್ಯಾನಿಕ್, ಎಲೆಕ್ಟಿçಕ್, ವಹಿಕಲ್, ಸಿಎನ್ಸಿ ಮಷಿನಿಂಗ್, ಟೆಕ್ನಿಷಿಯನ್À್ನ÷ ರ್ಚುವಲ್ ಎನಾಲಿಸಿಸ್ ಅಂಡ್ ಡಿಸೈನರ್ (ಫನಿಟ್ಎಲೆಮೆಂಟ್ ಮೆಥೆಡ್ ಅವಧಿ 2 ವರ್ಷ ಅವಧಿ ಇರುತ್ತದೆ.
ಡ್ರೇಸ್ ಮೇಕಿಂಗ್ ವೃತ್ತಿಗೆ 6ನೇ ಪಾಸಾದ 10 ನೇ ಫೇಲಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಅಫಲೈನ್ ಮೂಲಕ ಅರ್ಜಿ ಸಲ್ಲಿಸಲು ಸಂಸ್ಥೆಯ ಪ್ರಾಚಾರ್ಯರು ತಿಳಿಸಿರುತ್ತಾರೆ.
ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ) ಕಲಬುರಗಿ ದೂರವಾಣಿ ಸಂಖ್ಯೆ 08472-236753 ಹೆಚ್ಚಿನ ಮಾಹಿತಿಗಾಗಿ ಅನಿಲಕುಮಾರ ರಾಠೋಡ ತ.ಅ. ಮೋ.ಸಂಖ್ಯೆ 9901361622 ಮತ್ತು ಶ್ರೀ ದತ್ತಪ್ಪ ದ್ವಿ.ದ.ಸ.ಮೊ. ಸಂಖ್ಯೆ. 9008439316 ಕಚೇರಿ ಸಮಯದಲ್ಲಿ 10 ರಿಂದ 5 ಗಂಟೆಯವರೆಗೆ ಸಂಪರ್ಕಿಸಬಹುದು ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯರು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





