Pmkisan fund release on feb24 : ರೈತರಿಗೆ ಗುಡ್ ನ್ಯೂಸ್ ಇಲ್ಲಿದೆ. ಪಿಎಂ ಕಿಸಾನ್ ಹಣ ಯಾವಾಗ ಜಮೆಯಾಗುತ್ತದೆ ಎಂಬ ನಿಮ್ಮಪ್ರಶ್ನೆಗೆ ಇಲ್ಲಿದೆ ಉತ್ತರ. ಹೌದು, ಇದೇ ಫೆಬ್ರವರಿ 24 ರಂದು ದೇಶದ ರೈತರ ಖಾತೆಗೆ ಏಕಕಾಲದಲ್ಲಿ ಪಿಎಂ ಕಿಸಾನ್ 19 ನೇ ಕಂತಿನ ಹಣವನ್ನು ಜಮೆ ಮಾಡಲಾಗುವುದು. ಯಾವ ರಾಜ್ಯದಲ್ಲಿ ಹಣ ಬಿಡುಗಡೆ ಮಾಡಲಾಗುವುದು. ಎಲ್ಲಿಂದ ಹಣ ಬಿಡುಗಡೆ ಮಾಡಲಾಗುವುದು ಎಂಬ ಮಾಹಿತಿ ಇಲ್ಲಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ 19ನೇ ಕಂತಿನ 20 ಸಾವಿರ ಕೋಟಿ ರೂಪಾಯಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 24 ರಂದು ಬಿಡುಗಡೆ ಮಾಡಲಿದ್ದಾರೆ. ಬಿಹಾರ್ ರಾಜ್ಯದ ಭಾಗಲಪೂರ ಜಿಲ್ಲೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಏಕಕಾಲಕ್ಕೆ ರೈತರ ಖಾತೆಗೆ ಹಣ ಜಮೆ ಮಾಡಲಾಗುವುದು. ದೇಶದ 9.4 ಕೋಟಿಗೂ ಹೆಚ್ಚಿನ ರೈತರಿಗೆ ಈ ಯೋಜನೆಯಡಿ ಸೌಲಭ್ಯ ಸಿಗಲಿದೆ. ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆಗೆ (ಡಿಬಿಟಿ) ಮೂಲಕ ಹಣ ಜಮೆ ಮಾಡಲಾಗುವುದು.
2019 ರ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಗೆಚಾಲನೆ ನೀಡಿತ್ತು. ವಾರ್ಷಿಕವಾಗಿ ಮೂರುಸಮಾನ ಕಂತಿನಲ್ಲಿ ಒಟ್ಟು 6 ಸಾವಿರ ರೂಪಾಯಿ ಹಣ ರೈತರಿಗೆ ಸಿಗಲಿದೆ. ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಹಣ ಅಕ್ಪೋಬರ್ 5 ರಂದು ಬಿಡುಗಡೆಯಾಗಿತ್ತು. ಈಗ 19ನೇ ಕಂತಿನ ಹಣ ಫೆಬ್ರವರಿ 24 ರಂದು ಬಿಡುಗಡೆಯಾಗಲಿದೆ.
Pmkisan fund release on feb24 ಪಿಎಂ ಕಿಸಾನ್ ಈ ಪಟ್ಟಿಯಲ್ಲಿರುವ ರೈತರಿಗೆ ಹಣ ಜಮೆ
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಹೆಸರು ಕೆಳಗಡೆ ನೀಡಲಾದ ಪಟ್ಟಿಯಲ್ಲಿದ್ದರೆ ಮಾತ್ರ ಜಮಯಾಗಲಿದೆ. ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಚೆಕ್ ಮಾಡಲು ಈ
https://pmkisan.gov.in/Rpt_BeneficiaryStatus_pub.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿಗೆ ಫಲಾನುಭವಿಗಳ ಚೆಕ್ ಮಾಡುವ ಪೇಜ್ ಓಪನ್ ಆಗುತ್ತದೆ.
ಅಲ್ಲಿ ಕರ್ನಾಟಕ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ನಂತರ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಬ್ಲಾಕ್ ನಲ್ಲಿ ನಿಮ್ಮ ತಾಲೂಕು ಆಯ್ಕೆ ಮಾಡಿಕೊಂಡು ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ Get Report ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮೂರಿನಲ್ಲಿ ಯಾವ ಯಾವ ರೈತರು ಫಲಾನುಭವಿಗಳಿದ್ದಾರೆ ಎಂಬ ಪಟ್ಟಿ ಕಾಣಿಸುತ್ತದೆ.
Pmkisan fund release on feb 24 ಇಕೆವೈಸಿ ಆದ ರೈತರಿಗೆ ಮಾತ್ರ ಪಿಎಂ ಕಿಸಾನ್ ಹಣ ಜಮೆ
ಪಿಎಂ ಕಿಸಾನ್ ಯೋಜನೆಯ ಪೋರ್ಟಲ್ ನಲ್ಲಿ ಆಧಾರ್ ಆಧಾರಿತ ಓಟಿಪಿ ದೃಢೀಕರಣಕ್ಕಾಗಿ ಕಿಸಾನ್ ಕಾರ್ನರ್ ನಲ್ಲಿರುವ ಇ-ಕೆವೈಸಿ ಆಯ್ಕೆಯನ್ನು ಕ್ಲಿಕ್ ಮಾಡಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ರೈತರು ಈ
https://pmkisan.gov.in/aadharekyc.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಅಲ್ಲಿ ಪಿಎಂ ಕಿಸಾನ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ನಿಮ್ಮಆಧಾರ್ ಕಾರ್ಡ್ ನ್ನು ನಮೂದಿಸೇಕು. ನಂತರ search ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಹೆಸರಿಗೆ ಇಕೆವೈಸಿ ಆಗಿದ್ದರೆ ಅಲ್ಲಿ EKYC is Already Done ಎಂಬ ಮೆಸೇಜ್ ಕಾಣಿಸುತ್ತದೆ. ಅಲ್ಲಿ ನೀವು ಓಕೆ ಬಟನ್ ಮೇಲೆ ಕ್ಲಿಕ್ ಮಾಡಬಹುದು.
ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಲು ಬೇಕಾಗುವ ಅರ್ಹತೆಗಳು ಯಾವುವು?
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿದ್ದ ಮಾತ್ರಕ್ಕೆ ನಿಮಗೆ ಮುಂದಿನ ಕಂತು ಜಮೆಯಾಗುತ್ತದೆ ಎಂದು ಹೇಳಲಿಕ್ಕಾಗುವುದಿಲ್ಲ. ಪಿಎಂ ಕಿಸಾನ್ ಯೋಜನೆಗೆ ಅರ್ಹತೆ ಇರಬೇಕು.
ಇದನ್ನೂ ಓದಿ : ನಿಮ್ಮ ಜಮೀನಿನ ಸರ್ವೆ ನಂಬರ್ ಮ್ಯಾಪ್ ಹೀಗೆ ಡೌನ್ಲೋಡ್ ಮಾಡಿ
ನೀವು ಸಣ್ಣ ಮತ್ತು ಅತೀ ಸಣ್ಣ ರೈತರಾಗಿರಬೇಕು. ನೀವು ನಿಮ್ಮ ಪತಿ ಅಥವಾ ಪತ್ನಿ ಅಥವಾ ಮಕ್ಕಳು ಸರ್ಕಾರಿ ನೌಕರಿಯಲ್ಲಿರಬಾರದು.