PM kisan status check ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಮೊಬೈಲ್ ನಲ್ಲಿಯೇ ಪಿಎಂ ಕಿಸಾನ್ ಯೋಜನೆಯ ಹಣ ಜಮೆ ಕುರಿತು ಸ್ಟೇಟ್ಸ್ ನೋಡಿಕೊಳ್ಳಬಹುದು. ಇಲ್ಲಿಯವರೆಗೆ ಎಷ್ಟು ಕಂತುಗಳು ಜಮೆಯಾಗಿದೆ, ಮುಂದಿನ ಕಂತಿನ ಸ್ಟೇಟಸ್ ಸಹ ಮೊಬೈಲ್ ನಲ್ಲಿಯೇ ನೋಡಬಹುದು.
ಕೇಂದ್ರ ಸರ್ಕಾರವು ಜಾರಿಗೆ ತಂದ ಯೋಜನೆಗಳಲ್ಲಿ PM kisan Scheme ಹೆಚ್ಚು ಪ್ರಸಿದ್ಧಿ ಪಡೆದಿದೆ. ಸಣ್ಣ ಅತೀ ಸಣ್ಣ ರೈತರ ಆರ್ಥಿಕ ಅಭಿವೃದ್ಧಿಯಾಗಲು ಹಾಗೂ ಬೆಳೆಗಳಿಗೆ ತಗಲುವ ರೋಗ, ಕೀಟಗಳ ಹಾವಳಿ ತಡೆಯಲು ಅನುಕೂಲವಾಗಲೆಂದು ಪಿಎಂ ಕಿಸಾನ್ ಯೋಜನೆಯನ್ನು ಜಾರಿಗೆ ತರಲಾಗಿದೆ.
ಪಿಎಂ ಕಿಸಾನ್ ಯೋಜನೆಯಡಿ ರೈತರ ಖಾತೆಗೆ ಪ್ರತಿವರ್ಷ ಆರು ಸಾವಿರ ರೂಪಾಯಿ ಪ್ರತಿ ನಾಲ್ಕು ತಿಂಗಳಿಗೆ 2 ಸಾವಿರ ರೂಪಾಯಿ ಜಮೆ ಮಾಡುತ್ತಿದೆ. ಇಲ್ಲಿಯವರೆಗೆ ಒಂಬತ್ತು ಕಂತಿನ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. ಜನವರಿ 1 ರಂದು ಮಧ್ಯಾಹ್ನ 12 ಗಂಟೆಗೆ 10ನೇ ಕಂತಿನ ಹಣ ಜಮೆ ಮಾಡಲಾಗುವುದು.
ಪಿಎಂ ಕಿಸಾನ್ ಯೋಜನೆಗೆ ಫಲಾನುಭವಿಯಾಗಲು ನೀವು ಅರ್ಜಿ ಸಲ್ಲಿಸಿದ ನಂತರ ಇಲ್ಲಿಯವರೆಗೆ ಎಷ್ಟು ಕಂತುಗಳು ನಿಮ್ಮ ಖಾತೆಗೆ ಜಮೆಯಾಗಿದೆ ಎಂಬುದರ ಕುರಿತು ವಿಚಾರಿಸಲು ಎಲ್ಲಿಗೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿಯೇ PM Kisan Status ನೋಡಿಕೊಳ್ಳಬಹುದು.
PM kisan status check ಪಿಎಂ ಕಿಸಾನ್ ಸ್ಟೇಟಸ್ ಮೊಬೈಲ್ ನಲ್ಲಿ ಚೆಕ್ ಮಾಡಿ
ಪಿಎಂ ಕಿಸಾನ್ ಸ್ಟೇಟಸ್ ನೋಡಲು
https://pmkisan.gov.in/BeneficiaryStatus.aspx
ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ಆಗ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ಫಲಾನುಭವಿಗಳ ಸ್ಟೇಟಸ್ ನೋಡಲು ಮೂರು ಆಯ್ಕೆಗಳಿರುತ್ತವೆ. ಆಧಾರ್ ಕಾರ್ಡ್, ಅಕೌಂಟ್ ನಂಬರ್ ಅಥವಾ ಮೊಬೈಲ್ ನಂಬರ್ ಈ ಮೂರರ ಮೂಲಕ ಯಾವುದಾದರೊಂದು ಆಯ್ಕೆ ಮಾಡಿಕೊಂಡು ಇಲ್ಲಿಯವರೆಗೆ ಎಷ್ಟು ಕಂತುಗಳು ನಿಮ್ಮ ಖಾತೆಗೆ ಜಮೆಜಾಗಿದೆ ಎಂಬುದನ್ನು ನೋಡಬಹುದು.
ಉದಾಹರಣೆ ನೀವು ಮೊಬೈಲ್ ನಂಬರ್ ನಮೂದಿಸಿ ನೋಡಬೇಕಾದರೆ Mobile Number ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಹೆಸರು, ತಂದೆಯ ಹೆಸರು, ಆಧಾರ್ ಕಾರ್ಡ್ ನ ಕೊನೆಯ ನಾಲ್ಕು ಅಂಕಿಗಳು, ರಾಜ್ಯ, ಗ್ರಾಮ, ಜಿಲ್ಲೆ, ಮೊಬೈಲ್ ನಂಬರ್, ನಿಮ್ಮ ಹೆಸರು ಯಾವಾಗ ನೋಂದಣಿಯಾಗಿದೆ. ಇಲ್ಲಿಯವರೆಗೆ ಎಷ್ಟು ಕಂತುಗಳು ನಿಮ್ಮ ಖಾತೆಗೆ ಜಮೆಯಾಗಿದೆ ಎಂಬ ಮಾಹಿತಿ ಕಾಣುತ್ತದೆ.
ಇದನ್ನೂ ಓದಿ ನಿಮ್ಮ ಜಮೀನಿನ ಹಳೆಯ ಪಹಣಿ ಇಲ್ಲೇ ಚೆಕ್ ಮಾಡಿ
ಮುಂದಿನ ತಿಂಗಳು ಡಿಸೆಂಬರ್ ನಲ್ಲಿ ಜಮೆಯಾಗುವ ಹಣದ ಸ್ಟೇಟಸ್ ಸಹ ಕಾಣುತ್ತದೆ. ರಾಜ್ಯ ಸರ್ಕಾರದಿಂದ ಅಪ್ರೂವಲ್ ಆಗಿದೆಯೋ ಅಥವಾ waiting for approval by state ಎಂದು ಕಾಣುತ್ತದೆ. ಒಂದು ವೇಳೆ ರಾಜ್ಯ ಸರ್ಕಾರದಿಂದ ಅಪ್ರೂವಲ್ ಗಾಗಿ ವೆಟಿಂಗ್ ಇದ್ದರೆ ಜನವರಿ 1 ರಂದು ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಹಣ ಜಮೆಯಾಗಲಿದೆ.
ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಸಹ ನೀವು ಎಲ್ಲಿಗೂ ಹೋಗಬೇಕಿಲ್ಲ. ಮೊಬೈಲ್ ನಲ್ಲಿಯೇ ಚೆಕ್ ಮಾಡಬಹುದು. ನೀವು
https://pmkisan.gov.in/Rpt_BeneficiaryStatus_pub.aspx
ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ಓಪನ್ ಆಗುತ್ತದೆ. ಅಲ್ಲಿ ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಆಯ್ಕೆ ಮಾಡಿಕೊಂಡು ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿ ಪಟ್ಟಿಯಲ್ಲಿ ನಿಮ್ಮ ಹೆಸರಿ ಇರುವುದನ್ನು ಚೆಕ್ ಮಾಡಿಕೊಳ್ಳಬಹುದು.