ಈ ಪಟ್ಟಿಯಲ್ಲಿರುವ ರೈತರಿಗಷ್ಟೇ ಪಿಎಂ ಕಿಸಾನ್ ಹಣ ಜಮೆ

Written by Ramlinganna

Updated on:

PM kisan money is deposited ಪಿಎಂ ಕಿಸಾನ್ ಯೋಜನೆಯ 16ನೇ ಕಂತಿನ ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಹೆಸರಿರಿುವುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು,  ಪಿಎಂ ಕಿಸಾನ್ ಯೋಜನೆಯಲ್ಲಿ ಹಲವಾರು ಬದಲಾವಣೆಗಳಾಗಿವೆ. ನಿಜವಾದ ಫಲಾನುಭವಿಗಳಿಗಷ್ಟೇ ಯೋಜನೆಯ ಹಣ ಜಮೆ ಮಾಡುವುದಕ್ಕಾಗಿ ಕೆಲವು ರೈತರ  ಹೆಸರುಗಳನ್ನು ಕೈಬಿಡಲಾಗಿದೆ. ಏಕೆಂದರೆ ಅನರ್ಹ ರೈತರೂ ಸಹ ಈ ಯೋಜನೆಯ ಲಾಭ ಪಡೆಯುತ್ತಿದ್ದರು. ಈಗ ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಅಂತಿಮ ಪಟ್ಟಿ ಸಿದ್ದವಾಗಿದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ.

PM kisan money is deposited ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ 

ರೈತರು ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಚೆಕ್ ಮಾಡಲು ಈ

https://pmkisan.gov.in/VillageDashboard_Portal.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ಓಪನ್ ಆಗುತ್ತದೆ. ಅಲ್ಲಿ ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಆಯ್ಕೆ ಮಾಡಿದ ನಂತರ Submit ಗುಂಡಿ ಮೇಲೆ ಒತ್ತಬೇಕು.   ನಂತರ ಓಪನ್ ಆಗುವ ಪೇಜ್ ನಲ್ಲಿ Aadhar authentication status ಗುಂಡಿ ಮೇಲೆ ಒತ್ತಬೇಕು. ಆಗ  ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಆಲ್ಲಿ ಕಾಣುವ successfully authenticated ಲಿಸ್ಟ್ ನಲ್ಲಿ ಕಾಣುವ ರೈತರಿಗಷ್ಟೇ ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಜಮೆಯಾಗುತ್ತದೆ.

ಪಿಎಂ ಕಿಸಾನ್ ಯೋಜನೆಯಡಿ 6 ಸಾವಿರದಿಂದ 8 ಸಾವಿರಕ್ಕೆ ಹೆಚ್ಚಳವಾಗುವುದಿಲ್ಲ.

ಪಿಎಂ ಕಿಸಾನ್ ಯೋಜನೆಯಡಿ ಪ್ರತಿ ವರ್ಷ ನೀಡಲಾಗುವ 6 ಸಾವಿರ ರೂಪಾಯಿ ಹಣವನ್ನು 8 ಸಾವಿರಕ್ಕೆ ಹೆಚ್ಚಿಸಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಕೇಂದ್ರ ಕೃಷಿ ಸಚಿವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಪಿಎಂ ಕಿಸಾನ್ ಯೋಜನೆಯಡಿ 8 ಸಾವಿರ ರೂಪಾಯಿ ಙಣ ಜಮೆ ಮಾಡಲಾಗುವುದು ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿತ್ತು. ಹಾಗಾಗಿ ಕೇಂದ್ರ ಸಚಿವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಯಾವ ಯಾವ ತಿಂಗಳುಗಳಲ್ಲಿ ಪಿಎಂ ಕಿಸಾನ್ ಹಣ ಜಮೆಯಾಗುವುದು (Which month pm kisan money deposit)

ಪಿಎಂ ಕಿಸಾನ್ ಯೋಜನೆಯ ಹಣ ಪ್ರತಿ ವರ್ಷ ಮೂರು ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು. ಹೌದು, ಏಪ್ರೀಲ್ – ಜುಲೈ ತಿಂಗಳಲ್ಲಿ ಮೊದಲ ಕಂತು ಜಮೆಯಾದರೆ, ಆಗಸ್ಟ್ – ನವೆಂಬರ್ ತಿಂಗಳಲ್ಲಿ ಎರಡನೇ ಕಂತು ಹಾಗೂ ಡಿಸೆಂಬರ್ – ಮಾರ್ಚ್ ತಿಂಗಳಲ್ಲಿ ಮೂರನೇ ಕಂತು ಜಮೆಯಾಗುತ್ತದೆ.

ಇದನ್ನೂ ಓದಿ :ನಿಮ್ಮ ಅಕ್ಕಪಕ್ಕದ ಜಮೀನು ಯಾರ ಹೆಸರಿನಿಂದ ಯಾರಿಗೆ ವರ್ಗಾವಣೆಯಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಕಳೆದ 12ನೇ ಕಂತು ಅಕ್ಟೋಬರ್ 17 ರಂದು ಜಮೆಯಾಗಿತ್ತು. ಈ ಆಧಾರದ ಮೇಲೆ  ಫೆಬ್ರವರಿ 17ಕ್ಕೆ ನಾಲ್ಕು ತಿಂಗಳಾಗುತ್ತದೆ. ಹೀಗಾಗಿ ಫೆಬ್ರವರಿ 17ಕ್ಕೆ ಜಮೆಯಾಗಬಹುದು ಎನ್ನಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಪಿಎಂ ಕಿಸಾನ್ ಹಣ ಜಮೆ ಕುರಿತು ಯಾವುದೇ ಪ್ರಕಟಣೆ ನೀಡಿಲ್ಲ.

ನೀವು ಇಕೆವೈಸಿ ಮಾಡಿಸಿಲ್ಲವೇ? ಕೂಡಲೇ ಇಕೆವೈಸಿ ಮಾಡಿಸಿ (pm kisan beneficiary today only do EKYC)

ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ನೋಂದಾಯಿಸಿಕೊಂಡ ಫಲಾನುಭವಿಗಳು ಒಂದು ವೇಳೆ ಇಕೆವೈಸಿ ಮಾಡಿಸಿಕೊಂಡಿಲ್ಲವಾದರೆ ಕೂಡಲೇ ಇಕೆವೈಸಿ ಮಾಡಿಸಿಕೊಳ್ಳಬೇಕು. ಇಕೆವೈಸಿ ಮಾಡಿಸದಿದ್ದರೆ ಮುಂದಿನ ಕಂತು ಅಂದರೆ 13ನೇ ಕಂತು ರೈತರ ಖಾತೆಗೆ ಜಮೆಯಾಗುವುದಿಲ್ಲ. ರೈತರು ಪಿಎಂ ಕಿಸಾನ್ ಇಕೆವೈಸಿಯನ್ನು ಮೊಬೈಲ್ ನಲ್ಲೇ ಮಾಡಿಸಿಕೊಳ್ಳಬಹುದು. ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್, ಸಿಎಸ್.ಸಿ ಕೇಂದ್ರಗಳಲ್ಲಿಯೂ ಬಯೋಮೆಟ್ರಿಕ್ ಆಧಾರಿತ ಇಕೆವೈಸಿ ಮಾಡಿಸಿಕೊಳ್ಳಬಹುದು.

Leave a Comment