ಪಿಎಂ ಕಿಸಾನ್ 21ನೇ ಕಂತಿನ ಹಣ ಯಾವಾಗ ಜಮೆ ಇಲ್ಲಿದೆ ಮಾಹಿತಿ

Written by Ramlinganna

Published on:

pm kisan han jame ಪಿಎಂ ಕಿಸಾನ್ ಫಲಾನುಭವಿಗಳಿಗಿಲ್ಲಿದೆ ಸಂತಸದ ಸುದ್ದಿ. ಹೌದು, ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣ ಯಾವಾಗ ಜಮೆಯಾಗುತ್ತದೆ ಯಾರು ಯಾರಿಗೆ ಜಮೆಯಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.

ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣ ಮುಂದಿನ ತಿಂಗಳು ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ. ಹೌದು, ಪಿಎಂ ಕಿಸಾನ್ ಯೇಜನೆಯ 20ನೇ ಕಂತಿನ ಹಣ ಆಗಸ್ಟ್ ತಿಂಗಳಲ್ಲಿ ಜಮೆಯಾಗಿತ್ತು. ಹಾಗಾಗಿ ಮುಂದಿನ ಕಂತು ಡಿಸೆಂಬರ್ ತಿಂಗಳಿನಲ್ಲಿ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ.

ಯಾರು ಯಾರಿಗೆ ಪಿಎಂ ಕಿಸಾನ್ ಹಣ ಜಮೆಯಾಗಲಿದೆ

ಪಿಎಂ ಕಿಸಾನ್  ಯೋಜನೆಯ 21 ನೇ ಕಂತಿನ ಹಣ ಯಾರು ಯಾರಿಗೆ ಜಮೆಯಾಗಲಿದೆ ಎಂಬುದನ್ನು ಚೆಕ್ ಮಾಡಲು ಈ ಕೆಳಗಿನ

https://pmkisan.gov.in/Rpt_BeneficiaryStatus_pub.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ನಂತರ ಅಲ್ಲಿ ಬೆನಿಫಿಶಿಯರಿ ಲಿಸ್ಟ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಸೆಲೆಕ್ಟ್ ಸ್ಟೇಟ್ ನಲ್ಲಿ ಕರ್ನಾಟಕ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಇದಾದನಂತರ ನಿಮ್ಮ ತಾಲೂಕು ಹಾಗೂ ಹೋಬಳಿಯಲ್ಲಿ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಹೆಸರಿದೆಯೇ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು.

ಇದನ್ನೂ ಓದಿ :ನಿಮ್ಮ ಸರ್ವೆ ನಂಬರಿನಲ್ಲಿ ಇತರ ರೈತರ ಹೆಸರಿದೆಯೇ? ಇದ್ದರೆ ಎಷ್ಟು ಜಮೀನಿದೆ? ಚೆಕ್ ಮಾಡಿ

ನಿಮ್ಮ ಹೆಸರು ಇದ್ದರೆ ನೀವು ಫಲಾನುಭವಿಗಳ ಪಟ್ಟಿಯಲ್ಲಿದ್ದೀರೆಂದರ್ಥ.

ಈ ಪಟ್ಟಿಯಲ್ಲಿ ಹೆಸರಿದ್ದ ಮಾತ್ರಕ್ಕೆ ಹಣ ಜಮೆಯಾಗಲ್ಲ

ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದ ಮಾತ್ರಕ್ಕೆ ಹಣ ಜಮೆಯಾಗುತ್ತದೆ ಎಂದು ಹೇಳಕ್ಕಾಗುವುದಿಲ್ಲ.  ಹೌದು, ಪಿಎಂ ಕಿಸಾನ್ ಯೋಜನೆಗೆ ಇಕೆವೈಸಿ ಮಾಡಿಸಿದರೆ ಮಾತ್ರ ಹಣ ಜಮೆಯಾಗುತ್ತದೆ. ಪಿಎಂ ಕಿಸಾನ್ ಯೋಜನೆಗೆ ಇಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.

Leave a Comment