14th installment beneficiary list ಪಿಎಂ ಕಿಸಾನ್ ಯೋಜನೆಯ 13ನೇ ಕಂತು ಬಿಡುಗಡೆಯಾಗಿ ರೈತರ ಖಾತೆಗೆ ಜಮೆಯಾಗಿದೆ. ಈಗ 14ನೇ ಕಂತಿನ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಮೊಬೈಲ್ ನಲ್ಲೇಚೆಕ್ ಮಾಡಬಹುದು.
ಹೌದು, ರೈತರು ಮನೆಯಲ್ಲಿಯೇ ಕುಳಿತು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
14th installment beneficiary list ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಪಟ್ಟಿಯಲ್ಲಿ ಹೆಸರು ಚೆಕ್ ಮಾಡುವುದು ಹೇಗೆ?
ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಪಟ್ಟಿಯಲ್ಲಿ ಯಾರ ಹೆಸರಿದೆ ಯಾರ ಹೆಸರಿಲ್ಲವೆಂಬುದನ್ನು ಚೆಕ್ ಮಾಡಲು ಈ
https://pmkisan.gov.in/VillageDashboard_Portal.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ರಾಜ್ಯ (State) ಆಯ್ಕೆ ಮಾಡಿಕೊಳ್ಳಬೇಕು. ಜಿಲ್ಲೆ (District) ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು (Sub District) ಆಯ್ಕೆ ಮಾಡಿಕೊಂಡು ಗ್ರಾಮ (village) ಆಯ್ಕೆ ಮಾಡಿಕೊಂಡ ನಂತರ Submit ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರಿಗೆ ಸಮ್ಮರಿ, ಪೇಮೆಂಟ್ ಸ್ಟೇಟಸ್, ಆಧಾರ್ ಅಥೆಂಟಿಕೇಶನ್ ಸ್ಟೇಟಸ್ ಹಾಗೂ ಆನ್ಲೈನ್ ರಿಜಿಸ್ಟ್ರೇಶನ್ ಸ್ಟೇಟಸ್ ಎಂಬ ನಾಲ್ಕು ಆಯ್ಕೆಗಳಿರುತ್ತವೆ.
ಅಲ್ಲಿ ರೈತರು Aadhaar Authentication status ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ಕೆಳಗಡೆ ಇನ್ನೊಂದು ಪಟ್ಟಿ ಓಪನ್ ಆಗುತ್ತದೆ. ಅಲ್ಲಿ Successfully Authenticated ಕೆಳಗಡೆಯಿರುವ ರೈತರು 14ನೇ ಕಂತಿನ ಪಟ್ಟಿಯಲ್ಲಿ ಸೇರಿರುತ್ತಾರೆ. ಈ ಪಟ್ಟಿಯಲ್ಲಿದ್ದರೈತರಿಗೆ ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಜಮೆಯಾಗಲಿದೆ.
ಯಾವ ತಿಂಗಳಲ್ಲಿ ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಜಮೆಯಾಗಲಿದೆ?
ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಏಪ್ರೀಲ್ – ಜುಲೈ ತಿಂಗಳ ಅವಧಿಯಲ್ಲಿ ಜಮೆಯಾಗುತ್ತದೆ. ಏಪ್ರೀಲ್ ನಂತರ ಯಾವುದೇ ತಿಂಗಳಲ್ಲಿ 14ನೇ ಕಂತಿನ ಹಣ ಜಮೆ ಮಾಡುವ ಸಾಧ್ಯತೆಯಿರುತ್ತದೆ.
ಪಿಎಂ ಕಿಸಾನ್ ಯೋಜನೆಯ ಮೂರು ಕಂತುಗಳಲ್ಲಿ ಜಮೆ
ಹೌದು ಪಿಎಂ ಕಿಸಾನ್ ಯೋಜನೆಯ ಹಣ ರೈತರ ಖಾತೆಗೆ ಮೂರು ಕಂತುಗಳಲ್ಲಿ ಜಮೆಯಾಗುತ್ತದೆ. ಡಿಸೆಂಬರ್ – ಮಾರ್ಚ್ ತಿಂಗಳಲ್ಲಿ ಮೊದಲ ಕಂತು ಜಮೆಯಾದರೆ ಏಪ್ರೀಲ್ – ಜುಲೈ ತಿಂಗಳ ಅವಧಿಯಲ್ಲಿ ಎರಡನೇ ಕಂತು ಜಮೆಯಾಗುತ್ತದೆ. ಅದೇ ರೀತಿ ಆಗಸ್ಟ್ – ನವೆಂಬರ್ ತಿಂಗಳ ಅವಧಿಯಲ್ಲಿ ಮೂರನೇ ಕಂತು ಜಮೆಯಾಗುತ್ತದೆ.
ಇದನ್ನೂ ಓದಿ : ರೈತರ ಜಮೀನಿಗೆ ಹೋಗುವ ಕಾಲಾದಾರಿ, ಬಂಡಿದಾರಿ ಮಾಹಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ
ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ ರೈತರ ಖಾತೆಗೆ ಒಟ್ಟು 13 ಕಂತುಗಳು ಜಮೆಯಾಗಿದೆ. ಇತ್ತೀಚೆಗೆ ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಕರ್ನಾಟಕದಿಂದಲೇ ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದ್ದರು. ಅಂದು ಬಿ.ಎಸ್. ಯಡಿಯೂರಪ್ಪನವರ ಜನ್ಮದಿನವಾಗಿತ್ತು. ಅದೇ ದಿನ ಪಿಎಂ ಕಿಸಾನ್ ಯೋಜನೆಯ ಹಣ ರೈತರ ಖಾತೆಗೆ ಬಿಡುಗಡೆ ಮಾಡಿದ್ದರು.
ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸದೆ ಇರುವ ರೈತರಿಗೆ ಇನ್ನೂ ಕಾಲಾವಕಾಶವಿದೆ. ಹೊಸದಾಗಿ ನೋಂದಣಿ ಮಾಡಿಸುವ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ, ಸಿಎಸ್.ಸಿ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ತೆರಳಿ ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸು ಬುಕ್ ಹಾಗೂ ಜಮೀನಿನ ಪಹಣಿ (ಉತಾರ) ದಾಖಲೆಯೊಂದಿಗೆ ತಮ್ಮ ಹೆಸರು ನೋಂದಣಿ ಮಾಡಿಸಿಕೊಳ್ಳಬಹುದು.