Parihara payment status : ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿಗೆ ಬೆಳೆ ಹಾನಿಯಾದ ಯಾವ ಯಾವ ರೈತರಿಗೆ ಎಷ್ಟೆಷ್ಟು ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ ಎಂಬುದನ್ನು ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಮಾಹಿತಿ.
ನಿಮ್ಮ ಊರಿನಲ್ಲಿ ಯಾವ ಯಾವ ರೈತರಿಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ. ಯಾವ ರೈತರಿಗೆ ಎಷ್ಟು ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ ಎಂಬುದನ್ನು ಕೇಳಲು ನೀವು ಎಲ್ಲಿಯೂ ಹೋಗಬೇಕಿಲ್ಲ. ನಿಮ್ಮ ಬಳಿಯಿರುವ ಮೊಬೈಲ್ ನಲ್ಲಿಯೇ ಚೆಕ್ ಮಾಡಬಹುದು.
Parihara payment status ನಿಮ್ಮೂರಿನಲ್ಲಿ ಯಾರು ಯಾರಿಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ?
ನಿಮ್ಮೂರಿನಲ್ಲಿ ಯಾವ ಯಾವ ರೈತರಿಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://parihara.karnataka.gov.in/service89/PaymentDetailsReport.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ಆಗ ಇನ್ಪುಟ್ ಸಬ್ಸಿಡಿ ಪರಿಹಾರ ಹಣ ಸಂದಾಯದ ವಿವರಗಳು Pariahara Payment Report As on Dated ಎಂಬ ಪೇಜ್ ಕಾಣಿಸುತ್ತದೆ. ಅಲ್ಲಿ ನೀವು Select Year (ವರ್ಷ ಆಯ್ಕೆ ಮಾಡಿ) ನಲ್ಲಿ 225-26 ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ನೀವು Select Season ನಲ್ಲಿ Kharif/ಮುಂಗಾರು ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ Select Calamity ನಲ್ಲಿ Flood/ ಪ್ರವಾಹ ಆಯ್ಕೆ ಮಾಡಿಕೊಳ್ಳಬೇಕು. ನಂತರ Select District ನಲ್ಲಿ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ Select Taluka ನಲ್ಲಿ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ Select Hobli ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಇದಾದನಂತರ Select village ನಲ್ಲಿ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಜಮೀನು ಯಾವ ಊರಿನ ವ್ಯಾಪ್ತಿಯಲ್ಲಿ ಬರುತ್ತದೆ ಅದನ್ನು ಆಯ್ಕೆ ಮಾಡಿಕೊಳ್ಳಬೇಕು. Get Report ವರದಿ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ : ನಿಮಗೆ ಗೊತ್ತಿಲ್ಲದೆ ನಿಮ್ಮ ಜಮೀನಿನ ಮೇಲೆ ಯಾರಾದರೂ ಸಾಲ ಪಡೆಯಲಾಗಿದೆಯೇ? ಇಲ್ಲೇ ಚೆಕ್ ಮಾಡಿ
ಆಗ ನಿಮಗೆ ಆಧಾರ್ ಕಾರ್ಡ್ ಸಂಖ್ಯೆ ಕೊನೆಯ ನಾಲ್ಕು ಅಂಕಿಗಳು ಕಾಣಿಸುತ್ತವೆ. ನಂತರ ನಮೂದು ಸಂಖ್ಯೆ, ನಿಮ್ಮ ಊರಿನ ಫಲಾನುಭವಿಗಳ ಹೆಸರುಗಳ ಪಟ್ಟಿ ಕಾಣಿಸುತ್ತದೆ. ಸರ್ವೆ ನಂಬರ್ ಹಿಸ್ಸಾನಂಬರ್ ಕಾಣಿಸುತ್ತದೆ. ಇದರೊಂದಿಗೆ ನೀವು ಯಾವ ಬೆಳೆಗೆ ಪರಿಹಾರ ಹಣ ಪಡೆಯುತ್ತಿದ್ದೀರಿ ಎಂಬ ಬೆಳೆಯ ಹೆಸರು ಕಾಣಿಸುತ್ತದೆ. ಇದರೊಂದಿಗೆ ನಿಮ್ಮ ಬೆಳೆ ಮಳೆಯಾಶ್ರಿತವೋ ಅಥವಾ ನೀರಾವರಿ ಬೆಳೆಯೋ ಎಂಬ ಮಾಹಿತಿ ಕಾಣಿಸುವುದು. ಇದಾದ ನಂತರ ಬೆಳೆ ನಷ್ಟವಾದ ವಿಸ್ತೀರ್ಣ ಅಂದರೆ ಎಷ್ಟು ಎಕರೆಗೆ ಪರಿಹಾರ ಹಣ ಜಮೆಯಾಗಿದೆ ಹಾಗೂ ಹಣ ಸಂದಾಯದ ಸ್ಥಿತಿ ಅಂದರೆ ನಿಮಗೆ ಹಣ ಜಮೆಯಾಗಿದೆಯೋ ಅಥವಾ ತಡೆಹಿಡಿಯಲಾಗಿದೆಯೋ ಎಂಬ ಮಾಹಿತಿ ಕಾಣಿಸುವುದು. ನಂತರ ಯಾವ ಯಾವ ಯಾವ ದಿನಾಕದಂದು ಎಷ್ಟು ಕಂತುಗಳು ಹಣ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ. ಕೊನೆಗೆ ನಿಮಗೆಷ್ಟು ಹಣ ಜಮೆಯಾಗಿದೆ ಎಂಬ ಮಾಹಿತಿ ಕಾಣಸಲಿದೆ.
ಯಾವ ಬೆಳೆಗೆ ಎಷ್ಟು ಬೆಳೆ ಹಾನಿ ಪರಿಹಾರ ಜಮೆ ನಿಮ್ಮೂರಿನಲ್ಲಿ ಯಾರು ಯಾರಿಗೆ ಎಷ್ಟು ಹಣ ಜಮೆ ಇಲ್ಲೇ ಚೆಕ್ ಮಾಡಿ
ಮಳೆಯಾಶ್ರಿತ ಪ್ರತಿ ಹೆಕ್ಟೇರ್ಗೆ 8,500 + 8,500 ಸೇರಿ 17,000 ರೂಪಾಯಿ, ನೀರಾವರಿ ಬೆಳೆಗಳಿಗೆ 17,000 + 8,500 ಸೇರಿ 25,500 ರೂಪಾಯಿ ಹಾಗೂ ಬಹು ವಾರ್ಷಿಕ ಬೆಳೆಗಳಿಗೆ 22,500 + 8,500 ಸೇರಿ 31,000 ರೂಪಾಯಿ ಪರಿಹಾರ ಸಿಗಲಿದೆ. ಕಂತಿನ ರೂಪದಲ್ಲಿ ಹಣ ಜಮೆಮಾಡಲಾಗುತ್ತಿದೆ.





