Parihara payment: Crop compensation ಬೆಳೆ ಹಾನಿಯಾದ ರೈತರ ಖಾತೆಗೆ 27.46 ಕೋಟಿ ರೂಪಾಯಿ ಬೆಳೆ ಹಾನಿ ಪರಿಹಾರ ಹಣವನ್ನು ಜಮೆ ಮಾಡಲಾಗಿದೆ. ಹೌದು, 2022-23 ನೇ ಸಾಲಿನ ಜೂನ್ ರಿಂದ ಆಗಸ್ಟ್ ತಿಂಗಳವರೆಗೆ ಸುರಿದ ಭಾರಿ ಮಳೆಯಿಂದಾಗಿ ಅಪಾರ ಬೆಳೆ ಹಾನಿಯಾಗಿತ್ತು. ಇದರಿಂದಾಗಿ ರೈತರು ಸಂಕಷ್ಟದಲ್ಲಿ ಸಿಲುಕಿದ್ದರು. ಮಳೆಯಿಂದಾಗಿ ಬೀದರ್ ಜಿಲ್ಲೆಯಲ್ಲಿ ಒಟ್ಟು 443559.1 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಪ್ರಸ್ತುತ ಬೆಳೆ ಹಾನಿ ಅನುಭವಿಸಿರುವ ಬೀದರ್ ಜಿಲ್ಲೆಯ ಒಟ್ಟು 31972 ರೈತರಿಗೆ 27.46 ಕೋಟಿ ರೂಪಾಯಿ ಬೆಳೆ ಹಾನಿ ಪರಿಹಾರ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ಬೀದರ್ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತಂತೆ ಜಿಲ್ಲಾಧಿಕಾರಿಯವರು ಪ್ರಕಟಣೆ ಹೊರಡಿಸಿದ್ದು, ಜಂಟಿ ಸಮೀಕ್ಷೆ ಮಾಡಿ ಬೆಳೆ ಹಾನಿಯಾದ ರೈತರ ವಿವರವನ್ನು ಪರಿಹಾರ ತಂತ್ರಾಂಶದಲ್ಲಿ ಅಳವಡಿಸಲಾಗಿದೆ. ಇನ್ನೂ ಬಾಕಿ ಉಳಿದಿರುವ ರೈತರ ಪರಿಹಾರ ಧನವನ್ನು ನೇರವಾಗಿಪರಿಹಾರ ತಂತ್ರಾಂಶದಿಂದ ರೈತರ ಖಾತೆಗೆ ವರ್ಗಾಯಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುವತ್ತದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 12541.51 ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಬೆಳೆ ಹಾನಿಯಾಗಿದ್ದು, ಹೆಚ್ಚುವರಿ ಬೆಳೆ ಹಾನಿಯಾದ ರೈತರ ಜಮೀನಿನ ಜಂಟಿ ಸಮೀಕ್ಷೆ ಚಾಲ್ತಿಯಲ್ಲಿದೆ. ಹಾಗೂ ಪರಿಹಾರ ತಂತ್ರಾಂಶದಲ್ಲಿ ರೈತರ ವಿವರ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ PM kisan ಅರ್ಹ ಮತ್ತು ಅನರ್ಹ ರೈತರ ಪಟ್ಟಿ ಬಿಡುಗಡೆ
ಜಿಲ್ಲೆಯಾದ್ಯಂತ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ರೈತರು ಅಪಾರ ಹಾನಿ ಅನುಭವಸಿದ್ದಾರೆ. ಸುಮಾರು 3 ಲಕ್ಷ ಹೆಕ್ಟೇರ್ ನಲ್ಲಿ ಬಿತ್ತನೆಯಾಗಿದ್ದ ಬೆಳೆಯ ಕೆಲವೆಡೆ ಶಂಖದ ಹುಳುವಿನ ಕಾಟದಿಂದಾಗಿ ಸಂಪೂರ್ಣ ಹಾನಿಗೊಳಗಾಗಿ ಎರಡೆರಡು ಬಾರಿ ಬಿತ್ತನೆ ಮಾಡಿದ್ದ ರೈತರಿಗೆ ಮುಂಗಾರು ಬೆಳೆ ಚಿಗುರೊಡೆಯುವುದರೊಳಗಾಗಿ ಅತೀವೃಷ್ಟಿಯ ಸಮಸ್ಯೆ ಭಾರಿ ಪ್ರಮಾಣದಲ್ಲಿ ಹಾನಿಯನ್ನುಂಟು ಮಾಡಿದೆ ಆದರೂ ಸಹ ಬೆಳೆಹಾನಿ ಕುರಿತಂತೆ ದಾಖಲಾಗಿದ್ದು ಮಾತ್ರ ಕೆಲವೇ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಎಂದಿದ್ದಾರೆ.
Parihara payment: Crop compensation ಬೆಳೆ ಹಾನಿಯಾದ ರೈತರು ಅರ್ಜಿ ಸಲ್ಲಿಸಿ
ಬೆಳೆ ಹಾನಿಯಾದ ರೈತರು ಒಂದು ವೇಳೆ ಹಾನಿಯಾಗಿರುವ ಕುರಿತು ಅರ್ಜಿ ಸಲ್ಲಿಸಬಿದ್ದರೆ ಕೂಡಲೇ ತಮ್ಮ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯತಿಯಲ್ಲಿ ದೂರು ನೀಡಬಹುದು. ನಿಮ್ಮ ಪಹಣಿ, ಆಧಾರ್ ನಂಬರ್, ಬ್ಯಾಂಕ್ ಪಾಸ್ ಬುಕ್ ನೊಂದಿಗೆ ಎಷ್ಟು ಪ್ರಮಾಣದಲ್ಲಿ ಬೆಳೆ ಹಾಳಾಗಿದೆ ಹಾಗೂ ಯಾವ ಬೆಳೆ ಹಾಳಾಗಿದೆ ಎಂಬುದನ್ನು ಅರ್ಜಿಯಲ್ಲಿ ನಮೂದಿಸಿ ಅರ್ಜಿ ಸಲ್ಲಿಸಬಹುದು. ಗ್ರಾಮ ಪಂಚಾಯತಿ ಅದಿಕಾರಿಗಳು ಅರ್ಜಿ ಸ್ವೀಕರಿಸಿ ಪರಿಹಾರ ತಂತ್ರಾಂಶದಲ್ಲಿ ರೈತರ ದಾಖಲೆಗಳನ್ನು ಸಲ್ಲಿಸುತ್ತಾರೆ. ಪರಿಹಾರ ತಂತ್ರಾಂಶದಲ್ಲಿ ರೈತರ ವಿವರಗಳನ್ನು ಅಳವಡಿಸಿದ ನಂತರವೇ ರೈತರಿಗೆ ಪರಿಹಾರ ಹಣ ಜಮೆಯಾಗುತ್ತದೆ.
ಪರಿಹಾರ ತಂತ್ರಾಂಶದಲ್ಲಿ ನಿಮ್ಮ ಹೆಸರು ನೋಂದಾಯಿತವಾಗಿದೆಯೇ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು ರೈತರು ಅರ್ಜಿ ಸಲ್ಲಿಸಿದ ನಂತರ ತಮ್ಮ ಹೆಸರು ನೋಂದಾಯಿತವಾಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ರೈತರು ಈ
https://landrecords.karnataka.gov.in/PariharaPayment/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪರಿಹಾರ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಆಧಾರ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಬೇಕು. ಸೆಲೆಕ್ಟ್ ಕಾಲಾಮಿಟಿ ಟೈಪ್ ನಲ್ಲಿ ಫ್ಲಡ್ ಹಾಗೂ ಸೆಲೆಕ್ಟ್ ಇಯರ್ ಟೈಪ್ ನಲ್ಲಿ 2022-23 ಆಯ್ಕೆ ಮಾಡಿಕೊಳ್ಳಬೇಕು. ನಂತರ ಆಧಾರ್ ಕಾರ್ಡ್ ಸಂಖ್ಯೆ, ಕ್ಯಾಪ್ಚ್ಯಾ ಕೋಡ್ ನಮೂದಿಸಿದ ನಂತರ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಬೇಕು. ಆಗ ಪರಿಹಾರ ಪೇಮೆಂಟ್ ರಿಪೋರ್ಟ್ ನಲ್ಲಿ ನಿಮ್ಮ ಸರ್ವೆ ನಂಬರ್, ಯಾವ ಬೆಳೆ ಹಾಗೂ ಎಕರೆ ಬೆಳೆ ಹಾನಿಯಾಗಿರುವ ಕುರಿತು ಮಾಹಿತಿ ಕಾಣುತ್ತದೆ. ಒಂದು ವೇಳೆ ಪರಿಹಾರ ಪೇಮೆಂಟ್ ಜಮೆಯಾಗಿದ್ದರೆ ತಕ್ಷಣ ಕಾಣುವುದಿಲ್ಲ. ಯಾವ ಬೆಳೆಗೆ ಯಾವ ಸರ್ವೆ ನಂಬರಿಗೆ ನಿಮಗೆ ಪರಿಹಾರ ಹಣ ಜಮೆಯಾಗಿದೆ ಎಂಬ ಮಾಹಿತಿ ಸಿಗುತ್ತದೆ.