ಈ ರೈತರಿಗೆ ಮಾತ್ರ ಬೆಳೆ ವಿಮೆ ಜಮೆಯಾಗಲಿದೆ

Written by Ramlinganna

Published on:

Only these farmers will get crop insurance : ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ ರೈತರಿಗೆ ಮಾತ್ರ ಬೆಳೆ ವಿಮೆಯ ಹಣ ಜಮೆಯಾಗುತ್ತದೆ. ಹೌದು, ಅಕಾಲಿಕ ಮಳೆ, ಪ್ರವಾಹ, ಅತೀವೃಷ್ಟಿ, ಅನಾವೃಷ್ಟಿಯಿಂದಾಗಿ ಬೆಳೆ ಹಾಳಾದರೆ  ರೈತರಿಗೆ ಬೆಳೆ ವಿಮೆ ಹಣ ಜಮೆಯಾಗುತ್ತದೆ.

ಹೌದು, ರೈತರಿಗಾಗಿ ಜಾರಿಗೆ ತಂದಿರುವ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಲಾಭವನ್ನು ಇತ್ತೀಚೆಗೆ ಹೆಚ್ಚಿನ ರೈತರು ಪಡೆಯುತ್ತಿದ್ದಾರೆ. ಇನ್ನೂ ನೀವು ಬೆಳೆ ವಿಮೆ ಮಾಡಿಸಿಲ್ಲವೇ? ಬೆಳೆ ವಿಮೆ ಏಕೆ ಮಾಡಿಸಬೇಕು? ಬೆಳೆ ವಿಮೆ ಮಾಡಿಸುವುದರಿಂದ ರೈತರಿಗಾಗುವ ಪ್ರಯೋಜನದ ಮಾಹಿತಿ ಇಲ್ಲಿದೆ.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಎಂದರೇನು?

2016 ರಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ.  ರೈತರಿಗೆ ದೇಶಾದ್ಯಂತ ಕಡಿಮೆ ಏಕರೂಪದ ಪ್ರಿಮಿಯಂನಲ್ಲಿ ನಷ್ಟ ಪರಿಹಾರ ಒದಗಿಸುವ ಯೋಜನೆ ಇದಾಗಿದೆ.  ಬಿತ್ತನೆಯಿಂದ ಹಿಡಿದು ರಾಶಿಯಾಗುವವರೆಗೂ ವಿಮಾ ವ್ಯಾಪ್ತಿಯಿರುತ್ತದೆ.

Only these farmers will get crop insurance ರೈತರಿಗೆ ಬೆಳೆ ವಿಮೆ ಹಣ ಯಾವಾಗ ಬರುತ್ತದೆ?

ಸ್ಥಳೀಯ ವಿಪತ್ತುಗಳಿಂದ ಉಂಡಾಗುವ ವೈಯಕ್ತಿಕ ಜಮೀನು ನಷ್ಟಗಳು, ಅತೀವೃಷ್ಟಿ, ಅನಾವೃಷ್ಟಿ, ಪ್ರವಾಹ, ಅಕಾಲಿಕ ಮಳೆ, ನೈಸರ್ಗಿಕ ಬೆಂಕಿಯಂತಹ ಅಪಾಯಗಳಿಂದ ಬೆಳೆ ಹಾಳಾದರೆ ರೈತರಿಗೆ ಬೆಳೆ ವಿಮೆ ಹಣ ಜಮೆಯಾಗುತ್ತದೆ.

Crop Insurance money released ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗಬಹುದು?

ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿದ ರೈತರು ತಮಗೆ ಷ್ಟು ವಿಮೆ ಹಣ ಜಮೆಯಾಗಬಹುದು ಎಂಬುದನ್ನು ಚೆಕ್ ಮಾಡಲು ಈ

https://samrakshane.karnataka.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನೀವು ಋತು ಆಯ್ಕೆಯಲ್ಲಿ ಖಾರೀಫ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಚೆಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ಪ್ರೋಪೋಸಲ್ ಸಂಖ್ಯೆ, ಮೊಬೈಲ್ ನಂಬರ್ ಕೊನೆಯ ಮೂರು ಅಂಕಿಗಳು, ನಿಮ್ಮ ಹೆಸರು, ವಿಮಾ ಕಂಪನಿಯ ಅರ್ಜಿ ಸ್ಥಿತಿ ಹಾಗೂ ಕೊನೆಯಲ್ಲಿ ಸೆಲೆಕ್ಟ್ Select ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ಇನ್ನೊಂದು ಪೇಜ್ ಕಾಣಿಸುತ್ತದೆ. ಅಲ್ಲಿ ವೀವ್ ಡಿಟೇಲ್ View Details ಮೇಲೆ ಕ್ಲಿಕ್ ಮಾಡಿ ಚೆಕ್ ಮಾಡಬಹುದು.

ಬೆಳೆ ವಿಮೆ ಪಾವತಿಸಲು ಈ ದಾಖಲೆ ಇರಬೇಕು?

ರೈತರು ಬೆಳೆ ವಿಮೆ ಮಾಡಿಸಲು ತಮ್ಮ ಬಳಿ ಜಮೀನಿನ ಪಹಣಿ ಇರಬೇಕು.ಬ್ಯಾಂಕ್ ಪಾಸು ಬುಕ್ ಝರಾಕ್ಸ್ ಪ್ರತಿ ಇರಬೇಕು. ಆಧಾರ್ ಕಾರ್ಡ್ ಕಡ್ಡಾಯವಾಗಿದೆ.

ಇದನ್ನೂ ಓದಿ ಅನ್ನಭಾಗ್ಯದ ಹಣ ನಿಮಗೆಷ್ಚು ಜಮೆ ಆಗಿದೆ? ಚೆಕ್ ಮಾಡಿ

ಬೆಳೆ ವಿಮಾ ಕಂಪನಿಯ ಸಹಾಯವಾಣಿ

ಕಳೆದ ಸಾಲಿನಲ್ಲಿ ಬೆಳೆ ವಿಮೆ ಮಾಡಿಸಿದ ರೈತರ ಬೆಳೆ ವಿಮೆ ಹಣ ಯಾವ ಕಾರಣಕ್ಕಾಗಿ ತಡೆಹಿಡಿಯಲಾಗಿದೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ರೈತರು ಬೆಳೆ ವಿಮೆ ಉಚಿತ ಸಹಾಯವಾಣಿಗೆ ಕರೆ ಮಾಡಬಹುದು. ರೈತರು 1800 180 1551 ಗೆ ಕರೆ ಮಾಡಿ ಬೆಳೆ ವಿಮೆ ಮಾಹಿತಿ ಪಡೆಯಬಹುದು. ಇನ್ನೂ ಹೆೆೆೆೆೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು

Leave a Comment