Northeast monsoon rain alert ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಪರಿಣಾಮದಿಂದಾಗಿ ರಾಜ್ಯದಲ್ಲಿ ಅಕ್ಟೋಬರ್ 30 ಹಾಗೂ 31 ರಂದು ಮಳೆಯಾಗುವ ಸಾಧ್ಯತೆಯಿರುವುದರಿಂದ ರಾಜ್ಯದ 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಸಲಾಗಿದೆ.
ದೇಶದ ಕೃಷಿ ಕ್ಷೇತ್ರದ ಜೀವನಾಡಿಯಾಗಿರುವ ಮುಂಗಾರು ಮಳೆ ಅಕ್ಟೋಬರ್ 26 ರಂದು (ನೈರುತ್ಯ ಮಾರುತ) ಅವಧಿ ಮುಗಿದಿದ್ದು, ಈಗ ಹಿಂಗಾರು ಮಳೆ ಆರಂಭವಾಗಿದೆ. ದೇಶದ ಬಹುತೇಕ ಭಾಗಗಳಲ್ಲಿ ಮಳೆಯ ಚಟುವಟಿಕೆ ಗಮನಾರ್ಹವಾಗಿ ಇಳಿಕೆ ಕಂಡಿದೆ.
Northeast monsoon rain alert ಅಕ್ಟೋಬರ್ 30 ಹಾಗೂ 31 ರಂದು ಭಾರಿ ಮಳೆ ಸಾಧ್ಯತೆ
ಜೂನ್ ತಿಂಗಳಲ್ಲಿ ಆರಂಭವಾಗುವ ಮುಂಗಾರು ಮಾರುತಗಳು ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳಲ್ಲಿ ನಿರ್ಗಮಿಸಲು ಆರಂಭಿಸುತ್ತವೆ. ಆದರೆ ಈ ವರ್ಷ ಅಕ್ಟೋಬರ್ 25ರವರೆಗೂ ಮಾರುತಗಳು ಇದ್ದವು. ಜೂನ್ 3 ರಂದು ದೇಶಕ್ಕೆ ಪ್ರವೇಶಿಸಿದ್ದ ಮುಂಗಾರು ನಾಲ್ಕು ತಿಂಗಳ ಅವಧಿಯಲ್ಲಿ ಸಾಮಾನ್ಯ ಪ್ರಮಾಣ ಮಳೆಯನ್ನು ಸುರಿಸಿದೆ. ನೈರುತ್ಯ ಮುಂಗಾರಿನಿಂದ ಕಳೆದ ಎರಡು ವಾರಗಳಲ್ಲಿ ರಾಜ್ಯದ ಅಲ್ಲಲ್ಲಿ ಉತ್ತಮ ಮಳೆಯಾಗಿತ್ತು. ಹಿಂಗಾರು ಮಾರುತಗಳು ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಇರಲಿದೆ. ಈ ವರ್ಷ ಹಿಂಗಾರಿನಲ್ಲಿ ಸಾಮಾನ್ಯ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹಾಸನ, ರಾಮನಗರ, ಮಂಡ್ಯ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಅಕ್ಟೋಬರ್ 30 ಮತ್ತು 31 ರಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ಕೋಲಾರದಲ್ಲಿ ಅಕ್ಟೋಬರ್ 31 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಾಗಲಕೋಟೆ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ.
ಇದನ್ನೂ ಓದಿ : ಮೊಬೈಲ್ ನಲ್ಲಿಯೇ ಓರಿಜಿನಲ್ ಪಹಣಿ (Pahani) ಡೋನ್ಲೋಡ್ ಮಾಡಿಕೊಳ್ಳಬೇಕೇ…. ಇಲ್ಲಿದೆ ಸಂಪೂರ್ಣ ಮಾಹಿತಿ
ಕಳೆದೆರಡು ದಿನಗಳಲ್ಲಿ ತುಮಕೂರು, ಕೋಲಾರ, ಮಂಡ್ಯ, ಗದಗ, ಚಿಕ್ಕಬಳ್ಳಾಪುರ, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ವಿವಿಧೆಡೆ ಮಳೆಯಾಗಿದೆ. ಕೆಲವೆಡೆ ಗುಡುಗು ಮಿಂಚಿನ ಮಳೆಯಾದರೆ, ಇನ್ನೂ ಕೆಲವು ಕಡೆ ಸಾಧಾರಣ ಮಳೆಯಾಗಿದೆ.
ನಿಮ್ಮೂರಿನ ಮಳೆಯ ಮಾಹಿತಿ ಬೇಕೆ? ಈ ನಂಬರಿಗೆ ಕರೆ ಮಾಡಿ
ನಿಮ್ಮೂರಿನಲ್ಲಿ ಮಳೆ ಆಗುತ್ತೋ ಇಲ್ಲವೋ ಎಂಬ ಮಾಹಿತಿ ಪಡೆಯಲು ವರುಣಮಿತ್ರ ಉಚಿತ ಸಹಾಯವಾಣಿ ನಂಬರ್ 92433 45433 ಗೆ ಕರೆ ಮಾಡಬೇಕು. ಆಗ ನಿಮಗೆ ನಿಮ್ಮೂರಿನ ಸುತ್ತಮುತ್ತ ಯಾವಾಗ ಮಳೆ ಆಗುತ್ತದೆ ಎಂಬ ಮಾಹಿತಿ ಸಿಗುತ್ತದೆ. ಈ ಉಚಿತ ಸಹಾಯವಾಣಿ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ರೈತರು ಮನೆಯಿಂದ ಯಾವಾಗ ಬೇಕಾದರೂ ಕರೆ ಮಾಡಿ ಮಳೆಯ ಮಾಹಿತಿ ಪಡೆಯಬಹುದು.
ಇನ್ನೇಕೆ ತಡ ನಿಮ್ಮೂರಿನಲ್ಲಿ ಮಳೆಯಾಗುತ್ತೋ ಇಲ್ಲವೋ ಎಂಬುದನ್ನು ಈಗಲೇ ಕರೆ ಮಾಡಿ ತಿಳಿದುಕೊಳ್ಳಬಹುದು.